ಅಚ್ಚರಿ ಮೂಡಿಸಿದ ಗೆಲುವು

ಲಕ್ಷ್ಮೇಶ್ವರ, ಡಿ 31- ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿಗೆ 1ನೇಯ ವಾರ್ಡಿನಿಂದ ಶಿಗ್ಲಿ ಬಸ್ಯಾ ಎಂದೇ ಖ್ಯಾತಿ ಪಡೆದಿರುವ ಆತನ ಪತ್ನಿ ಗುಲಜಾರ ಬಾನು ಶೇಖ್ ತಮ್ಮ ಸಮೀಪದ ಪ್ರತಿಸ್ಪರ್ಧಿಯನ್ನು ಎರಡು ಮತಗಳಿಂದ ಸೋಲಿಸಿ ಆಯ್ಕೆ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಶಿಗ್ಲಿ ಬಸ್ಯಾ ರಾಜ್ಯದ ಅನೇಕ ಕಡೆ ಕಳ್ಳತನಗಳಲ್ಲಿ ಜೈಲು ವಾಸ ಅನುಭವಿಸಿದ್ದಲ್ಲದೆ ಅನೇಕ ಬಾರಿ ಮೊಬೈಲ್ ಟವರ್, ಮರದ ತುತ್ತತುದಿಯಲ್ಲಿ ಬೆದರಿಕೆ ಒಡ್ಡುವ ಮೂಲಕ ರಾಜ್ಯದ ಗಮನ ಸೆಳೆದ್ದಿದ್ದಾನೆ.
ಶಿಗ್ಲಿ ಬಸ್ಯಾನನ್ನು ದಿವಂಗತ ರವಿ ಬೆಳಗೆರೆ ಅವರು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸಂದರ್ಶನ ಕೂಡ ಮಾಡಿದ್ದರು.