ಅಜಯ್ ಗೆ ಗುರು ಹೊಸ ಚಿತ್ರ‌ನಿರ್ಮಾಣ

“ಕೃಷ್ಣನ ಲವ್ ಸ್ಟೋರಿ”,” ಕೃಷ್ಣ ಲೀಲಾ” ಯಶಸ್ವಿ ಚಿತ್ರಗಳನ್ನು ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಅಜಯ್ ರಾವ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ನಿರ್ದೇಶಕ ಶಶಾಂಕ್ ಈಗಾಗಲೇ ಕಥೆ ಸಿದ್ಧಪಡಿಸಿಕೊಂಡಿದ್ದು ಕೃಷ್ಣನ ಸರಣಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ‌.

ಆದರೆ ಈ ಬಾರಿ ಶಶಾಂಕ್ ನಿರ್ದೇಶನ ಮಾಡುತ್ತಿಲ್ಲ ಬದಲಾಗಿ ಅದರ ಜವಾಬ್ದಾರಿಯನ್ನು ಶಂಕರ್ ವಹಿಸಿಕೊಂಡಿದ್ದಾರೆ.

ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ನಾಯಕ ಅಜಯ್ ರಾವ್ ಅವರಿಗೆ ಪ್ರಮುಖ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಅವರು ಯಾರು ಎನ್ನುವ ಕುತೂಹಲವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.

ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ಅವರು ತಮ್ಮ ಜೊತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದ ಶಂಕರ್ ಅವರಿಗೆ ಚಿತ್ರ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ .ಹೊಸಚಿತ್ರಕ್ಕೆ ಗುರುದೇಶಪಾಂಡೆ ಬಂಡವಾಳ ಹಾಕುತ್ತಿದ್ದಾರೆ.

ಹೊಸ ಸಿನಿಮಾದ ಕಥೆ ವಿಭಿನ್ನವಾಗಿದೆ ಹೀಗಾಗಿ ಅಜಯ್ ರಾವ್ ಜೊತೆ ಈ ಹಿಂದೆ ಮಾಡಬೇಕಾಗಿದ್ದ ಸಿನಿಮಾವನ್ನು ಪಕ್ಕಕ್ಕಿಟ್ಟು.ಹೊಸ ಕಥೆಯನ್ನು ಮಾಡಲು ಉದ್ದೇಶಿಸಿರುವುದಾಗಿ ನಿರ್ಮಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ.

ಹೊಸ ಚಿತ್ರದ ಮುಹೂರ್ತದ ಸಮಯದಲ್ಲಿ ಚಿತ್ರದ ಇನ್ನುಳಿದ ಮಾಹಿತಿಯನ್ನು ನೀಡಲು ಮುರುದೇಶ್ವರ ಮತ್ತು ಅವರ ತಂಡ ಮುಂದಾಗಿದೆ