ಅಜಿತ್ ಪವಾರ್ ವಿರುದ್ಧ ಸವದಿ ಆಕ್ರೋಶ

ಕಲಬುರಗಿ,ನ.20-ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ನೀಡಿರುವ ಹೇಳಿಕೆಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ಉದ್ಧಟತನದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಅವರು ಇತಿಹಾಸವನ್ನೊಮ್ಮೆ ತೆಗೆದು ನೋಡಬೇಕು, ಅವರ ಮಾತಿನಿಂದಲೇ ಹಿಂದೆ ಅವರ ಸರ್ಕಾರದಲ್ಲಿ ಏನಾಯಿತು ಎನ್ನುವುದರ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
@12bc =ಗಡಿ ವಿವಾದ ಮುಗಿದ ಅಧ್ಯಾಯ
ಗಡಿ ವಿವಾದ ಮುಗಿದ ಅಧ್ಯಾಯ. ಸೂರ್ಯಚಂದ್ರರಿರುವವರೆಗೂ ಬೆಳಗಾವಿ ನಮ್ಮದು ಎಂದು ಸವದಿ ಹೇಳಿದರು.
ರಾಜ್ಯದ ಕನ್ನಡಪರ ಸಂಘಟನೆಗಳಿಗೆ ಸವದಿ ಮನವಿ
ಸರಕಾರ ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಮಧ್ಯದ ಗೊಂದಲ ಅಲ್ಲ. ಒಂದು ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ನಿಗಮ ಮಾಡಲಾಗಿದೆ.ಮರಾಠ ಸಮುದಾಯ ನಮ್ಮ ನೆಲದಲ್ಲಿ ಸಾವಿರಾರು ವರ್ಷಗಳಿಂದ ನೆಲೆಸಿದ್ದಾರೆ. ಆ ಸಮುದಾಯದ ಬಡವರಿಗೆ ಅನುಕೂಲ ಆಗಲು ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಕನ್ನಡಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸವದಿ ಮನವಿ ಮಾಡಿದರು.
ಕನ್ನಡ ಪ್ರಾಧಿಕಾರ, ಮರಾಠಿ ಪ್ರಧಿಕಾರ ರೀತಿ ಅಲ್ಲ. ಎಲ್ಲಾ ಸಮುದಾಯವನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನೂ ಪ್ರೀತಿಸೋಣ ಎಂದರು.