ಸೊರಬ.ಜು.5; ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರು ಪರಂಪರೆಯಲ್ಲಿ ಗುರುವಿಗೆ ವಿಶಿಷ್ಟವಾದ ಸ್ಥಾನವಿದೆ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ದಾರಿಯಲ್ಲಿ ನೆಡೆಯಲು ಗುರುವಿನ ಮಾರ್ಗದರ್ಶನ ಅಗತ್ಯ. ಎಂದು ಜಡೆ ಸಂಸ್ಥಾನ ಮಠದ ಹಾಗೂ ಸೊರಬ ಮುರುಘಾ ಮಠದ ಡಾ..ಮ.ನಿ.ಪ್ರ.ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಘಾ ಮಠದಲ್ಲಿ 211 ನೇ ಮಾಸಿಕ ಶಿವಾನುಭವ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಅಜ್ಞಾನವೆಂಬ ಅಂಧಕಾರವನ್ನು ಸುಜ್ಞಾನವೆಂಬ ಬೆಳಕಿನಿಂದ ದೂರ ಮಾಡಿ ಆಧ್ಯಾತ್ಮದ ಪ್ರಾಪಂಚಿಕ ಜ್ಞಾನದ ದೀವಿಗೆ ಕಡೆ ಕೊಂಡೊಯ್ಯುವ ಶಕ್ತಿ ಗುರುವಿನಿಂದ ಸಾಧ್ಯ ಎಂದ ಅವರು ಗುರು ಪರಂಪರೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ವಾದ ಮಹತ್ವವಿದೆ ವಚನಕಾರರು,ಶರಣರು, ದಾರ್ಶನಿಕರು ಸಮಾಜದಲ್ಲಿನ ಲೋಪ ದೋಷಗಳನ್ನು ನಿವಾರಣೆ ಮಾಡಲು ತಮ್ಮ ವಚನಗಳ ಮೂಲಕ ಮುನ್ನುಡಿ ಬರೆದಿದ್ದರು.ವ್ಯವಹಾರಿಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಆಧ್ಯಾತ್ಮದ ಬಾಂಧ್ಯವನ್ನು ಮೆರೆಯುತ್ತಿದ್ಧೆವೆ ಗುರುವಿನ ಮಾರ್ಗದರ್ಶನದಿಂದ ಮಾತ್ರ ಮಾನವನ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದರು. ಪ್ರಜಾಪಿತ ಬ್ರಹ್ಮ ಕುಮಾರಿ ವಿದ್ಯಾಲಯದ ಚೇತನಾ ಅಕ್ಕ ಮಾತನಾಡಿ ಮಕ್ಕಳಲ್ಲಿ ಸಂಸ್ಕಾರಯುತ ಮೌಲ್ಯಭರಿತವಾದ ಚಿಂತನೆಯನ್ನು ಬೆಳೆಸಬೇಕು.ಮೊಬೈಲ್ ಬಳಕೆಯ ಸಂಪರ್ಕ ದೂರವಿರಿಸಿ ಗುರು ಪರಂಪರೆಯ ಮಾರ್ಗದರ್ಶನದಲ್ಲಿ ನಡೆದಾಗ ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯ ಎಂದರು.