ಅಜ್ಞಾನದ ನಡುವೆ ಧರ್ಮ ಸಂಕಷ್ಟದಲ್ಲಿದೆ: ಮಹಾಂತಶ್ರೀ

ಕಲಬುರಗಿ,ಮಾ,20:ಪ್ರಸಕ್ತ ದಿನಗಳಲ್ಲಿ ನಾವೂ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು, ಸದಾ ಒತ್ತಡ, ಅಸಂತುಷ್ಟ ವಾತಾವರಣದಲ್ಲಿಯೇ ಬದುಕು ಶರಣರ ಸಾಗಿಸುತ್ತಿದ್ದೇವೆ, ಇದಕ್ಕೆಲ್ಲ ಪ್ರಮುಖ ಕಾರಣ ಚಿಂತನೆಗಳನ್ನು ಚಿಂತನೆಗಳನ್ನು. ಅರಿಯದಿರುವುದು, ಪರಿಣಾಮ ಅಜ್ಞಾನದ ನಡುವೆ ಧರ್ಮ ಸಂಕಷ್ಟ ಎದುರಿಸುತ್ತಿದೆ ಎಂದು ಮುದುಗಲ್ ಕಲ್ಯಾಣಾಶ್ರಮ ಮಹಾಂತೇಶ್ವರದ ಮಠದ ತಿಮ್ಮಾಪೂರದ ಪ್ರವಚನಯೋಗಿ ಮಹಾಂತ ಮಹಾಸ್ವಾಮಿಜಿ ಆತಂಕ ವ್ಯಕ್ತಪಡಿಸಿದರು.ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಜಾತ್ರಾ ಮಹೋತ್ಸವ ಮತ್ತು ಶ್ರೀಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತ ನವರ ಘನ ಅಧ್ಯಕ್ಷತೆಯಲ್ಲಿ ಭವ್ಯ ರಥೋತ್ಸವ ಜರುಗಿತು.
ಇಲ್ಲಿಗೆ ಸಮೀಪದ ಸೂಗೂರ. ಎನ್ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭೋಜಲಿಂಗೇಶ್ವರ 29ನೇ ವರ್ಷದ ಜಾತ್ರೆಯ ರೆಥೋತ್ಸವ ನಂತರ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಅವರು, ಈ ಜಗತ್ತಿಗೆ ಎಲ್ಲಾ ಧರ್ಮಗಳ ಸಂದೇಶಗಳು ಒಂದೇ ಆಗಿವೆ. ಸಮಾಜದಲ್ಲಿ ಎಲ್ಲರೂ ಅರಿವು, ಪ್ರೀತಿ, ವಿಶ್ವಾಸ, ಸಾಮರಸ್ಯ ಸಹಭಾಳ್ವೆಯಿಂದ ಬಾಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ಉದ್ದೇಶವಾಗಿದೆ ಎಂದು ನುಡಿದರು. ಈ ಭರತ ಭೂಮಿ ಪವಿತ್ರ ಸಾಧು, ಸೂಫಿ ಸಂತರ ನಾಡಾಗಿದೆ. ಅನಾದಿ ಕಾಲದಿಂದ ಮಹಾತ್ಮರು ತಮ್ಮ ಆಧ್ಯಾತ್ಮಿಕ ಸಾಧನೆ ಶಕ್ತಿಯಿಂದ ಕಾಲ ಕಾಲಕ್ಕೆ ಆಯಾ ಭಾಗಗಳಲ್ಲಿ ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ಮೂಲಕ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರಲ್ಲಿ ಒಬ್ಬರು ಭೋಜಲಿಂಗೇಶ್ವರರು ಲೋಕ ಕಲ್ಯಾಣಕ್ಕಾಗಿ ಹಲವಾರು ಪವಾಡಗಳ ಮೂಲಕ ಸಮಾಜಕ್ಕೆ ಮಾನವೀಯ ಸಂದೇಶಗಳನ್ನು ನೀಡಿದ್ದಾರೆ. ನಾವೇಲ್ಲರೂ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಧೃಢ ಸಮಾಜ ಕಟ್ಟುವ ಮೂಲಕ ನಾಡಿನ ಪ್ರಗತಿಗೆ ಎಲ್ಲರೂ ತಮ್ಮದೇ ಆದ ಕೊಡುಗೆ ನೀಡುವುದು ಅವಶ್ಯಕವಾಗಿದೆ ಎಂದು ಸಲಹೆ ನೀಡಿದರು. ಸಮಾಜದಲ್ಲಿ ಇಂದು ನಾವು ಬೋಧನೆ ಮಾಡುವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ. ಆದರೆ ಹಲವು ಮಹಾತ್ಮರು ಮಾತ್ರ ಅರಿವು, ಆಚಾರ-ವಿಚಾರಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುವ ಮೂಲಕ ಸಮಾಜದಲ್ಲಿ ಎಲ್ಲಾ ವರ್ಗದ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಈ ಸೃಷ್ಟಿಯಲ್ಲಿ ಯೋಗ ಬದುಕಿನಲ್ಲಿ ಭೋಗವಾಗಿ ಬರಬೇಕು, ಅದನ್ನು ನಾವೂ ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಸಾಕ್ಷೀಯೇ ಇಲ್ಲಿ ನೆರೆದಿರುವ ಸಹಸ್ರಾರು ಭಕ್ತರು. ಇಂದು ನಾವೂ ಹಲವಾರು ಆಸೆ-ಆಕಾಂಕ್ಷೆಗಳ ಬೆನ್ನತ್ತಿ ನಮ್ಮಲ್ಲಿರುವ ಮಾನವ ಸಂಪನ್ಮೂಲ ಶಕ್ತಿ ಕಳೆದುಕೊಳ್ಳುತ್ತಿದ್ದೇವೆ. ಕಾರಣ ನಿಮಗೆ ಭಗವಂತ ದೈವದತ್ತವಾಗಿ ನೀಡಿರುವ ಕ್ಷೇತ್ರದಲ್ಲಿ ಆಸಕ್ತಿ, ಪರಿಶ್ರಮದಿಂದ ಕೆಲಸ ಮಾಡಬೇಕು. ಅದರಿಂದ ಮಾತ್ರ ನಿಮಗೆ ಆತ್ಮತೃಪ್ತಿ ಶಾಂತಿ, ಗೌರವ ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.ಸಮಾರಂಭದಲ್ಲಿ ನಿವೃತ್ತ ಎಸ್.ಪಿ ಎ.ಹೆಚ್ ಚಿಪ್ಪರ್ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷರಾದ ಡಾ. ಆನಂದ ಡಿ. ಹೇರೂರ ಅವರಿಗೆ ವೈದ್ಯ ಸೂಗೂರ ಶ್ರೀ ಸೇವಾ ಪ್ರಶಸ್ತಿ-2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈದ್ಯ ಪರಿಷತ್ ಅಧ್ಯಕ್ಷರಾದ ಡಾ. ಆನಂದ ಡಿ ಹೇರೂರ ಮಾತನಾಡಿ. ಈ ಹಿಂದೆ ನಮ್ಮ ಹಿರಿಯರು ನಿಸರ್ಗದಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಹಬ್ಬಗಳನ್ನು ವೈಜ್ಞಾನಿಕವಾಗಿ ಆಚರಿಸಿಕೊಂಡು ಬರುವ ಮೂಲಕ ಸದೃಢ ಆಹಾರ ಸೇವನೆ ಮಾಡುತ್ತಿದ್ದರು, ಆದರೆ ಇಂದು ನಾವೂ
ಸೇವಿಸುವ ಆಹಾರ ಪದಾರ್ಥಗಳಲ್ಲಿ ಸತ್ವ ಕಡಿಮೆ, ಬರುವ ದಿನಗಳಲ್ಲಿ ಶ್ರೀಮಠದಲ್ಲಿ ಭಕ್ತರಿಗಾಗಿ ಉಚಿತ ಆಯುರ್ವೇದ ಶಿಬಿರ ಹಮ್ಮಿಕೊಂಡರೇ ನಾನು 1 ಸಾವಿರಕ್ಕೂ ಹೆಚ್ಚು ಮನೆ ಮದ್ದುಗಳ ಬಳಕೆ. ಅದರ ಮಹತ್ವ ಕುರಿತು ವಿವರಿಸುತ್ತೇನೆ ಎಂದು ತಿಳಿಸಿದರು.
ಸಮಾರಂಭದ ನೇತೃತ್ವ ವಹಿಸಿದ ಶ್ರೀ ಮಠದ ಪೀಠಾಧಿಪತಿ ಹಿರಗಪ್ಪ ತಾತನವರು ಮಾತನಾಡಿ. ಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದಾರೆ. ಅವರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.ದಿವ್ಯ ಸಾನಿಧ್ಯವನ್ನು ಗಜೇಂದ್ರಗಡದ ಶಿವಯೋಗಿ ಡಾ. ಶರಣಬಸವ ಮಹಾಸ್ವಾಮಿಜಿ ವಹಿಸಿದ್ದರು. ಸಮಾರಂಭದಲ್ಲಿ ಮಠದ ಸೇವಾರ್ಥಿಗಳಾದ ಎಲ್‍ಐಸಿ ಈರಣ್ಣ ಬಲಕಲ್, ಬಸವರಾಜ ಹವಾಲ್ದಾರ್. ಸುರೇಶ ಕೋಟಿಮನಿ, ಎಸ್. ಎಸ್. ಜುಗೇರಿ, ನಾಗರತ್ನ ಕುಪ್ಪಿ, ಸೋಮಣ್ಣಗೌಡ ತುಮಕೂರು , ಗುತ್ತಿಗೆದಾರ ಮೋಹನ ರಾಠೋಡ್. ರಾಜು ಹತ್ತಿಕುಣಿ. ಶರಣಗೌಡ ಬೆನಕನಹಳ್ಳಿ ಸುಗೂರ ಎನ್. ಮಹೇಶರೆಡ್ಡಿ ಪಾಟೀಲ್ ಸೂಗೂರ, ಸಿದ್ರಾಮರಡ್ಡಿ ಚಿನ್ನಾಕಾರ, ಮಲ್ಲಿಕಾರ್ಜುನ ತಡಿಬಿಡಿ, ಮಹಾಂತೇಶ ಲಿಂಗಸೂಗುರ, ವಿಶ್ವನಾಥರೆಡ್ಡಿ ಪಾಟೀಲ್ ಸೂಗೂರ, ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ್ ಸುಗೂರ ಎನ್, ಶರಣ ಗೌಡ ವಕೀಲರು. ಮಹಿಪಾಲ್ ರೆಡ್ಡಿ ಕರಣಗಿ, ಶರಣಗೌಡ ತುಮಕೂರು . ಮಲ್ಲಯ್ಯ ಕಸಬಿ, ಸಾಬಣ್ಣ ಕೆಂಗೂರಿ, ಮಹೇಂದ್ರಗೌಡ ಅಳೋಳ್ಳಿ ಮಲ್ಲಿಕಾರ್ಜುನ ಕಿವಿಡೇರ್ ಬಂದಳ್ಳಿ, ಮಲ್ಲಿನಾಥ ಚಿನ್ನಾಪೆÇೀಟೊ ಸ್ಟೂಡಿಯೊ. ಪ್ರಭು ಹೂಗಾರ.ಮಹಾದೇವ ರೆಡ್ಡಿ ತುಮಕೂರು.ಕರಬಸಪ್ಪ ದಂಡಗಿ, ಬಸವರಾಜ ಹಡಪದ ಸುಗೂರ ಎನ್, ಲಾಲಾಸೇಠ ಚವ್ಹಾಣ,ಯಮನಪ್ಪ ತಳವಾರ,ಸುಖುದೇವ್ ಚವ್ಹಾಣ ,ಬಾಬು ಪಾಟೀಲ ,ಪ್ರವೀಣ್ ಪಾಟೀಲ ತುಮಕೂರು, ಸಿದ್ದು ಗೌಡ ಕುರಾಳ. ರಾಜೇಂದ್ರ ನಾಯ್ಕೊಡಿ, ರಾಜು ಚಿಗರಳ್ಳಿ, ಅನೀಲ ಚವ್ಹಾಣ, ಮಲ್ಲಿಕಾರ್ಜುನ ಬಿ ಹಡಪದ ಹಡಪದ ಸುಗೂರ ಎನ್. ಮತ್ತು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ಭೀಮ ರೆಡ್ಡಿ ಗೌಡ ಕುರಾಳ ಸುಗೂರ ಎನ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಂಕರಗೌಡ ಪಾಟೀಲ್ ನಿರೂಪಿಸಿ, ವಂದಿಸಿದರು. ನಂತರ ನಡೆದ ಹಾಸ್ಯ ಕಲಾವಿದರಾದ ಸಂಜು ಬಸಯ್ಯ ದಂಪತಿಗಳು ಹಾಗೂ ಅರ್ಜುನ್ ಇಟಗಿ ಅವರಿಂದ ರಸಮಂಜರಿ ಕಾರ್ಯಕ್ರಮ ಜನಮನ ಸೆಳೆಯಿತು.