ಅಜಯ್ ದೇವಗಣ್ ಅಭಿನಯದ ’ಭುಜ್: ದ ಪ್ರೈಡ್ ಆಫ್ ಇಂಡಿಯಾ’ ಆಗಸ್ಟ್ ೧೫ ರಂದು ಬಿಡುಗಡೆ

ನಟ ಅಜಯ್ ದೇವಗಣ್ ಅಭಿನಯದ ’ಭುಜ್: ದ ಪ್ರೈಡ್ ಆಫ್ ಇಂಡಿಯಾ’ ಇದೇ ವರ್ಷ ಆಗಸ್ಟ್ ೧೫ರಂದು ಓಟಿಟಿ ಪ್ಲಾಟ್ ಫಾರ್ಮ್ ಡಿಸ್ನಿಪ್ಲಸ್ ಹಾಟ್ ಸ್ಟಾರ್ ಇದರಲ್ಲಿ ಬಿಡುಗಡೆಗೊಳ್ಳಲಿದೆಯಂತೆ.
ಫಿಲ್ಮ್ ಗೆ ಸಂಬಂಧಿಸಿದ ಸಮೀಪವರ್ತಿಗಳಿಂದ ಈ ವಿಷಯ ತಿಳಿದು ಬಂದಿದೆ. ಮೇಕರ್ಸ್ ಗಳಿಗೆ ಈ ಫಿಲ್ಮ್ ನ ರಿಲೀಸ್ ಸಮಯ ಆಗಸ್ಟ್ ೧೫ ಉತ್ತಮವಾಗಿದೆ ಎಂಬ ನಂಬಿಕೆ ಇದೆ.ಒಂದೆಡೆ ದೇಶಭಕ್ತಿಯ ಥೀಮ್ ,ಮತ್ತೊಂದೆಡೆ ಅಜಯ್ ದೇವಗಣ್ ರ ಪಾತ್ರ ಇದ್ದುದರಿಂದ ಈ ಫಿಲ್ಮ್ ಹೊಸ ರೆಕಾರ್ಡ್ ಮಾಡಬಹುದು ಎನ್ನುವ ಭರವಸೆ ಇರಿಸಿದ್ದಾರೆ.
ಅಭಿಷೇಕ್ ದುಧೈಯಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಫಿಲ್ಮ್ ನಲ್ಲಿ ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಶರದ್ ಕೇಲ್ಕರ್, ಎಮೀ ವಿರ್ಕ್ ಅವರೂ ಅಭಿನಯಿಸಿದ್ದಾರೆ. ಈ ಫಿಲ್ಮ್ ನ ಕಥೆ ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದ ಸಮಯ ಗುಜರಾತ್ ನ ಒಂದು ಹಳ್ಳಿಯ ೩೦೦ ಮಹಿಳೆಯರು ಬಾಂಬು ಸ್ಫೋಟದ ಪ್ರಯುಕ್ತ ಹಾಹಾಕಾರಕ್ಕೆ ಒಳಗಾದಾಗ ಆ ಹಳ್ಳಿಯನ್ನು ಮತ್ತೆ ಕಟ್ಟಿದ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಸಹಾಯ ನೀಡಿದ್ದರ ಕತೆ.

ಮುಂಬಯಿ ಏರ್ಪೋರ್ಟ್ ನಲ್ಲಿ ಪತ್ರಕರ್ತರುಗಳಿಗೆ ಹಿತವಚನ ಹೇಳಿದ ವರುಣ್ ಧವನ್

ನಟ ವರುಣ್ ಧವನ್ ಅರುಣಾಚಲ ಪ್ರದೇಶದ ಜೀರೋ ದಲ್ಲಿ ಫಿಲ್ಮ್ ’ಭೇಡಿಯಾ’ ಇದರ ಶೂಟಿಂಗ್ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ. ಮೊನ್ನೆ ರಾತ್ರಿ ಅವರು ಪತ್ನಿ ನತಾಶಾ ದಲಾಲ್ ಜೊತೆಗೆ ಮುಂಬೈ ಏರ್ಪೋರ್ಟ್ ನಲ್ಲಿ ಇಳಿದರು.


ಈ ಸಂದರ್ಭದಲ್ಲಿ ಅವರು ಕೊರೋನಾ ಸುರಕ್ಷತೆಯ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದ್ದರು. ಆದರೆ ಏರ್ಪೋರ್ಟ್ ನಲ್ಲಿ ಸ್ವತಂತ್ರ ಪತ್ರಕರ್ತರುಗಳು (ಪಾಪರಾಝಿ) ವರುಣ್ ಮತ್ತು ನತಾಶಾರನ್ನು ಸುತ್ತುವರಿದ ಘಟನೆ ಕಾಣಿಸಿತು.ಆವಾಗ ವರುಣ್ ತುಂಬಾ ಬೇಸರಗೊಂಡರು.
“ನೀವೆಲ್ಲ ಜವಾಬ್ದಾರಿಯುತ ಜನರು. ಗುಂಪು ಸೇರಬಾರದು.ಇದು ತಪ್ಪು. ಈಗ ಕೊರೊನಾ ಕಾಲ” ಎನ್ನುತ್ತಾ ಅವರು ಮುಂದೆ ಸಾಗಿದರು. ಅನಂತರ ಪಾರ್ಕಿಂಗ್ ಏರಿಯಾಕ್ಕೆ ಬಂದಾಗ ಫ್ಯಾನ್ಸ್ ಒಬ್ಬ ಅವರ ಫೋಟೋ ತೆಗೆಯಲು ಇದೆ ಎಂದು ವಿನಂತಿಸಿದ.


ಆದರೆ ವರುಣ್ ಧವನ್ ಅವರು ಅದನ್ನೂ ನಿರಾಕರಿಸುತ್ತಾ “ಕ್ಷಮಿಸಿ, ಈಗ ಕೊರೊನಾ ವೈರಸ್ ಮಹಾಮಾರಿಯ ಕಾರಣ ಇದಕ್ಕೆಲ್ಲಾ ಅವಕಾಶ ಇಲ್ಲ” ಎಂದುಹೇಳಿ ಕಾರಲ್ಲಿ ಕೂತರು. ಮುಂಬೈ ಏರ್ಪೋರ್ಟ್ ಹೊರಗಡೆ ಇಂತಹ ಪತ್ರಕರ್ತ ಫೋಟೋಗ್ರಾಫರ್ ಗಳ ದೊಡ್ಡ ಪಡೆಯೇ ಇದ್ದು ಯಾವ ಸೆಲೆಬ್ರಿಟಿ ಕಂಡುಬರುತ್ತಾರೋ ಅವರನ್ನು ಬೆನ್ನಟ್ಟುತ್ತಾರೆ.

ನಟ ಮನೋಜ್ ಬಾಜಪೇಯಿ ಅವರಿಗೆ ೫೧

ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರಿಗೆ ೫೧ ವರ್ಷವಾಯಿತು. ಭಾರತ-ನೇಪಾಳ ಗಡಿಯಲ್ಲಿರುವ ಬಿಹಾರದ ಬೆಲ್ವಾ ಗಾಂವ್ ಎಂಬಲ್ಲಿ ೨೩ ಏಪ್ರಿಲ್ ೧೯೬೯ ರಂದು ಜನಿಸಿದವರು.
ಇತ್ತೀಚೆಗೆ ಮನೋಜ್ ಅವರ ವೆಬ್ ಸೀರೀಸ್ ’ಸೈಲೆನ್ಸ್: ಕ್ಯಾನ್ ಯು ಹಿಯರ್ ಇಟ್’ ರಿಲೀಸ್ ಆಗಿತ್ತು. ಇದಕ್ಕೆ ಬಹಳ ಪ್ರಶಂಸೆಗಳು ಬಂದಿವೆ. ಇಂದು ಮನೋಜ್ ಬಾಲಿವುಡ್ ನ ಪ್ರಸಿದ್ಧ ನಟರಲ್ಲಿ ಒಬ್ಬರು. ಆದರೆ ಒಂದು ಸಮಯ ಅವರಿಗೆ ಬಹಳ ಸ್ತ್ರಗಲ್ ಮಾಡಬೇಕಾಗಿತ್ತು. ಎಲ್ಲಿಯವರೆಗೆ ಅಂದರೆ ಅವರಿಗೆ ಸುಸೈಡ್ ಮಾಡಬೇಕು ಎಂದು ಅನ್ನಿಸಿದ್ದೂ ಇದೆಯಂತೆ.


