ಅಜಿಮ್ ಪ್ರೇಮಜಿ ಸಂಸ್ಥೆಯಿಂದ 17,500 ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ

ಬೀದರ:ಜೂ.7: ಅಜೀಮ್ ಪ್ರೇಮ್‌ಜಿ ಫೌಂಡೇಶನ್‍ ವತಿಯಿಂದ ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಯ 17,500 ಬಡ ಕುಟುಂಬಗಳಿಗೆ ಆಹಾರಧಾನ್ಯ ವಿತರಣೆ ಕಾರ್ಯಕ್ಕೆ ನಗರದ ಸೇಂಟ್ ಜೋಸೆಫ್ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝಹೀರಾ ನಸೀಮ್ ಚಾಲನೆ ನೀಡಿ ಮಾತನಾಡಿ, ‘ಸಂಕಷ್ಟದ ಸಮಯದಲ್ಲಿ ಅರ್ಬಿಟ್ ಹಾಗೂ ಶಾಹೀನ್ ಸಂಸ್ಥೆ ಸೇರಿ ಒಟ್ಟು 47 ಎನ್.ಜಿ.ಒ.ಗಳು ಈ ಕಾರ್ಯಕ್ಕೆ ಕೈಜೋಡಿಸಿರುವುದು ಸಂತೋಷದ ವಿಷಯವಾಗಿದೆ’ ಎಂದರು.

ಆರ್ಬಿಟ್ ಸಂಸ್ಥೆ, ಶಾಹೀನ್ ಕಾಲೇಜು ಮತ್ತು ಇತರ ಸಂಘ ಸಂಸ್ಥೆಗಳ ಮೂಲಕ ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಯ 17,500 ಬಡ ಕುಟುಂಬಗಳಿಗೆ ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ.

ಶಾಹೀನ್ ಶಿಕ್ಷಣ ಸಂಸ್ಥೆಯ ಡಾ.ಅಬ್ದುಲ್ ಖದೀರ್ ಮತ್ತು ಆರ್ಬಿಟ್ ಸಂಸ್ಥೆಯ ಫಾಧರ್ ಅನಿಲ್ ಕ್ರಾಸ್ತಾ, ಫಾದರ್ ವಿಕ್ಟರ್ ದಾಸ್, ಸಂತ ಜೋಸೆ ಫರ ಕಾಲೇಜಿನ ಪ್ರಾಂಶುಪಾಲ ಫಾದರ್ ವಿಲ್ಸನ್ ಫರ್ನಾಂಡೀಸ್‌ ಇದ್ದರು.