ಅಜ್ಞಾನದ ಕತ್ತಲೆ ಸರಿಸಿ ಜ್ಞಾನದ ಮಾರ್ಗ ತೋರಿದ ಸಂತರು

ಹರಿಹರ.ಡಿ.೨೭;  ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿಗಳಾದ ಜಗದ್ಗುರು ವಚನಾನಂದ ಸ್ವಾಮೀಜಿಗಳು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ  ರಾಘವೇಶ್ವರ ಭಾರತೀ  ಮಹಾಸ್ವಾಮಿಗಳನ್ನು ಇಂದು ಭೇಟಿ ಮಾಡಿದರು. ಭೇಟಿ ಸಂದರ್ಭದಲ್ಲಿ ಉಭಯಕುಶಲೋಪರಿ ಜೊತೆಗೆ ಗೋಕರ್ಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪ್ರತಿಷ್ಠಿತ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ಪಡೆದರು ಮತ್ತು ವಿದ್ಯಾಪೀಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ  ವಿಶ್ವೇಶ್ವರ ಭಟ್ಟರು ಉಪಸ್ಥಿತರಿದ್ದರು. ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಪ್ಪಟ ಶ್ರೀರಾಮ ಭಕ್ತರು. ಅಧ್ಯಾತ್ಮದ ಹಾದಿಯಲ್ಲಿ ಅವರು ಹಲವು ಮೈಲುಗಲ್ಲುಗಳನ್ನು ಸೃಷ್ಟಿಸಿದ್ದಾರೆ. ಹಿಂದೂ ಧರ್ಮದಲ್ಲಿ ಅವರದ್ದು ಅಚಲ ನಿಷ್ಠೆ. ಅದು ವಜ್ರದಷ್ಟೇ ದೃಢ.  ಅಜ್ಞಾನದ ಕತ್ತಲೆಯನ್ನು ಸರಿಸಿ ಜ್ಞಾನದ ಮಾರ್ಗವನ್ನು  ತೋರುವುದೇ ಭಗವಂತನ ಕೃಪೆಗೆ ಇರುವ ಮಾರ್ಗ. ಇಲ್ಲಿ ನಮಗೆ ಜ್ಞಾನಜ್ಯೋತಿ ಬಸವಣ್ಣನವರ ಒಂದು ವಚನ ನೆನಪಾಗುತ್ತಿದೆ.” ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ ಎಲುತೋರಿದಡೆ ನರ ಹರಿದಡೆ ಕರುಳು ಕುಪ್ಪಳಿಸದಡೆ ನಾ ಧೃತಿಗೆಡೆನಯ್ಯಾ ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾ ಶರಣೆನ್ನುತ್ತಿದ್ದೀತಯ್ಯಾ.”  ರಾಘವೇಶ್ವರ ಭಾರತೀ  ಮಹಾಸ್ವಾಮಿಗಳು ಗೋಸಂರಕ್ಷಣಾ ಕಾರ್ಯದಲ್ಲಿ ಸಲ್ಲಿಸಿದ ಸೇವೆ ಅದ್ವಿತೀಯವಾದುದು. ರಾಜ್ಯ ಸರ್ಕಾರ ಗೋನಿಷೇಧ ಕಾಯಿದೆ ಜಾರಿಗೊಳಿಸುವಲ್ಲಿ   ಮಹಾಸ್ವಾಮಿಗಳ ಪಾತ್ರ ಬಹಳಷ್ಟಿದೆ.ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಜೊತೆ ಇದು ನಮ್ಮ ಮೂರನೇ ಭೇಟಿ. ಸುಮಾರು ಎರಡು ತಾಸುಗಳ ತನಕ ನಡೆದ ವಿಚಾರವಿನಿಮಯದಲ್ಲಿ ಹಲವು ಅಧ್ಯಾತ್ಮದ ವಿಷಯಗಳು ಚರ್ಚಿತವಾದುವು.