“ನಾನು ರೈತನ ಮಗ. ಬಿಹಾರದ ನಮ್ಮ ಊರಲ್ಲಿ ಐವರು ಸಹೋದರ ಸಹೋದರಿಯರ ನಡುವೆ ಬೆಳೆದವ. ನಾವು ಸಾಮಾನ್ಯ ಜೀವನ ಸಾಗಿಸುತ್ತಿದ್ದವರು. ಆದರೆ ನಗರಕ್ಕೆ ಬಂದಾಗ ನಾವು ಟಾಕೀಸ್ ಗಳಿಗೆ ತಪ್ಪದೆ ಹೋಗುತ್ತಿದ್ದೆವು. ನಾನು ಅಮಿತಾಭ್ ಬಚ್ಚನ್ ರ ಬಹಳ ದೊಡ್ಡ ಅಭಿಮಾನಿ. ಅವರಂತೆ ಆಗಲು ಚಿಕ್ಕಂದಿನಲ್ಲಿಯೇ ಕನಸು ಕಂಡಿದ್ದೆ. ನಾನು ಒಂಬತ್ತು ವರ್ಷ ಪ್ರಾಯದಲ್ಲಿಯೇ ಅಭಿನಯಿಸಿದ್ದೆ. ನನಗೆ೧೭ವರ್ಷವಾದಾಗ ಢೆಲ್ಲಿ ಯುನಿವರ್ಸಿಟಿಗೆ ಹಾಜರಾದೆ.ನಾನು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ.ಈ ಬಗ್ಗೆ ಯಾವುದೇ ಸರಿಯಾದ ಐಡಿಯಾ ನನ್ನಲ್ಲಿ ಇರಲಿಲ್ಲ. ನಾನು ತಂದೆಗೊಂದು ಲೆಟರ್ ಬರೆದೆ. ನನ್ನ ಮೇಲೆ ಸಿಟ್ಟು ಮಾಡದೇ ಅವರು ನನಗೆ ೨೦೦ರೂ ಕಳಿಸಿದರು.” ಎಂದು ನೆನಪು ಮಾಡಿಕೊಳ್ತಾರೆ.


