ಅಜಾದ್ ನಗರ ಪೊಲೀಸರಿಗೆ ಮಾಸ್ಕ್ ವಿತರಣೆ

ದಾವಣಗೆರೆ.ಮೇ.೨೮; ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಆಶ್ರಯದಲ್ಲಿ ನಮ್ಮ ಪೋಲಿಸ್ ನಮ್ಮ ಹೆಮ್ಮೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಂದು ಸಹ ಯುವ ಕಾಂಗ್ರೆಸ್ ನಿಂದ  ನಗರದ ಆಜಾದ್  ನಗರ ಪೊಲೀಸ್ ಸ್ಟೇಷನ್ ಪಿಎಸ್ಐ ಶೈಲಜಾ ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಸ್ಯಾನಿಟೈಸರ್ ಫೇಸ್ ಶೀಲ್ಡ್ ಹ್ಯಾಂಡ್ ಗ್ಲೌಸ್ ಹಂಚಲಾಗಿದೆ.ದೇಶಾದ್ಯಂತ ಪೋಲಿಸ್ ಸಿಬ್ಬಂದಿಯವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ನಿರಂತರವಾಗಿ ದೇಶ ಕಾಯುವ ಕೆಲಸ ಹಾಗೂ ದೇಶದ ರಕ್ಷಣೆ ಕೊಡುವುದರಲ್ಲಿ ಅಭೂತಪೂರ್ವ ಕೊಡುಗೆ ನೀಡುತ್ತಿದ್ದಾರೆ.ಪೊಲೀಸರು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರಿಗೆ ಗೌರವವಾಗಿ ಮಾಸ್ಕ್ ಸ್ಯಾನಿಟೈಸರ್ ನೀಡಲಾಯಿತು. ಈ  ಕಾರ್ಯಕ್ರಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಕ್ತಾರರಾದ ಮೈನುದ್ದೀನ್ ಹೆಜ್ ಜೆ, ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ವಾಜಿದ್, ದಾವಣಗೆರೆ ದಕ್ಷಿಣ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದ ಸೈಯದ್ ಇರ್ಫಾನ್ ಕಾರ್ಯಕರ್ತರು ಭಾಗವಹಿಸಿದರು.