
ತಾಳಿಕೋಟೆ:ಮಾ.1: ನಾವೆಲ್ಲರೂ ಪರಮಾತ್ಮನ ವಂಶಸ್ಥರಾಗಿದ್ದು ಕಾಣುವ ದೇಹದೊಳಗೆ ಬಂದು ಪ್ರವೇಶಿಸತ್ತಕ್ಕಂತಹದ್ದು ಅದು ಪರಮಾತ್ಮನಿಂದ ಬಂದಂತಹದ್ದಾಗಿದೆ. ಗಳಿಕೆ ಬೇಕಾದುದ್ದನ್ನು ಗಳಿಸು ಆದರೆ ಇನ್ನೊಂದು ಸಂಪತ್ತು ಲೌಕಿಕ ಹಾಗೂ ಪಾರಮಾರ್ತಿಕ ಸಂಪತ್ತುಗಳಾಗಿವೆ ಎಂದು ಶ್ರೀ ಪಡೆಕನೂರ ದಾಸೋಹ ಮಠದ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.
ಮಂಗಳವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಮಂದಿರದ ಆವರಣದಲ್ಲಿ ಸಾಗಿಬಂದ ಶ್ರೀ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 8ನೇ ದಿನದಂದು ಪ್ರವಚನ ಮುಂದುವರೆಸಿ ಮಾತನಾಡುತ್ತಿದ್ದ ಅವರು ಲೌಕಿಕ ಹಾಗೂ ಪಾರಮಾರ್ತಿಕ ಸಂಪತ್ತು ಈ ಎರಡನ್ನು ಗಳಿಸಿಕೋ ಬರುವಾಗ ಬರಿಗೈಯಲ್ಲಿ ಬಂದಿದ್ದೇವೆ ಹೋಗುವಾಗಲೂ ಬರಿಗೈಯಲ್ಲಿ ದಿಗಂಬರಾಗಿ ಹೋಗಬೇಕಾಗಿದೆ ಎಂದರು. ಈ ಭೂಮಂಡಲದಲ್ಲಿ ಎಲ್ಲ ಮಾಡಿ ಈಮೇಲಿನ ಎರಡನ್ನು ಗಳಿಸಿಕೊ ಎಂದು ಪರಮಾತ್ಮ ಹೇಳಿದ ಲೋಕದಲ್ಲಿ ಬಾಳಿಕೋಂಡು ಉಂಬಲಿಕ್ಕೆ, ತೊಡಲಿಕ್ಕೆ, ಅಡ್ಡಾಡಲಿಕ್ಕಿ ವ್ಯವಹಾರ ಜೀವನ ಉಪಾಯಕ್ಕೆ ಲೌಕಿಕ ಸಂಪತ್ತು ಬದುಕಲು ಈ ಎಲ್ಲವೂ ಬೇಕು ಆದರೆ ಯಾವುದು ನಿಂದಲ್ಲ ಹೀಗೆ ಗಳಿಕೆಗೆ ಮುಂದಾಗಿ ಮನ ಬಂದಂತೆ ಅಪೇಕ್ಷಿಸಿ ತೃಪ್ತಿಯಾಗದೇ ಆಸೆ ಎಂಬುದು ನಿಲ್ಲಲಿಲ್ಲ ಅಸಂಖ್ಯಾತ ಸಂಖ್ಯೆ ಹಾಕುತ್ತ ಮನ ಬಂದಂತೆ ಸಂಪತ್ತನ್ನು ಗಳಿಕೆಮಾಡಲು ಮನುಷ್ಯನ ಮನುಸ್ಸು ಬೇಡುತ್ತ ಹೋರಟಿದೆ ಎಂದರು.
ಪರಮಾತ್ಮ ಹೇಳಿದ್ದು ಬರುವುದರಲ್ಲಿ ತೃಪ್ತಿ ಇರಲಿ ಆಸೆ ದುರಾಸೆ ಎಂಬುದು ಬೇಡ ಆಸೆ ದುರಾಸೆಯ ನೆನಪಾದಾಗ ನನ್ನನ್ನು ನೆನಪುಮಾಡಿಕೋ ಎಂದು ಪರಮಾತ್ಮ ಹೇಳಿದ್ದಾನೆ ಪಾರಮಾರ್ತ ಅನ್ನುವುದನ್ನೆ ಮರೆತ ಮನುಷ್ಯ ನೆಮ್ಮದಿಗಾಗಿ ಪರಮಾತ್ಮನನ್ನು ಗಳಿಸಿಕೊಂಡು ಪುಣ್ಯ ಗಳಿಸಿಕೋ ಎಂದು ಪರಮಾತ್ಮ ಹೇಳಿದ ಹಿಗೆ ಒಂದನ್ನು ಮತ್ತನ್ನು ಮಗದನ್ನು ಬೇಡುತ್ತ ಬೇಕೆನ್ನುವ ಬಯಕೆ ಹೆಚ್ಚಾಗಿ ಅಶಾಂತಿ ಹುಟ್ಟಲು ಕಾರಣವಾಗುತ್ತದೆಂದರು. ಮೊಹದಲ್ಲಿ ಮುಳುಗಿರಿವ ಮನುಷ್ಯನಿಗೆ ಬ್ರಾಂತಿ ಎಂಬುದಾಗಿದೆ ಸಂಪತ್ತು ಎಂಬ ಬ್ರಾಂತಿಯಾಗಿದೆ ಎಂದರು. ಏನೂ ಇರಲಾರದ್ದನ್ನು ಗಳಿಸಲೂ ಕಲಿಯಿರಿ ಎಂದು ಪರಮಾತ್ಮ ಹೇಳಿದ್ದಾನೆ ಅದರಂತೆ ಅಲ್ಲಮಪ್ರಭು ದೇವರು ಹೇಳಿದ್ದಾರೆಂದು ಶ್ರೀಗಳು ನುಡಿದರು. ಕೋಟಿ ಕೋಟಿ ವರ್ಷಗಳೂ ಕಳೆದು ಹೋದರು ಈ ಭೂಮಿಯ ಮೇಲೆ ಅನೇಕ ಜನರು ಆಗಿ ಹೋಗಿದ್ದಾರೆ ಅವರು ಏನೂ ತಂದಿಲ್ಲ ಏನೂ ವೈದಿಲ್ಲವೆಂದರು.
