ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನ ಆಚರಣೆ

ಕೆ.ಆರ್.ಪೇಟೆ.ಡಿ.26: ದೇಶದ ಒಂಭತ್ತು ಕೋಟಿ ಜನರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 18 ಸಾವಿರ ಕೋಟಿ ಹಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಜಾತಶತೃ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನದ ಅಂಗವಾಗಿ ಇಂದು ಬಿಡುಗಡೆಗೊಳಿಸುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿನಾರಾಯಣಗೌಡ ತಿಳಿಸಿದರು.
ಪಟ್ಟಣದ ತಮ್ಮ ನಿವಾಸದ ಆವರಣದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಹುಟ್ಟು ಹಬ್ಬವನ್ನು ರಾಜ್ಯದ ಪೌರಾಡಳಿತ ರೇಷ್ಮೆ ಮತ್ತು ತೋಟಗಾರಿಕೆ ಹಾಗು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡರು ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಿ ನಂತರ ಮಾತನಾಡಿದ ಸಚಿವರು ವಾಜಪೇಯಿಯವರು ದೇಶ ಕಂಡಂತಹ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅವರ ಆದರ್ಶಗಳು ನಮಗೆ ದಾರಿ ದೀಪವಾಗಿವೆ ಅವುಗಳನ್ನು ಪಾಲಿಸಿಕೊಂಡು ಅವರು ನಡೆದು ಬಂದ ದಾರಿಯಲ್ಲಿ ನಾವುಗಳು ಸಾಗಬೇಕಾಗಿದೆ ಇಂತಹ ಮಾಹಾನ್ ವ್ಯಕ್ತಿಯ ಹುಟ್ಟು ಹಬ್ಬ ಆಚರಿಸುತ್ತಿರುವುದು ತುಂಬ ಸಂತೋಷವಾಗುತ್ತಿದೆ ಎಂದರು.
ಬಿಜೆಪಿ ಪಕ್ಷವನ್ನು ದೇಶದಲ್ಲಿ ಕಟ್ಟಿ ಬೆಳೆಸಿದವರಲ್ಲಿ ವಾಜಪೇಯಿವರ ಕೊಡುಗೆ ಅಪಾರವಾಗಿದ್ದು ಅಟಲ್ ಕಾಲದ ಯೋಜನೆಗಳು ಇಂದು ಜನಮಾನಸದಲ್ಲಿ ಹಸಿರಾಗಿ ಉಳಿದಿವೆ, ದೇಶ ಮುಂದಿನ ನೂರು ವರ್ಷಗಳ ಕಲ್ಪನೆಯನ್ನು ಆಧರಿಸಿ ಯೋಜನೆಗಳನ್ನು ರೂಪಿಸುತ್ತಿದ್ದ ವಾಜಪೇಯಿಯವರ ಕಲ್ಪನೆ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಿದೆ. ಇಂಥಹ ಮಹಾನ್ ನಾಯಕನನ್ನು ಕಂಡ ನಮ್ಮ ದೇಶ ಧನ್ಯ. ಅಟಲ್ ರವರ ಮಾದರಿಯಲ್ಲಿಯೇ ದೇಶವನ್ನು ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಅಟಲ್ ರವರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಚಂದಗಾಲು ಶಿವಣ್ಣ, ಸಚಿವರ ಧರ್ಮಪತ್ನಿ ದೇವಕಿನಾರಾಯಣಗೌಡ, ತಾ.ಬಿಜೆಪಿ ಅಧ್ಯಕ್ಷ ಪರಮೇಶ್, ಪ್ರಮೀಳಾ ವರದರಾಜೇಗೌಡ,ಲತಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.