ಅಜಿತ್ ದೋವಲ್ ಸೇರಿ ಐವರಿಗೆ ಗೌರವ್ ಸಮ್ಮಾನ್

ಡೆಹ್ರಾಡೂನ್,ನ.೭-ಉತ್ತರಾಖಂಡ್ ಗೌರವ್ ಸಮ್ಮಾನ್ ಪ್ರಶಸ್ತಿಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ದಿವಂಗತ ಸಿಡಿಎಸ್ ಜನರಲ್ ರಾವತ್ ಸೇರಿದಂತೆ ಐದು ಗಣ್ಯರಿಗೆ ಪ್ರಶಸ್ತಿ ನೀಡಲಾಗುವುದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಕಟಿಸಿದ್ದಾರೆ.

ಅಜಿತ್ ದೋವಲ್ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಐವರು ಪ್ರತಿಷ್ಠಿತ ವ್ಯಕ್ತಿಗಳನ್ನು ಈ ವರ್ಷ “ಉತ್ತರಾಖಂಡ ಗೌರವ ಸಮ್ಮಾನ್”ಗೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ಮೂರು ಮಂದಿಗೆ ಮರಣೋತ್ತರವಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಲ್ಲರಿಗೂ ಅಭಿನಂಧನೆಗಳು ಎಮದು ಅವರು ತಿಳಿಸಿದ್ದಾರೆ.

“ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸ್ಪೂರ್ತಿದಾಯಕ ಕೆಲಸಗಳ ಮೂಲಕ ಉತ್ತರಾಖಂಡದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ’ದೇವಭೂಮಿ’ಯ ಮಹಾನ್ ಪುತ್ರರಿಗೆ ರಾಜ್ಯದ ಎಲ್ಲಾ ಜನರ ಪರವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ
ಮಾಜಿ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರಿಗೆ (ಮರಣೋತ್ತರ), ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ, ಕವಿ ದಿವಂಗತ ಗಿರೀಶ್ ಚಂದ್ರ ತಿವಾರಿ ’ಗಿರ್ದಾ’ (ಮರಣೋತ್ತರ) ಮತ್ತು ದಿವಂಗತ ವೀರೇನ್ ದಂಗ್ವಾಲ್ (ಮರಣೋತ್ತರ) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉತ್ತರ ಖಂಡ ರಾಜ್ಯ ರಚನೆಯ ದಿನವಾದ ನವೆಂಬರ್ ೯ ರಂದು ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಶಸ್ತಿ ನೀಡಲಿದ್ದಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿ ಗೌರವಧನ, ಪ್ರಶಸ್ತಿ ಪತ್ರ ಮತ್ತು ಚಿಹ್ನೆಯನ್ನು ಒಳಗೊಂಡಿದೆ.

ಉತ್ತರಾಖಂಡ ಗೌರವ್ ಸಮ್ಮಾನ್:

ಉತ್ತರಾಖಂಡ್ ರತ್ನ ಜೊತೆಗೆ, ಉತ್ತರಾಖಂಡ ಗೌರವ್ ಸಮ್ಮಾನ್ ರಾಜ್ಯದ ಎರಡು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. ಯಾವುದೇ ಕ್ಷೇತ್ರಕ್ಕೆ ಅವರ ಅಸಾಧಾರಣ ಕೊಡುಗೆಗಾಗಿ ವ್ಯಕ್ತಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ೨೦೨೧ ರಲ್ಲಿ ಸ್ಥಾಪಿಸಿದರು. ಕಳೆದ ವರ್ಷ ನವೆಂಬರ್ ೯, ರಾಜ್ಯದ ೨೧ ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು.