ಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗಬೇಕು

ಗೋಕಾಕ,ಏ15 :`ಸತ್ಯ, ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ ಮತ್ತು ಸದ್ಗುಣಗಳನ್ನು ಬೆಳೆಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದುಜಗದ್ಗುರು ಶ್ರೀಶಿವಲಿಂಗೇಶ್ವರ ಕುಮಾರೇಂದ್ರ ನುಡಿದರು.
ಹಿಂದು ಮುಸ್ಲಿಂ ಸೌಹಾರ್ದತೆಯ ಸುಕ್ಷೇತ್ರ ಸಾವಳಗಿಯ ಸಿದ್ಧ ಸಂಸ್ಥಾನ ಪೀಠದಲ್ಲಿಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಶಿವಲಿಂಗೇಶ್ವರ ಪುರಾಣಕಾರ್ಯಕ್ರಮ ಮತ್ತು ಸಾಹಿತ್ಯ, ಸಂಸ್ಕøತಿ ಸೌರಭಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು ಮನುಷ್ಯತನ್ನಕರ್ಮ ಮತ್ತುಅಜ್ಞಾನವನ್ನು ಬಿಟ್ಟು ಸುಜ್ಞಾನದತ್ತ ಸಾಗಬೇಕು ಎಂದರು.
ನುಡಿದಂತೆ ನಡೆಯಬೇಕು.ಪರಮಾತ್ಮನನ್ನು ನಿಜಭಕ್ತಿಯಿಂದಧ್ಯಾನಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನ ಪ್ರಾಪ್ತಿಗೊಳಿಸಿಕೊಳ್ಳಬೇಕು ಎಂದರು.
ಗದಗದ ವೇದಮೂರ್ತಿಚನ್ನವೀರಯ್ಯಸ್ವಾಮಿಅವರು ಶ್ರೀ ಶಿವಲಿಂಗೇಶ್ವರ ಪುರಾಣವನ್ನು ಹೇಳಿದರು.
ವೀರೇಶಕಿತ್ತೂರ ಭಕ್ತಿಯಗಾಯನ ಮಾಡಿದರು.ಮಲ್ಲಿಕಾರ್ಜುನ ಹರತಿ ಶಹನಾಯಿ, ರಾಘವೇಂದ್ರ ಕೃಷ್ಣಾ ಕೊಳಲು ನುಡಿಸಿದರು.ಗದಗದ ಶಾಮರಾವ ಪುಲಾರೆ ಮತ್ತುಗೋಕಾಕದ ವಿಜಯದೊಡ್ಡಣ್ಣವರತಬಲಾ ಸಾಥ ನೀಡಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು.