ಅಜ್ಜಾವರದ ಮುಳ್ಯದಲ್ಲಿ ಅಭಿವೃದ್ಧಿ ಪರ ಚಿಂತನಾ ಸಭೆ

ಸುಳ್ಯ , ಜ.೧೨- ಮುಳ್ಯ ಅಭಿವೃದ್ಧಿ ಚಿಂತಕರ ಬಳಗ ಹಾಗು ಸ್ವಾಭಿಮಾನಿ ಬಳಗ ವತಿಯಿಂದ ಗ್ರಾಮದ ಅಭಿವೃದ್ಧಿ ಕುರಿತಾದ ಚಿಂತನಾ ಸಭೆ ಮುಳ್ಯ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ವೇದಿಕೆಯಲ್ಲಿ ರವಿಪ್ರಕಾಶ್ ಅಟ್ಲೂರು, ರಾಜೇಶ್ ಆಚಾರ್ ಮುಳ್ಯ, ಅಚ್ಚುತ ಅಟ್ಲೂರು, ಪದ್ಮನಾಭ ಆಚಾರ್ಯ ಅಟ್ಲೂರು, ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಮುಳ್ಯ ಮಠ, ರಾಘವ ಮುಳ್ಯಕಜೆ, ಶಿವಕುಮಾರ್ ಮುಳ್ಯ ಹೊಸಗದ್ದೆ, ಮೋಹನ್ ಮುಳ್ಯ ಹಾಗೂ ಸ್ವಾಭಿಮಾನಿ ಬಳಗದ ಸದಸ್ಯರು,ಮುಳ್ಯ ಅಭಿವೃದ್ಧಿ ಚಿಂತಕ ಬಳಗದ ಸದಸ್ಯರು ಭಾಗವಹಿಸಿದ್ದರು. ಊರಿನ ಹಲವು ಸಮಸ್ಯೆಗಳ ಬಗ್ಗೆ ಸಮಾಲೋಚನೆ ಹಾಗು ಪರಿಹಾರದ ಬಗ್ಗೆ ಚರ್ಚೆ ನಡೆಸಲಾಯಿತು. ಸಮಸ್ಯೆಗಳ ತುರ್ತು ಸ್ಪಂದನೆಗೆ ಸ್ಪಂದನಾ ವೇದಿಕೆಯ ಕಚೇರಿ ತೆರೆಯಲು ನಿರ್ಧರಿಸಲಾಯಿತು. ರಸ್ತೆ ಅಭಿವೃದ್ಧಿ, ನೀರು ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು, ಸರಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಜನರಿಗೆ ತಲುಪಿಸುವ ಬಗ್ಗೆ ಹಾಗೂ ತಮ್ಮ ಊರಿಗೆ ಬರಬೇಕಾದ ಅನುದಾನಗಳ ಬಗ್ಗೆ ವಿಮರ್ಶೆ ನಡೆಸಲಾಯಿತು. ಮುಳ್ಯದ ಅಭಿವೃದ್ಧಿಗೆ ಎಲ್ಲಾ ಪ್ರಯತ್ನ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜೋತ್ಸ್ನ, ಮಧುಶ್ರೀ, ಚೈತ್ರ, ಸುಪ್ರೀತ ಪ್ರಾರ್ಥಿಸಿದರು. ಕಿರಣ್ ಅಟ್ಲೂರು ಸ್ವಾಗತಿಸಿ, ದೇವಿಪ್ರಸಾದ್ ಅತ್ಯಾಡಿ ವಂದಿಸಿಸರು. ಶ್ರೀರಾಮ್ ಮುಳ್ಯ ಕಾರ್ಯಕ್ರಮ ನಿರೂಪಿಸಿದರು.