ಅಜಯ್ ದೇವಗಣ್ ರ ’ಮೇಡೇ’ ಶೂಟಿಂಗ್ ರದ್ದು: ದೋಹಾದಲ್ಲಿ ಫಿಲ್ಮ್ ನ ಅಂತಿಮ ಹಂತದ ಚಿತ್ರೀಕರಣ ನಡೆಯುವುದಿತ್ತು

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದ ಬಾಲಿವುಡ್ ಈಗಾಗಲೇ ಗಂಟು ಮೂಟೆ ಕಟ್ಟಿ ಇಲ್ಲಿನ ಚಿತ್ರೀಕರಣವನ್ನು ನಿಲ್ಲಿಸುತ್ತಿದೆ. ಇದೀಗ ಅಜಯ್ ದೇವಗಣ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ’ಮೇಡೇ’ ಇದರ ಶೂಟಿಂಗ್ ಕೂಡಾ ತಡೆಹಿಡಿಯಲಾಗಿದೆ.
ಅಜಯ್ ದೇವಗಣ್ ಎಲ್ಲಾ ಸಿದ್ಧತೆಗಳೊಂದಿಗೆ ಡಿಸೆಂಬರ್ ೨೦೨೦ ರಿಂದ ಶೂಟಿಂಗ್ ಆರಂಭಿಸಿದ್ದರು. ಫಿಲ್ಮ್ ನ ಕೊನೆಯ ಶೆಡ್ಯೂಲ್ ಗಾಗಿ ಟೀಮ್ ಎಪ್ರಿಲ್ ಕೊನೆಗೆ ದೋಹಾಕ್ಕೆ ತೆರಳುವುದಿತ್ತು .


ಆದರೆ ವಿಶ್ವದಲ್ಲಿಯೂ ಹೆಚ್ಚುತ್ತಿರುವ ಕೊರೊನಾ ಆತಂಕದ ಕಾರಣ ಅಜಯ್ ದೇವಗಣ್ ದೋಹಾ ಶೆಡ್ಯೂಲ್ ನ್ನು ತಡೆಹಿಡಿದಿದ್ದಾರೆ.
ಅಮಿತಾಭ್ ಬಚ್ಚನ್ ಮತ್ತು ರಕುಲ್ ಪ್ರೀತ್ ಸಿಂಗ್ ಈ ಫಿಲ್ಮಲ್ಲಿ ಲೀಡ್ ರೋಲ್ ನಲ್ಲಿ ಇದ್ದಾರೆ. ಇಬ್ಬರೂ ವರ್ಷ ೨೦೨೦ ರಲ್ಲಿ ಕೊರೊನಾ ಸೋಂಕು ಪಾಸಿಟಿವ್ ಆಗಿದ್ದರು. ಈ ಕಾರಣ ಅಮಿತಾಭ್ ಬಚ್ಚನ್ ಆಸ್ಪತ್ರೆಗೂ ಭರ್ತಿ ಗೊಂಡಿದ್ದರು.(ಈಗ ಅವರು ಗುಣಮುಖರಾಗಿದ್ದಾರೆ.) ಈ ತಿಂಗಳ ಆರಂಭದಲ್ಲಿ ಅವರು ಕೊರೊನಾ ವ್ಯಾಕ್ಸಿನ್ ನ ಮೊದಲ ಡೋಸ್ ಕೂಡಾ ಪಡೆದಿದ್ದಾರೆ.ಫಿಲ್ಮ್ ’ಮೇಡೇ’ ಒಂದು ಸತ್ಯ ಘಟನೆಯ ಆಧಾರಿತವಾಗಿದೆ.
ಅಜಯ್ ದೇವಗಣ್ ರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫಿಲ್ಮ್ ’ಮೇಡೇ’ ೨೦೧೫ರ ಸತ್ಯ ಘಟನೆಯಾಧಾರಿತವಾಗಿದೆ .ಆ ಸಮಯ ದೋಹಾ -ಕೊಚ್ಚಿ ವಿಮಾನವು ಕೆಟ್ಟ ಹವಾಮಾನದಿಂದಾಗಿ ಅದನ್ನು ದಕ್ಷಿಣ ಭಾರತದ ಬೇರೆ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ರಿಪೋರ್ಟ್ ನಂತೆ ಈ ಫಿಲ್ಮ್ ನ ಶೂಟಿಂಗ್ ನ್ನು ಭಾರತದ ಬೇರೆ ಬೇರೆ ವಿಮಾನನಿಲ್ದಾಣಗಳಲ್ಲಿ ಮಾಡುವುದಿತ್ತು .ಮಹಾಮಾರಿಯ ಕಾರಣ ಅಂತಹ ದೃಶ್ಯ ಗಳ ಶೂಟಿಂಗ್ ಸಾಧ್ಯವಾಗಲಿಲ್ಲವಂತೆ. ಅಜಯ್ ದೇವಗಣ್ ಗಂಗೂಬಾಯಿ ಕಾಠಿಯಾವಾಡಿ ಫಿಲ್ಮ್ ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ಕೊನೆಯ ಬಾರಿಗೆ ತಾನಾಜಿ ಫಿಲ್ಮ್ ನಲ್ಲಿ ಕಾಣಿಸಿಕೊಂಡಿದ್ದರು.

ಕಮಾಂಡೋ ಖ್ಯಾತಿಯ ಪೂಜಾ ಚೋಪ್ರಾಗೆ ’ಜಹಾಂ ಚಾರ್ ಯಾರ್’ ಚಿತ್ರೀಕರಣದ ಸಮಯ ಗಾಯ

ಕಮಾಂಡೋ ಖ್ಯಾತಿಯ ಪೂಜಾ ಚೋಪ್ರಾ ತನ್ನ ಅಪ್ ಕಮಿಂಗ್ ಫಿಲ್ಮ್ ’ಜಹಾಂ ಚಾರ್ ಯಾರ್’ ಚಿತ್ರೀಕರಣದ ಸಮಯ ಗಾಯಗೊಂಡರು. ಗಾಯದ ಹೊರತೂ ಅವರು ಫಿಲ್ಮ್ ನ ಶೂಟಿಂಗನ್ನು ಮುಂದುವರಿಸಿದರು. ಅವರ ತುಟಿಗೆ ಹೆಚ್ಚಿನ ಗಾಯವಾಗಿತ್ತು.


ಬಾಲಿವುಡ್ ವರದಿ ಅನುಸಾರ ಸ್ವರಾ ಭಾಸ್ಕರ್ ಜೊತೆಗೆ ಅವರ ಒಂದು ಜಗಳದ ದೃಶ್ಯವಿತ್ತು. ಆ ದೃಶ್ಯದಲ್ಲಿ ಒಂದು ತಪ್ಪಿನಿಂದ ಪೂಜಾ ಅವರ ತುಟಿಗೆ ಗಾಯವಾಯಿತು.ಗಾಯ ಸ್ವಲ್ಪ ಜೋರಾಗಿದ್ದರೂ ಅವರು ಫೈಟ್ ದೃಶ್ಯದ ಶೂಟಿಂಗ್ ಅನ್ನು ನಿಲ್ಲಿಸಲಿಲ್ಲ.ಪೈನ್ ಕಿಲ್ಲರ್ ಮಾತ್ರೆಯನ್ನು ತಿಂದು ಮತ್ತೆ ಅವರು ಶೂಟಿಂಗನ್ನು ಮುಂದುವರಿಸಿದರು.


ಕೊರೊನಾ ಸೋಂಕು ವಾತಾವರಣದ ಕಾರಣ ಈ ದಿನಗಳಲ್ಲಿ ಬಾಲಿವುಡ್ ಫಿಲ್ಮ್ ಗಳ ಶೂಟಿಂಗ್ ಹೇಗೂ ಸಂಕಷ್ಟದಲ್ಲಿದೆ .ಆದ್ದರಿಂದ ಇನ್ಯಾವುದೋ ತೊಂದರೆಯಿಂದಾಗಿ ಶೂಟಿಂಗ್ ನಿಲ್ಲಿಸಲು ತಂಡದವರು ಸಿದ್ದರಿರಲಿಲ್ಲ .ತಂಡಕ್ಕೆ ಇನ್ಸೂರ್ ಕೂಡಾ ಮಾಡಲಾಗಿತ್ತು .ಹಾಗೂ ಅವರವರ ಜಾಗ್ರತೆಯನ್ನು ತಪ್ಪದೆ ಮಾಡುತ್ತಿದ್ದಾರೆ. ಪೂಜಾ ಫಿಲ್ಮ್ ನ ಶೂಟಿಂಗ್ ಗಾಗಿ ಏಪ್ರಿಲ್ ೮ರಂದು ಗೋವಾಕ್ಕೆ ತೆರಳಿದ್ದರು. ಅಲ್ಲಿ ೨೨ ದಿನಗಳ ಶೂಟಿಂಗ್ ಬಾಕಿ ಇದೆ. ಫಿಲ್ಮಿನ ಒಂದು ಶೆಡ್ಯೂಲ್ ಲಕ್ನೋದಲ್ಲಿ ಪೂರ್ಣಗೊಳಿಸಲಾಗಿದೆ. ಇದು ನೆಟ್ ಫ್ಲಿಕ್ಸ್ ನ ಫಿಲ್ಮ್ ಆಗಿದೆ .ವಿನೋದ್ ಬಚ್ಚನ್ ಪ್ರೊಡ್ಯೂಸ್ ಮಾಡುತ್ತಿದ್ದಾರೆ.

ಮಹಾಭಾರತ ಸೀರಿಯಲ್ ನ ’ಇಂದ್ರ’
೭೪ ವರ್ಷದ ನಟ ಸತೀಶ್ ಕೌಲ್

ಕೊರೊನಾದಿಂದ ನಿಧನ

ಬಿ ಆರ್ ಚೋಪ್ರಾರ ಮಹಾಭಾರತ ಸೀರಿಯಲ್ ನ ಇಂದ್ರದೇವ ಪಾತ್ರ ನಿರ್ವಹಿಸಿದ ನಟ ಸತೀಶ್ ಕೌಲ್ ನಿಧನರಾದರು. ಅವರಿಗೆ ೭೪ ವರ್ಷ ವಯಸ್ಸಾಗಿತ್ತು .ಕೋವಿಡ್-೧೯ ರ ಸೋಂಕು ರೋಗಕ್ಕೆ ಅವರು ಒಳಗಾಗಿದ್ದರು.ಕೌಲ್ ಅವರ ಸಹೋದರಿ ಸುಷ್ಮಾ ಈ ಮಾಹಿತಿಯನ್ನು ನೀಡಿದ್ದಾರೆ.


ಸತೀಶ್ ಅವರು ೫ ದಿನಗಳಿಂದ ಲೂಧಿಯಾನಾದಲ್ಲಿ ಇದ್ದರು. ಅವರಿಗೆ ಜ್ವರ ಬಂದಿತ್ತು .ಆದರೆ ಅವರು ಪಾಸಿಟಿವ್ ಭಯದಲ್ಲಿ ಟೆಸ್ಟ್ ಮಾಡಿಸಿರಲಿಲ್ಲ. ಮೂರು ದಿನಗಳ ಹಿಂದೆ ಅವರ ಕಂಡೀಶನ್- ದೇಹದ ಸ್ಥಿತಿ ಬಹಳ ಕಷ್ಟಕ್ಕೆ ಈಡಾಗಿತ್ತು. ಕೇರ್ ಟೇಕರ್ ಅವರನ್ನು ಆಸ್ಪತ್ರೆಗೆ ಭರ್ತಿಗೊಳಿಸಿ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು .ಆದರೂ ಅವರು ಸುಧಾರಿಸಿಕೊಂಡಿದ್ದರು.
ಸುಷ್ಮಾ ಹೇಳಿದ್ದರು- “ನಾನು ಬೆಳಗ್ಗೆ ಅವರ ಜೊತೆ ಮಾತಾಡಿದೆ. ಅವರು ಹೇಳಿದರು- ನಾನು ಚೆನ್ನಾಗಿದ್ದೇನೆ ಎಂದು. ಇದಾದ ನಂತರ ಕೆಲವೇ ಗಂಟೆಗಳಲ್ಲಿ ನನಗೆ ಕಾಲ್ ಬಂತು, ’ಅವರು ನಿಧನರಾದರು’ ಎಂದು.”
ಕೌಲ್ ಅವರು ಕೆಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು. ಅವರ ಬಳಿ ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹಣ ಇರಲಿಲ್ಲ. ೩೦೦ಕ್ಕಿಂತ ಹೆಚ್ಚು ಪಂಜಾಬಿ ಮತ್ತು ಹಿಂದಿ ಫಿಲ್ಮ್ ಗಳಲ್ಲಿ ಅವರು ಅಭಿನಯಿಸಿದ್ದರು. ಕಳೆದ ವರ್ಷ ಹೇಳಿದ್ದರು- ಲಾಕ್ಡೌನ್ ನನ್ನ ಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿಸಿತ್ತು ಎಂದು.


ಆದರೆ ಅವರು ವೃದ್ಧಾಶ್ರಮದಲ್ಲಿ ವಾಸಿಸುವ ಸುದ್ದಿಯನ್ನು ಖಂಡಿಸಿದ್ದರು .ಸತೀಶ್ ಅವರು ಟಿವಿಯಲ್ಲಿ ಮಹಾಭಾರತ ಹೊರತಾಗಿ ,ವಿಕ್ರಂ ಬೇತಾಳದಲ್ಲೂ ಅಭಿನಯಿಸಿದ್ದರು. ಅನೇಕ ಫಿಲ್ಮ್ ಗಳಲ್ಲೂ ಅಭಿನಯಿಸಿದ್ದರು. ಮುಂಬೈನಿಂದ ಪಂಜಾಬ್ ಗೆ ಹೋದನಂತರ ಒಂದು ಅಭಿನಯ ಶಾಲೆಯನ್ನು ತೆರೆದರು. ಅದರಲ್ಲಿ ಅವರ ಯಶಸ್ಸು ಕಾಣಲಿಲ್ಲ .
೨೦೧೫ ರಲ್ಲಿ ಅವರು ಅಪಘಾತಕ್ಕೀಡಾಗಿ ಎರಡೂವರೆ ವರ್ಷ ತನಕ ಆಸ್ಪತ್ರೆಯಲ್ಲಿದ್ದರು. ನಂತರ ವೃದ್ಧಾಶ್ರಮದಲ್ಲಿ ಎರಡು ವರ್ಷ ಇದ್ದರು.ಅಲ್ಲಿಂದ ಬಂದು ನಂತರ ಅವರು ಬಾಡಿಗೆ ರೂಮಿನಲ್ಲಿ ವಾಸಮಾಡತೊಡಗಿದ್ದರು.