ಅಜಯ್ ಕುಮಾರ್ ಪುತ್ರ   ಅರ್ಜುನ್  ಈಗ ನಾಯಕ

ಕಥೆಗಾರ ಅಜಯ್ ಕುಮಾರ್ ಪುತ್ರ  ಅರ್ಜುನ್ ” ಗನ್ಸ್ ಅಂಡ್ ರೋಸಸ್” ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ತೆರೆಯಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ.

ಅರ್ಜುನ್ ಗೆ ನಾಯಕಿಯಾಗಿ ಯಶ್ವಿಕ ನಿಷ್ಕಲ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಹೂರ್ತದ ನಂತರ ಮಾತಿಳಿದ   ನಿರ್ದೇಶಕ ಶ್ರೀನಿವಾಸ್ ಕುಮಾರ್   “ಗನ್ಸ್ ಅಂಡ್ ರೋಸಸ್” ಚಿತ್ರದಲ್ಲಿ ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಇರಲಿದೆ. ಹೊಸ ತನದ ಚಿತ್ರ ನೀಡುವ ಉದ್ದೇಶವಿದೆ ಎಂದರು.

ನಿರ್ಮಾಪಕ ಎಚ್. ಆರ್ ನಟರಾಜ್ ,ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎನ್ನುವ ಷರತ್ತಿನೊಂದಿಗೆ ಚಿತ್ರ ನಿರ್ಮಾಣ ಮಾಡುತ್ತಿದ್ದು ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ ಎಂದರು. ನಾಯಕ ಅರ್ಜುನ್ ಮಾತನಾಡಿ ಈ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ‌. ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ ಎಂದರೆ ನಾಯಕಿ ಯಶ್ವಿಕ ನಿಷ್ಕಲ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.

ಮಗ ನಾಯಕನಾಗಿದ್ದಾನೆ ಸಹಕಾರವಿರಲಿ ಎಂದು ಅಜಯ್ ಕುಮಾರ್ ಕೇಳಿಕೊಂಡರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕ ಶಶಿಕುಮಾರ್, ಛಾಯಾಗ್ರಹಕ ಜನಾರ್ದನ್ ಮಾತ್ತು ನಟರಾದ ಜೀವನ್ ರಿಚಿ ಹಾಗೂ ಹರೀಶ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು