ಅಜಿಮ್ ಪ್ರೇಮ್ ಜಿ ಉಜ್ಜನಿ ಸರ್ಕಾರಿ ಆಸ್ಪತ್ರೆಗೆ ಭೇಟಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಅ.2-: ತಾಲೂಕಿನ ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರ.ಕ್ಕೆ   ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ವಿಪ್ರೋ ಮುಖ್ಯಸ್ಥರಾದ ಅಜಿಮ್ ಪ್ರೇಮ್ ಜಿ ಯವರು  ಭೇಟಿ ನೀಡಿ ಸಮುದಾಯ ಆರೋಗ್ಯ ಕೇಂದ್ರ ವೀಕ್ಷಣೆ ಮಾಡಿದರು.
ಉತ್ತಮ ಆರೋಗ್ಯ ಕೊಡಿಸುವಲ್ಲಿ ಯಶಸ್ವಿಯಾಗಿರುವ ಉಜ್ಜಯಿನಿಯ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಪ್ರಶಂಶನೀಯ ವ್ಯಕ್ತಪಡಿಸಿ. ಲಸಿಕಾ ಅಭಿಯಾನ ದಲ್ಲಿ ಶೇಕಡ 98ರಷ್ಟು ದಾಖಲೆಯ  ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಅಭಿನಂದನೆಗಳನ್ನು ತಿಳಿಸಿದರು.