ಅಟಲ್‍ಬಿಹಾರಿ ವಾಜಪೇಯಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.22:ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಸದೃಢ ಶರೀರದಲ್ಲಿ ಸದೃಢ ಮನಸ್ಸು ಎಂಬಂತೆ ಮಕ್ಕಳು ಯೋಗ, ಧ್ಯಾನ ಮತ್ತು ಹಲವಾರು ಆಸನಗಳ ಮೂಲಕ ಜಾಗೃತಿಯನ್ನು ಮೂಡಿಸಿದರು.
ಯೋಗವು ನಮ್ಮ ಮನಸ್ಸು ಮತ್ತು ದೇಹ ಶುಧ್ದತೆಗೆ ಸಹಾಯ ಮಾಡುತ್ತದೆ ಮತ್ತು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
ಈ ದಿನದ ಅಂಗವಾಗಿ ಶಾಲೆಯಲ್ಲಿ ಮಕ್ಕಳು ಹಲವಾರು ಆಸನಗಳು ಧ್ಯಾನ ಮತ್ತು ಭಾಷಣದಿಂದ ಕಾರ್ಯಕ್ರಮ ಮೆರಗುಗೊಳಿಸಿದರು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಸಂಸ್ಥೆಯ ಶಾಲಾ ನಾಮನಿರ್ದೇಶಿತ ಚೇರಮನ್ ಬಸವರಾಜ ಸುಗೂರ, ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಮ್. ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ ಮತ್ತು ನಿರ್ದೇಶಕರಾದ ಸುಧೀರ ಚಿಂಚಲಿ, ನಾಗಪ್ಪ ಗುಗ್ಗರಿ, ಮಡಿವಾಳಪ್ಪ ಕರಡಿ ಹಾಗೂ ಶಾಲಾ ಆಡಳಿತಾಧಿಕಾರಿ ಡಾ. ಎಚ್ ವೆಂಕಟೇಶ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ ಇದ್ದರು.