ಅಜ್ಜನಿಗೆ ಮಂತ್ರಿ ಸ್ಥಾನ ಕೊಡಿ; ಟಿಬಿಜೆ ಮೊಮ್ಮಗಳ ಪತ್ರ ವೈರಲ್

ಬೆಂಗಳೂರು,/ನವದೆಹಲಿ.ಮೇ.೨೯- ಕರ್ನಾಟಕ ಸರ್ಕಾರದಲ್ಲಿ ತನ್ನ ತಾತನಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿರುವ ಶಾಸಕ ಟಿ.ಬಿ.ಜಯಚಂದ್ರ ಅವರ ಮೊಮ್ಮಗಳು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಕೋರಿ ಏಳು ವರ್ಷದ ಅರ್ನಾ ಸಂದೀಪ್ ಪತ್ರದಲ್ಲಿ ಮನವಿ ಮಾಡಿದ್ದು ಪತ್ರ ವೈರಲ್ ಆಗಿದೆ.
ಬಾಲಕಿ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, “ಪ್ರೀತಿಯ ರಾಹುಲ್ ಗಾಂಧಿ, ನಾನು ಟಿಬಿ ಜಯಚಂದ್ರ ಅವರ ಮೊಮ್ಮಗಳು, ನನ್ನ ತಾತನನ್ನು ಮಂತ್ರಿ ಮಾಡಲಿಲ್ಲ, ಆದ್ದರಿಂದ ನಾನು ತುಂಬಾ ನೋವಾಗಿದೆ., ಅವರು ಶ್ರಮಜೀವಿಯಾಗಿರುವುದರಿಂದ ಅವರನ್ನು ಮಂತ್ರಿ ಮಾಡಬೇಕು, ಮತ್ತು ಜನರನ್ನು ಪ್ರೀತಿಸಿ ಮತ್ತು ಅವರಿಗೆ ಸಹಾಯ ಮಾಡುತ್ತಾರೆ.ಹೀಗಾಗಿ ಅವರನ್ನು ಮಂತ್ರಿ ಮಾಡಬೇಕು ಎಂದು ಪತ್ರದಲ್ಲಿ ಬಾಲಕಿ ಮನವಿ ಮಾಡಿದ್ದಾಳೆ.
೩ ನೇ ತರಗತಿಯಲ್ಲಿ ಓದುತ್ತಿರುವ ಅರ್ನಾ,, ಜಯಚಂದ್ರ ಎರಡನೇ ಮಗ ಸಂದೀಪ್ ಟಿಜೆ ಅವರ ಪುತ್ರಿ. “ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ತಿಳಿದು ಅವರು ರಾಹುಲ್ ಗಾಂದಿಗೆ ಪತ್ರ ಬರೆದಿದ್ದಾರೆ.
ತಾತನಿಗೆ ಸಚಿವ ಸ್ಥಾನ ಸಿಗದಿರುವುದನ್ನು ಟಿವಿಯಲ್ಲಿ ನೋಡಿ ಆಕೆ ಅಳಲು ಪ್ರಾರಂಭಿಸಿದಳು. ಆಕೆಯನ್ನು ಸಮಾಧಾನ ಪಡಿಸಲು ನಾವು ಆಕೆಗೆ ರಾಹುಲ್‌ಗೆ ಪತ್ರ ಬರೆಯಲು ಹೇಳಿದೆವು. ಆಕೆ ಅದನ್ನು ಗಂಭೀರವಾಗಿ ಪರಿಗಣಿಸಿ ಪತ್ರ ಬರೆದಿದ್ದಾಳೆ” ಎಂದು ಸಂದೀಪ್ ಹೇಳಿದ್ದಾರೆ.