ಅಚಲವಾದ, ಪ್ರಶ್ನಾತೀತವಾದ, ಪವಿತ್ರ ಸಂಬಂಧವೇ ಭಕ್ತಿ

Oplus_131072

ಬಸವಕಲ್ಯಾಣ:ಜೂ.15: ಗುರುವಿನೊಂದಿಗೆ, ಭಗವಂತನೊಂದಿಗೆ ಇರುವ ಅಚಲವಾದ ಪ್ರಶ್ನಾತೀತವಾದ ಪವಿತ್ರ ಸಂಬಂಧವೇ ಭಕ್ತಿ, ದೇವರ ಸರ್ವಜ್ಞತ್ವವನ್ನು ಪ್ರಶ್ನಿಸದೆ ಕಿಂಚಿತ್ತು ಅನುಮಾನಿಸದೆ ನಿರಾಳತೆಯಿಂದ ಇರುವವನೇ ಭಕ್ತ ಎಂದು ಹಾರಕೂಡನ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಯಲ್ಲದಗುಂಡಿ ಗ್ರಾಮಸ್ಥರಿಂದ ಶುಕ್ರವಾರ ಗ್ರಾಮದಲ್ಲಿ ಏರ್ಪಡಿಸಲಾದ ಭಕ್ತಿ ನಮನ ಹಾಗೂ 659ನೇ ತುಲಾಭಾರ ಸಮಾರಂಭದ ಸಾನಿಧ್ಯ ಮಾತನಾಡಿದ ಶ್ರೀಗಳು, ಭಕ್ತಿ, ಶ್ರದ್ಧೆ, ದೈವಾರ್ಪಿತದಿಂದ ಕೂಡಿದ ಸತ್ಕಾರ್ಯಗಳು ಬದುಕಿನ ಸಾತ್ವಿಕ ವೈಭವವನ್ನು ಹೆಚ್ಚಿಸುತ್ತವೆ ಎಂದರು.
ಸರ್ವಶಕ್ತ, ಸರ್ವವ್ಯಾಪಿ, ಸರ್ವಜ್ಞನಾದ ಭಗವಂತ ಸರ್ವಕಾಲಕ್ಕೂ ಶುಭವನ್ನೇ ಬಯಸುವಂಥವನಾಗಿರುತ್ತಾನೆ ಎಂಬ ಭಾವದಿಂದ ಬದುಕಿದರೆ ಶಿವಾನುಭಾವ ಪಡೆಯಲು ಸಾಧ್ಯವಾಗುತ್ತದೆ. ಭಕ್ತಿ ಪರಂಪರೆಯಲ್ಲಿ ವಿಶೇಷತೆಯನ್ನು ಹೊಂದಿರುವ ಯಲ್ಲದಗುಂಡಿ ಗ್ರಾಮದ ಜನತೆ ಪರಮೇಶ್ವರನ ದಿವ್ಯ ಪ್ರಭೆಯಲ್ಲಿ ಯಾವತ್ತೂ ಸು:ಖಿಯಾಗಿರಲಿ, ಧರ್ಮ ಕಾರ್ಯಗಳು ನಿರಂತರವಾಗಿ ಸಾಗಿ ಬರಲಿ, ಸರ್ವ ಮಂಗಳವಾಗಲಿ ಎಂದು ಶುಭ ಹಾರೈಸಿದರು.
ಮಲ್ಲಯ್ಯ ಶಾಸ್ತ್ರೀ ಐನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮೇಘರಾಜ ನಾಗರಾಳೆ ಹಾರಕೂಡ, ಅಯ್ಯಪ್ಪ ಸಜ್ಜನ, ಮಹಾದೇವ ಪೂಜಾರಿ, ಶಿವರಾಜ ಪಾಟೀಲ, ಪಂಡಿತರಾವ ಪಾಟೀಲ, ಕಾಶಪ್ಪ ದೇಗಾಂವ, ನಾಗೇಶ ಮಹಾಜನ, ಮಹಾಂತಪ್ಪ ಪಾಟೀಲ, ವಿಠ್ಠಲ ಸಾಜೆ, ಮಹಾಂತಪ್ಪ ಸಿರಗಾಪುರ, ಜಗನ್ನಾಥ ಕುಂಬಾರ, ಮಹಾದೇವಪ್ಪಾ ಖೂಬಾ, ಗೋಪಾಲರಾವ ಪೆÇಲೀಸ್ ಪಾಟೀಲ, ಮಹಾದೇಪ್ಪಾ ಭಂಗೆ, ಪುಂಡಲೀಕ ರೆಡ್ಡಿ, ದಿಗಂಬರ ರೆಡ್ಡಿ, ಕಲ್ಯಾಣರಾವ ಭಂಗೆ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ, ಶರಣಪ್ಪ ಸುಂಠಾಣ ಸಂಗೀತ ಸಂಗೀತ ಸೇವೆ ಸಲ್ಲಿಸಿದರು. ಪಂಡಿತಾರಾವ ಮಾಲಿ ಪಾಟೀಲ ಸ್ವಾಗತಿಸಿದರೆ, ರವಿ ಕೋಟೆ ನಿರೂಪಿಸಿದರು. ಶಿವರಾಜ ತಾಟೆ ವಂದಿಸಿದರು.