ಅಜೀತ ಕಟ್ಟಿಮನಿಗೆ ಡಾ.ಬಿ.ಆರ್.ಅಂಬೇಡ್ಕರ ಅಂತರಾಷ್ಟ್ರೀಯ ಪ್ರಶಸ್ತಿ

ಇಂಡಿ :ಫೆ.21: ತಾಲೂಕಿನ ಚಿಕ್ಕಬೇವನೂರ ಗ್ರಾಮದ ಯವ ಮುಖಂಡ,ಸಾಮಾಜಿಕ ಕಾರ್ಯಕರ್ತ ಅಜೀತ ಕಟ್ಟಿಮನಿಗೆ ಸಮಾಜ ಸೇವೆಯನ್ನು ಗುರುತಿಸಿ ಟೋಲೋಸಾ-ಮ್ಯಾಕ್ಸಿಕೊ(ಅಮೇರಿಕ ವಿಶ್ವವಿದ್ಯಾಲಯ) ಡಾ.ಬಿ.ಆರ್.ಅಂಬೇಡ್ಕರ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ಈಚೆಗೆ ತೆಲಂಗಾಣದ ನಿಜಾಂಬಾದ್‍ದ ಸಿಟಿ ಪಂಕ್ಷನ್ ಹಾಲ್ ನಡೆದ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಅಭಿನಂದನೆ:
ಇಂಡಿ ತಾಲೂಕಿನ ಯುವ ಮುಖಂಡ,ಸಮಾಜ ಸೇವಕ ಅಜೀತ ಕಟ್ಟಿಮನಿ ಅವರ ಸಮಾಜ ಸೇವೆಯನ್ನು ಗುರುತಿಸಿ ಅಮೇರಿಕ ವಿವಿ ಡಾ.ಬಿ.ಆರ್.ಅಂಬೇಡ್ಕರ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದು, ತಾಲೂಕಿಗೆ ಹೆಮ್ಮೆ ತರುವ ವಿಷಯವಾಗಿದ್ದು, ಪ್ರಶಸ್ತಿ ಪಡೆದ ಅಜೀತ್ ಕಟ್ಟಿಮನಿಗೆ ತಾಲೂಕಿನ ಅಭಿಮಾನಿ ಬಳಗ ಅಭಿನಂದಿಸಿದೆ.