ಅಜ್ಞಾನದಿಂದ ಜ್ಞಾನದ ಕಡೆ ಸಾಗಬೇಕು

 ಹಿರಿಯೂರು.ಡಿ.3: ಅಜ್ಞಾನವನ್ನು ತೊಡೆದು ಹಾಕಿ ಜ್ಞಾನದ ಬೆಳಕನ್ನು ಹೊಂದಬೇಕು ಪ್ರತಿಯೊಬ್ಬರ ಮನದಲ್ಲೂ ಜ್ಞಾನದ ಬೆಳಕು ಮೂಡಬೇಕು ಅದೇ ಜ್ಞಾನದ ಬೆಳಕು ಕಾರ್ಯಕ್ರಮದ ಉದ್ದೇಶ ಎಂದು ಐಮಂಗಲ ಶ್ರೀ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಹೇಳಿದರು. ಪ್ರತಿಯೊಬ್ಬರಲ್ಲೂ ಆಲೋಚಿಸುವ ಶಕ್ತಿ ಇದೆ ಆದರೆ ಅದನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಅದೇ ಜೀವನ ಎಂದರು. ಸಾಹಿತಿಗಳಾದ ನಂಜುAಡಸ್ವಾಮಿ ಮಾತನಾಡಿ ಬದುಕಿನಲ್ಲಿ ಜಾಗೃತಿ ತುಂಬಾ ಮುಖ್ಯ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಜಾಗೃತಿಯ ಕಿಡಿ ಹೊತ್ತಿ ಅದು ವಿಶ್ವಮಾನ್ಯವಾಗಬೇಕು ಎಂದರು. ಸಾಹಿತಿಗಳಾದ ಪಗಡÀಲಬಂಡೆ ನಾಗೇಂದ್ರಪ್ಪ ಮಾತನಾಡಿ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಬೇಕು ಅಂತಹ ವೇದಿಕೆಯನ್ನು ಶ್ರೀ ಬಸವ ಹರಳಯ್ಯ ಸ್ವಾಮೀಜಿಯವರು ಕಲ್ಪಿಸಿಕೊಟ್ಟಿರುವುದು ತುಂಬಾ ಸಂತೋಷದ ವಿಚಾರ ಎಂದರು. ಯುವ ಹೋರಾಟಗಾರರಾದ ಹೊಳಲ್ಕೆರೆ ತಿಪ್ಪೇಸ್ವಾಮಿ ಶ್ರೀಹರಳಯ್ಯ ಗುರುಪೀಠದ ಬೆಳಕು ನಾಡೆಲ್ಲಾ ತುಂಬಬೇಕು ಮಠವು ಹೆಚ್ಚಿನದಾಗಿ ಬೆಳೆಯಬೇಕು ಅಭಿವೃದ್ಧಿ ಕಾಮಗಾರಿಗಳು ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಹಾಸ್ಯ ಸಾಹಿತಿ ಜಗನ್ನಾಥ್, ರೈತ ಮುಖಂಡರಾದ ರಾಜು, ಮಂಜುನಾಥ್ ಸೇರಿದಂತೆ ಅನೇಕ ಯುವ ಮುಖಂಡರು ಪಾಲ್ಗೊಂಡಿದ್ದರು.