“ನಾನು ಔಟ್ ಸೈಡರ್ .ಹೊರಗಿನಿಂದ ಬಂದವ. ಹೊಸ ವಾತಾವರಣದಲ್ಲಿ ಅಡ್ಜಸ್ಟ್ ಆಗಲು ಬಹಳ ಸಮಯ ಹಿಡಿಯಿತು. ಇಂಗ್ಲೀಷ್ ಕಲಿತೆ. ನಂತರ ಎನ್ ಎಸ್ ಡಿ ಗೆ ಅರ್ಜಿ ಹಾಕಿದೆ.ಆದರೆ ಮೂರು ಸಲವೂ ನಾನು ರಿಜೆಕ್ಟ್ ಆದೆ. ಆತ್ಮಹತ್ಯೆಗೆ ಪ್ರಯತ್ನಿಸುವಂತೆಯೂ ಆಗಿತ್ತು. ಆವಾಗ ನನ್ನ ಸ್ನೇಹಿತರು ನನ್ನ ಬಳಿಯೇ ಮಲಗುತ್ತಿದ್ದರು, ನನ್ನನ್ನು ಏಕಾಂಗಿಯಾಗಿ ಬಿಡುತ್ತಿರಲಿಲ್ಲ.” ಎಂದು ಆತ್ಮಹತ್ಯೆಗೆ ಮನಸ್ಸು ಮಾಡಿದ್ದನ್ನು ನೆನಪಿಸಿ ಭಾವುಕರಾಗುತ್ತಾರೆ.
“ಒಂದು ದಿನ ನಾನು ಚಹಾದಂಗಡಿಯಲ್ಲಿ ನಿಂತಿದ್ದೆ.ಅಲ್ಲಿಗೆ ತಿಗ್ಮಾಂಶು ಧೂಲಿಯಾ ನನ್ನನ್ನು ಹುಡುಕಿಕೊಂಡು ಬಂದರು ತಮ್ಮ ಡಬ್ಬಾ ಸ್ಕೂಟರ್ ನಲ್ಲಿ.
“ಶೇಖರ್ ಕಪೂರ್ ಬ್ಯಾಂಡಿಟ್ ಕ್ವೀನ್ ನಲ್ಲಿ ಪಾತ್ರ ನೀಡಲು ಇಚ್ಚಿಸಿದ್ದಾರೆ” ಎಂದಾಗ ಮುಂಬೈಗೆ ಹೊರಡಲು ತಯಾರಾದೆ ಎಂದು ಮುಂಬಯಿಗೆ ಬಂದದ್ದನ್ನು ಹೇಳುತ್ತಾರೆ.
ಮನೋಜ್ ಮುಂದುವರೆದು-“ಆರಂಭದಲ್ಲಿ ಬಹಳ ಕಠಿಣವಾಗಿತ್ತು .ಐವರು ಸ್ನೇಹಿತರ ಜೊತೆ ನಾವು ಚಾಳ್ ನಲ್ಲಿ ಒಂದು ರೂಮು ಬಾಡಿಗೆಗೆ ಹಿಡಿದೆವು. ಆದರೆ ಯಾವ ಪಾತ್ರವೂ ಸಿಗಲಿಲ್ಲ .ಒಂದು ಸಲ ಅಸಿಸ್ಟೆಂಟ್ ಡೈರೆಕ್ಟರ್ ನನ್ನ ಒಂದು ಫೋಟೋವನ್ನು ಹರಿದು ಹಾಕಿದರು. ಒಂದೇ ದಿನ ಮೂರು ಪ್ರೊಜೆಕ್ಟ್ ಗಳು ನನ್ನ ಕೈಯಿಂದ ಹೋಯಿತು.ನನ್ನ ಮೊದಲ ಶಾಟ್ ನ ನಂತರ ಗೆಟೌಟ್ ಎಂದು ನನಗೆ ಹೇಳಿದ್ದೂ ಇದೆ. ಬಾಡಿಗೆ ಕೊಡುವುದು, ಊಟ-ತಿಂಡಿ ಬಹಳ ಕಷ್ಟ ಆಯ್ತು.ವಡಾಪಾವ್ ಗೂ ಹಣ ಇಲ್ಲದ ದಿನ ಇದ್ದುವು……ನನ್ನ ಮುಖ ಹೀರೋಗೆ ಫಿಟ್ ಆಗಿರಲಿಲ್ಲ! ಅನೇಕರು ಎಣಿಸಿದ್ದರು- ನನಗೆ ದೊಡ್ಡ ಪರದೆಯಲ್ಲಿ ಅವಕಾಶ ಸಿಗಲಿಕ್ಕಿಲ್ಲ ಎಂದು.
೪ವರ್ಷ ಸ್ಟ್ರಗಲ್ ಮಾಡಿದೆ .ನಂತರ ನನಗೆ ಮಹೇಶ್ ಭಟ್ ಅವರ ಟಿವಿ ಸೀರೀಸ್ ನಲ್ಲಿ ಪಾತ್ರ ಸಿಕ್ಕಿತು.ಒಂದು ಎಪಿಸೋಡ್ ಗೆ ನನಗೆ ಒಂದೂವರೆ ಸಾವಿರ ರೂಪಾಯಿ ಸಿಗುತ್ತಿತ್ತು. ಅನಂತರ ಜನ ನನ್ನ ಕೆಲಸವನ್ನು ಗುರುತಿಸಿದರು. ನನಗೆ ಮೊದಲ ಬಾಲಿವುಡ್ ಫಿಲ್ಮ್ ಸಿಕ್ಕಿತು .ಆನಂತರ ’ಸತ್ಯಾ’ ಫಿಲ್ಮ್ ನಿಂದ ನನಗೆ ಬ್ರೇಕ್ ಸಿಕ್ಕಿತು. ನಂತರ ಅವಾರ್ಡ್ ಕೂಡ ಸಿಕ್ಕಿತು. ಇಂದು ೬೭ ಫಿಲ್ಮ್ ಗಳಲ್ಲಿ ನಾನು ಅಭಿನಯಿಸಿದ್ದೇನೆ” ಎಂದು ಖುಷಿ ವ್ಯಕ್ತಪಡಿಸುತ್ತಾರೆ.