ಅಜಯಸಿಂಗ್ ಸಚಿವರಾಗಲಿ ಎಂದು ನೆಲೋಗಿ ಬಲಭೀಮನ ಸನ್ನಿಧಾನದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ

ಕಲಬುರಗಿ,ಮೇ.16:ಜೇವರ್ಗಿಯ ಶಾಸಕ ಅಜಯಸಿಂಗ್ ಧರ್ಮಸಿಂಗ್ ಅವರು ನೂತನ ಸರ್ಕಾರದಲ್ಲಿ ಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಶಕ್ತಿಯ ದೈವ ಎಂದು ಕರೆಸಿಕೊಳ್ಳುವ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಅಜಯಸಿಂಗ್ ಅಭಿಮಾನಗಳು ಹನುಮಾನ ದೇವರ ಗುಡಿಯಲ್ಲಿ ಬಲಭೀಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಜನಪರ ಕೆಲಸ ಮಾಡಿಕೊಂಡು ಬಂದಿರುವ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ, ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಲಭಿಸಲಿ ಎಂದು ಎಲ್ಲರು ಪ್ರಾರ್ಥಿಸಿದರು.
ಡಾ.ಅಜಯಸಿಂಗ್ ಅವರು ಸತತವಾಗಿ ಮೂರು ಸಲ ಶಾಸಕರಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಅವರಿಗೆ ಈ ಸಲ ಸಚಿವ ಸ್ಥಾನ ನೀಡುವ ಮೂಲಕ ಕಲಬುರಗಿ ಜಿಲ್ಲೆಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಆಧ್ಯತೆ ನೀಡಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಆಂದೋಲಾ, ಜಿಪಂ ಮಾಜಿ ಸದಸ್ಯ ಸಕ್ರೆಪ್ಪಗೌಡ ಪಾಟೀಲ್ ಹರನೂರ, ಯುವ ನಾಯಕರಾದ ಬಸವರಾಜ ಬಿರಾದಾರ, ವಿಜಯಕುಮಾರ ಪಾಟೀಲ್ ಹಂಗರಗಿ ಅವರು ಪಕ್ಷದ ನಾಯಕರಿಗೆ ಕೋರಿದರು. ಅಜಯಸಿಂಗ ಅವರು 2013ರಲ್ಲಿಯೇ ಮಂತ್ರಿಯಾಗಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಈ ಸಲ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.
ಪ್ರಮುಖರಾದ ಬೈಲಪ್ಪ ನೆಲೋಗಿ, ಚಂದು ಹೊಸಮನಿ, ಭೀಮರಾಯ ಸಂದಿಮನಿ, ಭಗವಂತರಾಯ ಗುಜಗೊಂಡ, ಅಪ್ಪಾಸಾಬ ಹೊಸಮನಿ, ಭೂತಾಳಿ ಭಾಸಗಿ, ಭೀಮು ಕಾಚಾಪುರ, ರವಿ ವಿಭೂತಿ, ಶರಣಕುಮಾರ ಬಿಲ್ಲಾಡ, ಪವನಕುಮಾರ ವಳಕೇರಿ ಇತರರಿದ್ದರು.