18-19 ವರ್ಷದ ಮಗ ಅಲ್ಲಮಪ್ರಭು ಮನೆಬಿಟ್ಟು ಹೋದದ್ದನ್ನು ಅರಿತ ತಂದೆ ತಾಯಿಯ ಕರುಳು ಕಿತ್ತು ಬರುತ್ತಿತ್ತು ಮೊಹದ ಮಮಕಾರನ ಮಗನನ್ನು ಜಗ್ಗುತ್ತಸಾಗಿತ್ತು ಆದರೆ ಅಲ್ಲಮ ಬರುವಾಗ ಕಾಯಂ ಮಗನಾಗಿ ಬಂದಿದ್ದಿಲ್ಲ ಶೂನ್ಯ ಸಂಪಾಧನೆಯ ಗಳಿಕೆ ಮಾಡಲು ಬಂದವ ಅಲ್ಲಮ ಬನವಾಸಿ ದೇಶಕ್ಕೆ ಹೊದಾಗ ಅಲ್ಲಿ ಸ್ಥಾಪನೆ ಗೊಂಡ ಮದುಕೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿರತಕ್ಕಂತಹ ರಾಜ ಮಹಾರಾಜರಿಗೆ ಮಕ್ಕಳಿರಲಿಲ್ಲ ಇದನ್ನು ಅರಿತ ಪರಮೇಶ್ವರ ಪಾರ್ವತಿ ಈ ದೇವತೆಗಳು ಚರ್ಚೆಗೆ ಒಳಪಟ್ಟು ಪರಮಾತ್ಮ ನನ್ನ ಜ್ಯೋತಿ ಎಂಬ ಅಲ್ಲಮನನ್ನು ಅಲ್ಲಿ ಕಳಿಸಿರುವೆ ಆತನನ್ನು ಮಾಯಾ ಎನ್ನುವಂತಹ ಶಕ್ತಿಗೆ ಸೋಲಿಸುವವರು ಯಾರು ಎಂದು ಪ್ರಶ್ನಿಸಿದಾಗ ಪಾರ್ವತಿ ಬನವಾಸಿ ರಾಜನ ಪತ್ನಿಯ ಉದರದಲ್ಲಿ ಬಂದು ಮಾಯಾದೇವಿ ಎಂಬ 9 ರೂಪ ಹೊತ್ತ ಪಾರ್ವತಿಯೂ ಅಲ್ಲಮನನ್ನು ಸೋಲಿಸಲು ಮೋಹಿನಿ ರೂಪ ತಾಳಿ ಬರುತ್ತಾಳೆ.
