ಅಜ್ಜನ ಉತ್ಸವ ಭಕ್ತಿಯಿಂದ ಯಶಸ್ವಿಗೊಳಿಸಿ:ಸಿದ್ದಲಿಂಗಶ್ರೀ

ತಾಳಿಕೋಟೆ:ನ.15: ಪ್ರತಿವರ್ಷ ರಾಜವಾಡೆಯಲ್ಲಿ ಶ್ರೀ ಖಾಸ್ಗತೇಶ್ವರರ ಹಾಗೂ ಶ್ರೀ ವಿರಕ್ತ ಮಹಾಸ್ವಾಮಿಗಳವರ ಹಾಗೂ ಸಮಸ್ತ ಶ್ರೀ ಮಠದ ಈ ಹಿಮದಿನ ಶಿವಯೋಗಿಗಳವರ ಸವಿನೆನಪಿಗಾಗಿ ಆಚರಿಸುತ್ತಾ ಸಾಗಿಬರಲಾದ ಅಜ್ಜನ ಉತ್ಸವ''ವೆಂಬ ಮಹಾ ಕಾರ್ಯಕ್ರಮವನ್ನು ಯಶಸ್ವಿಗೆ ಮುಂದಾಗಬೇಕೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಹೇಳಿದರು. ರವಿವಾರರಂದು ಅಜ್ಜನ ಉತ್ಸವ ಕುರಿತು ಪಟ್ಟಣದ ರಾಜವಾಡೆಯಲ್ಲಿರುವ ಶ್ರೀ ಶಿವಭವಾನಿ ಮಂದಿರದಲ್ಲಿ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ವ್ಯವಸ್ಥಾಪನಾ ಕಮಿಟಿಯವರನ್ನುದ್ದೇಶಿಸಿ ಮಾತನಾಡಿದ ಅವರು ಇದೇ ದಿ. 16 ರಿಂದ 20 ರವರೆಗೆ 5 ದಿನಗಳವರೆಗೆ ಜರುಗಲಿರುವ ಅಜ್ಜನ ಉತ್ಸವ ಕಾರ್ಯಕ್ರಮಲ್ಲಿ ಪ್ರತಿ ದಿನನಿನ್ನ ನೀ ತಿಳಿದುಕೋ” ಎಂಬ ಪ್ರವಚನ ನಡೆಯಲಿದೆ ಹಿಂದಿನ ವಿರಕ್ತ ಮಹಾಸ್ವಾಮಿಗಳನ್ನು ಹತ್ತಿರದಿಂದ ನೋಡಿದಾಗ ಹಗಲು ರಾತ್ರಿ ನನ್ನ ಭಕ್ತರು ಎಂದು ಹೇಳುತ್ತಿದ್ದರು ನಿವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಶ್ರೀಗಳು ಮುಂಬಯಿಗೆ ಭಕ್ತರ ಹತ್ತಿರ ಹೋಗಿ ಬಂದರೆ ಅವರು ಹಣಕ್ಕಾಗಿ ಹೋಗುತ್ತಿರಲಿಲ್ಲಾ ಅವರು ಭಕ್ತರ ಉದ್ದಾರಕ್ಕಾಗಿಯೇ ಎಂದು ಭಾವಿಸುತ್ತಿದ್ದರು ಆದರೆ ರಾಜವಾಡೆಯಲ್ಲಿ ಭಕ್ತರ ಕಾರ್ಯಕ್ರಮವಿದ್ದಾಗ ಶ್ರೀಗಳು ಎಲ್ಲಿಯೂ ಕಾರ್ಯಕ್ರಮದ ಆಮಂತ್ರಣ ಬಂದರೂ ಮೊದಲು ತಾಳಿಕೋಟೆಯ ರಾಜವಾಡೆಯ ಭಕ್ತರ ಮೇಲೆ ಪ್ರೀತಿ ಪ್ರೇಮ ಲಕ್ಷೀಸಿದ ನಾನು ನಾನು ರಾಜವಾಡೆಯಲ್ಲಿಯೇ ಅಜ್ಜನ ಉತ್ಸವ ಈ ಕಾರ್ಯಕ್ರಮ ಏರ್ಪಡಿಸಿದರೆ ಭಕ್ತರು ಯಶಸ್ವಿಗೆ ಕಾರಣಿಬೂತರಾಗುತ್ತಾರೆಂಬ ಶ್ರೀಗಳಂತೆ ನಂಬಿಕೆ ಇಟ್ಟ ನಾನು ರಾಜವಾಡೆಯ ಜನತೆ ನನ್ನ ಮನೆಯ ಕುಟುಂಭದ ಸದಸ್ಯರೆಂದು ತಿಳಿದುಕೊಂಡಿದ್ದೇನೆಂದು ಹೇಳಿದ ಶ್ರೀಗಳು ರಾಜವಾಡೆಯ ಸಮಸ್ತ ಜನತೆಯನ್ನು ಮುಕ್ತಕಂಠದ ಆತ್ಮೀಯ ಭಾವನೆಯೊಂದಿಗೆ ಹೊಗಳಿದ ಶ್ರೀಗಳು ದಿ. 16 ರಿಂದ 20ರವರೆಗೆ ನಡೆಯಲಿರುವ ಅಜ್ಜನ ಉತ್ಸವದ ದಿನದ ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು.
ಶಿವಭವಾನಿ ಮಂದಿರದ ಅರ್ಚಕರಾದ ವೇ. ಸಂತೋಷಭಟ್ ಜೋಶಿ ಅವರು ಮಾತನಾಡಿ ಭಕ್ತರಿಂದಲೇ ಮಠಮಾನ್ಯಗಳು, ಮಂದಿರಗಳು ಬೆಳೆಯಲು ಕಾರಣವಾಗಿವೆ ಅಂತಹ ಶ್ರೀಮಠದ ನಡೆಯುವ ಕಾರ್ಯಕ್ರಮಕ್ಕೆ ರಾಜವಾಡೆಯ ಭಕ್ತರು ಕೈಜೋಡಿಸಲಿದ್ದಾರೆ ಭಕ್ತಿ, ಪ್ರೀತಿ, ವಿಸ್ವಾಸ ಹೊಂದಿದ ರಾಜವಾಡೆಯ ಎಲ್ಲ ನಾಗರಿಕರು ಶ್ರೀಗಳ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಭಕ್ತಿಭಾವನೆಮರೆಯಲಿದ್ದಾರೆಂದರು.
ಸಮಸ್ತ ರಾಜವಾಡೆಯ ನಾಗರಿಕರ ಪರವಾಗಿ ಕುಮಾರಗೌಡ ಪಾಟೀಲ ಮಾತನಾಡಿ ರಾಜವಾಡೆಯ ನಾಗರಿಕರು ಶ್ರೀ ಖಾಸ್ಗತ ಮಠದ ಮೇಲೆ ಅಪಾರ ಭಕ್ತಿ ಹೊಂದಿದವರಾಗಿದ್ದಾರೆ ಈ ಹಿಂದಿನಿಂದ ತಮ್ಮ ಶ್ರೀಮಠದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿಭಾವನೆಯೊಂದಿಗೆ ಮೆರೆದಿದ್ದಾರೆ ಇನ್ನೂಮುಂದಾದರೂ ಶ್ರೀಮಠದ ಕಾರ್ಯಕ್ರಮಗಳಿಗೆ ನಮ್ಮ ಹಿರಿಯರು ಹಾಕಿ ಕೊಟ್ಟ ಮಾರ್ಗದಂತೆ ನಡೆಯುತ್ತವೆ ಹಿಂದಿನ ಶ್ರೀಗಳಾದ ವಿರಕ್ತಶ್ರೀಗಳೊಂದಿಗೆ ಸಾಗಿದಂತೆ ಈಗೀನ ಶ್ರೀಗಳ ಕೈಭಲಪಡಿಸುವದರೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸುತ್ತೇವೆಂದರು.ಈ ಸಮಯದಲ್ಲಿ ಸಮಸ್ತ ರಾಜವಾಡೆಯ ಭಕ್ತಸಮೂಹ ಪಾಲ್ಗೊಂಡಿದ್ದರು.