ಅಜ್ಜಯ್ಯ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.28: ಆಗಸ್ಟ್.28: ತಾಲೂಕಿನ ಹೊನ್ನಾಳಿ ಗ್ರಾಮದಲ್ಲಿ ನಿನ್ನೆ 17ನೇ ವರ್ಷದ ಶ್ರಾವಣ ಮಾಸದ ವಿಶೇಷ ಪೂಜೆ  ಹಾಗೂ ಅಜ್ಜಯ್ಯ ತಾತನ ದೇವಸ್ಥಾನದ ಗೋಪುರ ಲೋಕಾರ್ಪಣೆ  ಕಾರ್ಯಕ್ರಮ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಗೋಪುರ ಉದ್ಘಾಟನೆ ಮಾಡಿ ಅಜ್ಜಯ್ಯ ತಾತನವರ ಪವಾಡ ದೊಡ್ಡದು ಎಂದರು. ನನ್ನ ಮನೆಯ ಕಾರ್ಯಕ್ರಮ ಇದ್ದರೂ  ಅಜ್ಜಯ್ಯನ  ದೇವಸ್ಥಾನದ ಗೋಪುರ ಲೋಕಾರ್ಪಣ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಬಹಳ ಅದೃಷ್ಟ.  ನಾನು ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ಚುನಾವಣೆ ಸಮಯದಲ್ಲಿ ನನ್ನ ಕೈ ಹಿಡುದು ನನ್ನ ಈ ಸ್ಥಾನಕ್ಕೆ ತಂದಿದ್ದಿರಿ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿರುತ್ತೇನೆ. ನಮ್ಮ ಜಿಲ್ಲೆಯ ಜನರಿಗೆ ಯಾವುದೇ ತೊಂದರೆಯಾಗದಂತೆ ನಾನು ಶ್ರಮವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹೊನ್ನಾಳಿ ಗ್ರಾಮದ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.