ಅಜ್ಜಿಯ ಸರ ಕಳವು ತಪ್ಪಿಸಿದ ಪೋರಿ

ಪುಣೆ,ಮಾ.೧೦- ಬೈಕ್‌ನಲ್ಲಿ ಬಂದ ಸರಗಳ್ಳ ತನ್ನ ಅಜ್ಜಿ ಸರ ಕೀಳಲು ಯತ್ನಿಸಿದ ಸಂದರ್ಭದಲ್ಲಿ ೧೦ ವರ್ಷದ ಬಾಲಕಿ ತೋರಿದ ಶೌರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಾಲಕಿಯ ನಡೆಗೆ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ೧೦ ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜಿಯ ಸರ ಕಸಿದುಕೊಳ್ಳುವ ಯತ್ನವನ್ನು ೧೦ ವರ್ಷದ ಬಾಲಕಿ ವಿಫಲಗೊಳಿಸುತ್ತಿರುವ ದೃಶ್ಯ ವೈರಲ್ ಆಗಿದೆ.
ವೀಡಿಯೊದಲ್ಲಿ, ಎರಡು ಮಕ್ಕಳೊಂದಿಗೆ ವಯಸ್ಸಾದ ಮಹಿಳೆ ವಸತಿ ಪ್ರದೇಶದ ನಿರ್ಜನ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಬೈಕ್‌ನಲ್ಲಿ ಬಂದ ಸರಗಳ್ಳರು ಸರ ಕಸಿಯಲು ಯತ್ನಿಸಿದ್ದಾರೆ.
ಅಜ್ಜಿ ಜೊತೆಯಲ್ಲಿಯೇ ಇದ್ದ ಬಾಲಕಿ ಸ್ಕೂಟಿಯಲ್ಲಿ ಬಂದ ವ್ಯಕ್ತಿ, ಆಕೆಯ ಚೈನ್ ಕಸಿದುಕೊಳ್ಳಲು ಪ್ರಯತ್ನಿಸಿದಾಗ ಧೈರ್ಯಶಾಲಿ ಹುಡುಗಿ ಅವನ ಮೇಲೆ ಬ್ಯಾಗ್‌ನಿಂದ ಹಲ್ಲೆ ಮಾಡಲು ಪ್ರಾರಂಭಿಸಿ ಚೈನ್ ಕಸಿಯುವುದನ್ನು ತಪ್ಪಿಸಿದ್ದಾಳೆ.
ಈ ಘಟನೆ ಫೆಬ್ರವರಿ ೨೫ ರಂದು ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಿನ್ನೆ ಎಫ್‌ಐಆರ್ ದಾಖಲಿಸಲಾಗಿದೆ.