ಅಚ್ಛೇದಿನ್ ಎಲ್ಲಿದೆ ? ಮೋದಿಜೀ ಗೆ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪ್ರಶ್ನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.1 :-  ಆರ್ಥಿಕ ತಜ್ಞ ಹಾಗೂ  ಕಾಂಗ್ರೆಸ್ ನ ಮಾಜಿ ಪ್ರಧಾನಿ  ಡಾ. ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಆರ್ಥಿಕ, ಸಾಮಾಜಿಕವಾಗಿ ಪ್ರಪಂಚದಲ್ಲೇ ದೇಶವು 43ನೇ ಸಾಲಿನಲ್ಲಿತ್ತು. ಆದರೆ ಇಂದು ಆಡಳಿತ ನಡೆಸುವ ಬಿಜೆಪಿ ಸರ್ಕಾರ  ಪ್ರತಿಯೊಬ್ಬ ಭಾರತೀಯರ ಮೇಲೆ ಸಾಲದ ಹೊರೆ ಹೊರುವಂತೆ ಮಾಡಿದ್ದೂ ಅಲ್ಲದೆ ರೈತರು ಪಡೆದು ಕೊಳ್ಳುವ ಸಾಮಗ್ರಿಗಳ ಮೇಲೂ ಜಿಎಸ್ ಟಿ ಹಾಕಿದ್ದು ಜನರಿಗೆ ನೀವು ಕೊಟ್ಟ ಕೊಡುಗೆ ಏನೂ ಪ್ರಧಾನಿ ಮೋದಿಜೀ ಎಲ್ಲಿದೆ ನಿಮ್ಮ ಅಚ್ಛೆದಿನ್ ಎಂದು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಪ್ರಶ್ನೆ ಹಾಕಿದರು.
ಅವರು ಭಾನುವಾರ ಪಟ್ಟಣದಲ್ಲಿರುವ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಜನಸಂಪರ್ಕ ಕಚೇರಿ ಬಳಿ ಆಯೋಜಿಸಿದ್ದ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನ  ನೆಹರು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶದ ನಾನಾ ಭಾಗದಲ್ಲಿ ಡ್ಯಾಂಗಳ ನಿರ್ಮಾಣ, ಆಹಾರ ಭದ್ರತೆ, ಕೃಷಿ, ಆರೋಗ್ಯ ಮಿಷನ್ ಸೇರಿ ನಾನಾ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ. ಆದರೆ, 10 ವರ್ಷಗಳಲ್ಲಿ ಮೋದಿ ಸರ್ಕಾರ ಯಾವ ಯೋಜನೆ ಮಾಡಿದೆ, ತೋರಿಸಲಿ ಎಂದು  ಈ.ತುಕಾರಾಮ್ ಸವಾಲು ಹಾಕಿದರು.
ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಮಾತನಾಡಿ, ಸುಳ್ಳು ಭರವಸೆ ನೀಡುವ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.ಅಖಂಡ ಬಳ್ಳಾರಿ ಲೋಕಸಭೆ ಹೆಚ್ಚಾಗಿ ಕಾಂಗ್ರೆಸ್ ನಾಯಕರನ್ನೇ ಗೆಲ್ಲಿಸಿದ ಕೀರ್ತಿ ಇದೆ. ಅಂಥವರ ಸಾಲಿನಲ್ಲಿ ಈ ಬಾರಿ ಕಾಂಗ್ರೆಸ್ ಸಮರ್ಥ ಹಾಗೂ ಅಖಂಡಜಿಲ್ಲೆಯಸರ್ವಸಮ್ಮತ ಅಭ್ಯರ್ಥಿಯಾಗಿ ಈ.ತುಕಾರಾಮ್ ಸ್ಪರ್ಧಿಸಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ. ಅದಕ್ಕಾಗಿ, ಎಲ್ಲಾ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಿಳಿಸಿದರು.
 ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, ವೈರತ್ವದ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದಿಂದ ಸಂವಿಧಾನ ಉಳಿಸುವ ಕೆಲಸ ಮಾಡುವುದು ಬಹು ಮುಖ್ಯವಾಗಿದೆ. ಇಡಿ, ಐಟಿ, ಸಿಬಿಐಗಳ ಮೂಲಕ ವಿಪಕ್ಷದವರನ್ನು ಹೆದರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ನೀವು ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಎರಡೂ ಅವಧಿಯಲ್ಲಿ ದೇಶದ ಮತದಾರರನ್ನು ಮೂರ್ಖರನ್ನಾಗಿ ಮಾಡಿ ಅಧಿಕಾರ ಹಿಡಿದಿದ್ದ ನಿಮ್ಮ ಆಟ ಈ ಬಾರಿ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಶೇ.80 ಜನರಿಗೆ ಅನುಕೂಲವಾಗಿದೆ. ಅದರಂತೆ ಲೋಕಸಭೆಯಲ್ಲಿ ಗೆಲುವು ಸಾಧಿಸಿ ಕೇಂದ್ರದ ಅಧಿಕಾರ ಹಿಡಿದಲ್ಲಿ ರೈತರಿಗೆ ಬೆಂಬಲ ಬೆಲೆ  ಜಿ ಎಸ್ ಟಿ ರದ್ದು ಸೇರಿದಂತೆ ಕುಟುಂಬದ ಮಹಿಳೆಗೆ ₹1ಲಕ್ಷ ನೀಡುವಂಥ ಗ್ಯಾರಂಟಿಗಳನ್ನು ಘೋಷಿಸಿದೆ. ಇಂಥ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಅವರಿಗೆ ಮತ ಹಾಕಿ ಬೆಂಬಲಿಸಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ  ಕೋಡಿಹಳ್ಳಿ ಭೀಮಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಖಂಡರುಗಳಾದ ಎನ್‌.ಟಿ. ತಮ್ಮಣ್ಣ, ನಾಗಮಣಿ ಜಿಂಕಾಲ್, ನರಸಿಂಹನಗಿರಿ ವೆಂಕಟೇಶ್, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ಕೋಗಳಿ ಮಂಜುನಾಥ, ಉದಯಜನ್ನು, ಕಾವಲಿ ಶಿವಪ್ಪನಾಯಕ, ಮಾದಿಹಳ್ಳಿ ನಜೀ‌ರ್, ತಾಪಂ ನಿವೃತ್ತ ಇಒ ಜಿ.ಎಂ.ಬಸಣ್ಣ, ಎಂ.ಬಿ.ಅಯ್ಯನಹಳ್ಳಿ ಅಜ್ಜನಗೌಡ, ಬಣವಿಕಲ್ಲು ಎರಿಸ್ವಾಮಿ, ಗುಡೇಕೋಟೆ ರಾಘವೇಂದ್ರ ರಾವ್ , ಟಿ.ಜಿ.ಮಲ್ಲಿಕಾರ್ಜುನ ಗೌಡ, ಜಿ. ಓಬಣ್ಣ, ಹಾಲಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಸವೇಶ್ವರ, ಉಪಾಧ್ಯಕ್ಷ ಸಿದ್ದೇಶ,ಸತೀಶ್. ಬಡೇಲಡಕು ಸತೀಶ, ಗೆದ್ದಲಗಟ್ಟೆ ಹನುಮೇಶ, ರಮೇಶ, ದಾದು, ನಾಗರಾಜ, ವೀರಭದ್ರಪ್ಪ, ಬಸವರಾಜ,ಸೇರಿದಂತೆ ಕೂಡ್ಲಿಗಿ ಬ್ಲಾಕ್ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು
ಜನರ ಶಾಪದಿಂದ ಬಿಜೆಪಿಯೇ ನಿಮ್ಮನ್ನು ಮುಗಿಸಿದೆ
ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದ ಅನಂತಕುಮಾರ್ ಹೆಗಡೆ, ಈಗ ಬಿಜೆಪಿ ಅಭ್ಯರ್ಥಿಯ ಕೈಗೆ ಸಿಗದಂತೆ ಕಾಣೆಯಾಗಿರುವ ನಳಿನ್ ಕುಮಾರ್ ಕಟೀಲ್, ಮೈಸೂರಿನಲ್ಲಿ ಪ್ರತಾಪ ಇಲ್ಲವೆಂಬುದು ಸಾಬೀತಾಗಿರುವ ಸಿಂಹ, ನಾಲಿಗೆ ಹರಿಬಿಡುವ ಈಶ್ವರಪ್ಪ ಸೇರಿ ಇತರರಿಗೆ ಜನರ ಶಾಪವೇ ತಟ್ಟಿರುವುದರಿಂದ ಅವರಿಗೆ ಟಿಕೆಟ್ ತಪ್ಪಿಸುವ ಮೂಲಕ ಬಿಜೆಪಿಯೇ ಅವರನ್ನು ಮುಗಿಸಿದೆ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ದೇಶದ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿನಲ್ಲಿ ಇಟ್ಟು ಲೋಕಸಭೆ ನಡೆಸುವುದು ಜನತಂತ್ರದ ವ್ಯವಸ್ಥೆಯೇ? ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ನ ಇಬ್ಬರು ಮುಖಂಡರಿಗೆ ಐಟಿ ನೋಟಿಸ್ ನೀಡಿದ್ದಾರೆ. ಇಂಥ ಬೆದರಿಕೆ ಹಾಕುವುದರ ಜತೆಗೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಮಯ ಬಂದಿದೆ. ಹೀಗಾಗಿ, ದೇಶದಲ್ಲಿ ಜನತಂತ್ರ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಕೇಂದ್ರದಲ್ಲಿ ಐಎನ್ ಡಿಐಎ ಅಧಿಕಾರ ಹಿಡಿಯಬೇಕು ಎಂದು ತಿಳಿಸಿದರು.