ಅಜ್ಜಾವರ ಕೋವಿಡ್ ಕಾರ್ಯಪಡೆ ಸಭೆ ನಿರ್ಧಾರ

ಸುಳ್ಯ , ಮೇ ೨೮- ಅಜ್ಜಾವರ ಗ್ರಾಮ ಪಂಚಾಯತ್ ಇದರ ಕೋವಿಡ್ ಕಾರ್ಯಪಡೆಯ ಸಭೆಯು ಮೇ.೨೪ರಂದು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಬಸವನಪಾದೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷರು ಶ್ರೀಮತಿ ಲೀಲಾಮನಮೋಹನ್, ಶ್ರೀಮತಿ ಜಯಮಾಲ ಎ ಕೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶರತ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿಯವರು, ಗ್ರಾಮ ಪಂಚಾಯತ್ ಸದಸ್ಯರುಗಳು ಆರೋಗ್ಯ ಸಹಾಯಕಿಯವರು ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಕಾರ್ಯಪಡೆ ಸದಸ್ಯರುಗಳು ಭಾಗವಹಿಸಿದ್ದರು.
ಪಾಸಿಟಿವ್ ಬಂದಂತಹ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಡೆಂಗ್ಯೂ ಪ್ರಕರಣ ಇರುವಲ್ಲಿ ಫಾಗಿಂಗ್ ಮಾಡುವುದಾಗಿ ತೀರ್ಮಾನಿಸಲಾಯಿತು.ಪಾಸಿಟಿವ್ ಬಂದ ೧೮ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.