ರಾಜನ ಮಗಳಾಗಿ ಜನ್ಮ ತಾಳಿದ ಮೋಹಿನಿಯ ರೂಪ ಆಕೆಯನ್ನು ನೊಡಿದ ಜನತೆ ಆಕೆಯ ರೂಪ ಲಾವಣ್ಯಕ್ಕೆ ಜನತೆ ಮರಳಾಗುವಂತಹ ಶ್ಥಿತಿ ಉಂಟಾಗಿತ್ತು ಪ್ರತಿ ದಿನ ಮೋಹಿನಿ ಭರತನಾಟ್ಯದೊಂದಿಗೆ ಪೂಜೆ ಸಲ್ಲಿಸುತ್ತಿದ್ದ ಆಕೆಯ ಕಾಲಿಗೆ ಮಣ್ಣು ತಗುಲಬಾರದೆಂದು ಹಡದಿ ಹಾಸುತ್ತ ಸಾಗುತ್ತಿದ್ದರು, ಸೂರ್ಯನ ಕಿರಣ ಬಿಳಬಾರದೆಂದು ನೆರಳು ಮಾಡುತ್ತಿದ್ದರು. ಭೂಮಂಡಲದಲ್ಲಿಯ ಅಲ್ಲಮನನ್ನು ದೊರಕಿಸಿ ಕೊಡು ಎಂದು ಮದುಕೇಶ್ವರರ ಮೇಲೆ ಅರಿವನ್ನು ಇಟ್ಟ ಮೋಹಿನಿ ಆತನೊಂದಿಗೆ ವಿವಾಹವಾಗುವ ಅಪೇಕ್ಷೆಗೆ ಮುಂದಾಗುತ್ತಾಳೆ. ಪೂಜೆಗೆ ಬರುವಾಗ ಹೋಗುವಾಗ ಬಂಗಾರದ ಹೂಗಳನ್ನು ಒಡವೆಗಳನ್ನು ಚಿಲ್ಲಿ ಚೆಲ್ಲಿ ದಾನ ಮಾಡುತ್ತಿದ್ದಳು ಮೊಹಿನಿ. ಅಲ್ಲಮಪ್ರಭು ದೇವ ಬನವಾಸಿ ಮದೆಕೇಶ್ವರ ದೇವಾಲಯಕ್ಕೆ ಬಂದಾಗ ಮೃದಂಗ ನಗಾರಿ ಬಾರಿಸುತ್ತಿದ್ದ ಇದರಿಂದ ಮದುಕೇಶ್ವರ ಕುಣಿಯಲಿಕ್ಕೆ ಹತ್ತಿದ ಇಡಿ ಭೂಮಂಡಲವೇ ಕುಣಿಯಿವಂತಾಗಿ ಪರಮಾತ್ಮನೂ ಕೂಡ ಭರತನಾಟ್ಯ ಮಾಡಲಿಕ್ಕೆ ಹತ್ತಿದ ಈ ವಿಷಯ ಮೋಹಿನಿಗೆ ಮುಟ್ಟುತ್ತದೆ ಇದನ್ನು ಅರಿತ ಮೋಹಿನಿ ಬಂದು ಅಲ್ಲಮ ಬಾರಿಸುವ ಮೃದಂಗ ವಾದ್ಯದಂತೆಕುಣಿದು ಕುಣಿದು ಕೆಳಗೆ ಬಿಳುತ್ತಾಳೆ ಭಾವಪರ್ವಶದಿಂದ ಬಿದ್ದ ಮೋಹಿನಿಯನ್ನು ಕರೆದು ಕೊಂಡು ಅರಮನೆಗೆ ಹೊಗುತ್ತಾರೆ ಆದರೂ ಅಲ್ಲಮನ ಮೇಲೆ ಪ್ರೀತಿ ಹೆಚ್ಚಾಗಿ ಅಲ್ಲಮನನ್ನು ಅರಮನೆಗೆ ಕರೆದುಕೊಂಡು ಬರಲು ಧೂತರನ್ನು ಕಳಿಸುತ್ತಾಳೆ ಅಲ್ಲಮ ಮೋಹಿನಿ ಹತ್ತಿರ ಹೋದಾಗ ಸಿದ್ಧ ಸಿವರೂಪಿಯಾದಂತಹ ಅಲ್ಲಮನ್ನು ನೋಡಿ ಅಂತರಂಗದಿಂದ ನಾಟ್ಯ ಮಾಡಿದ ಮೋಹಿನಿಯನ್ನು ನೋಡಿ ಇದೊಮದು ಶೃಂಗಾರ ಮಾಡಿದ ಗೊಂಬೆಯೆಂದು ತಿಳಿದ ಆತ ಪಂಚೇದ್ರೀಯನ್ನು ಕಟ್ಟಿಕೊಂಡು ಈ ಗೊಂಬೆ ಕುಣಿಯಲಿಕ್ಕೆ ಹತ್ತಿದೆ ಎಂದು ಅಲ್ಲಮ ತಿಳಿಯುತ್ತಾನೆ. ಆತ್ಮ ಇದೆ ಪರಮಾತ್ಮ ಇದ್ದಾನೆ ಬೆಂಕಿ ಇದ್ದಹಾಗೆ ಇದ್ದಾನೆ ಆದರೆ ಕಾಣುವುದಿಲ್ಲ ಬಯಲುಗಂಬ ಬಯಲಾಗಿ ಹೊಗುತ್ತದೆ ಎಂದು ಅರಿಯದೆ ಅಲ್ಲಮನನ್ನು ಅಪ್ಪಿಕೊಳ್ಳಲು ಮೋಹಿನಿ ಬಂದಾಗ ಆತ ಗಾಳಿಯಂತೆ ಕೈಗೆ ತಗಲುವುದೆ ಇಲ್ಲ ಮಾಯೆಯಂತೆ ಆಗುತ್ತಿದ್ದ ಅಲ್ಲಮ. ಇದಕ್ಕೆ ಅಚ್ಚಳಿಯದ ಆಭರಣದಂತಿರುವ ಅಲ್ಲಮನ ಸದ್ಗುಣಗಳೇ ಕಾರಣವೆಂದು ಶ್ರೀಗಳು ಪ್ರವಚನ ಮುಂದುವರೆಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ, ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ, ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತ ಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.