ಅಝಾದ್ ಕೋ-ಆಪ್ ಬ್ಯಾಂಕಿನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಹುಬ್ಬಳ್ಳಿ ನ 6 – ನಗರದ ಸ್ಟೇಷನ್ ರಸ್ತೆಯ ದಿ. ಅಝಾದ್ ಅರ್ಬನ್ ಕೋ-ಆಫ್ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ನ. 5 ರಂದು ಎಸ್.ವಿ.ಪಾಂಡುರಂಗಿ ರಿಟರ್ನೀಂಗ್ ಅಧಿಕಾರಿಯವರ ನೇತೃತ್ವದಲ್ಲಿ ಚುನಾವಣೆ ಜರುಗಿತು.
ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರುಗಳು ಸಾಮಾನ್ಯ ಸ್ಥಾನಕ್ಕೆ ಎನ್.ಎಂ. ಹಿಂಡಸಗೇರಿ, ಎ.ಎ.ಅತ್ತಾರ, ಎ.ಎಂ. ಮುಜಾವದ್, ಎಮ್.ಎಮ್. ಶಿರೂರ್, ಎಂ.ಐ.ಸುಂಡಕೆ, ಎ.ಡಿ.ಹೆಬ್ಬಳ್ಳಿ,. ಪರಿಶಿಷ್ಟ ಜಾತಿ : ಅರ್.ಬಿ.ಕಮ್ಮಾರ, ಪರಿಶಿಷ್ಟ ಪಂಗಡ : ಉಮಾ ಆರ್. ತಲವಾರ್, ಮಹಿಳಾ ಮೀಸಲು ಸ್ಥಾನಕ್ಕೆ ಶ್ರೀಮತಿ ಎಚ್.ಎಂ.ಮುಲ್ಲಾ, ಶ್ರೀಮತಿ ಎಸ್.ಡಬ್ಲ್ಯೂ. ಪಲ್ಲಾನ್, ಹಿಂದುಳಿದ ವರ್ಗ ಎ ಮತ್ತು ಬಿ ಮೀಸಲು ಸ್ಥಾನ. ಎನ್.ಎಂ.ಚುಲಬುಲ್, ಎ.ಎ.ಜವಳಿ ಅವರು ಬ್ಯಾಂಕಿನ ಚುನಾವಣೆಗೆ ಸದಸ್ಯರಾಗಿ ಚುನಾಯಿತರಾದರು.
ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ ಅವರ ನೇತೃತ್ವದಲ್ಲಿ ಅವರ ಗುಂಪಿನ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
ಅಲ್ಲದೇ ಈ ಸಂದರ್ಭದಲ್ಲಿ ಚುನಾಯಿತ ನೂತನ ಸದಸ್ಯರುಗಳಿಗೆ ಬ್ಯಾಂಕಿನ ವತಿಯಿಂದ ಸತ್ಕರಿಸಲಾಯಿತು. ಪ್ರಮುಖರಾದ ಎ.ಎಂ. ಹಿಂಡಸಗೇರಿ, ಎಚ್.ಕೆ.ಪಾಟೀಲ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಎಂ.ಎ. ನಾಲಬಂದ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.