ಅಚಲಗುರು ಗೀತಾ ಮಂದಿರದಲ್ಲಿ 60 ನೇ ವಾರ್ಷಿಕ ಪಾದುಕ ಪೂಜಾ ಮಹೋತ್ಸವ

ಗುರುಮಠಕಲ್: ನ.5:ತಾಲೂಕು ಸಮಿಪದಲ್ಲಿರುವ ಶ್ರೀ ಮದ್ ಬೃಹದ್ವಾಶಿಷ್ಟಸಿದ್ದಾಂತ ಶ್ರೀ ಶ್ರೀ ಧರ ಶಿವರಾಮ ದೀಕ್ಷಿತಾಚಲಗುರು ಪೀಠ ಶ್ರೀ ಮಂತ ಸದಾನಂದಾ ಸಾಯನಾಚಲ ಗುರು ಸೇವಾ ಸಮಿತಿ ಅಚಲಗುರುಗೀತಾ ಮಂದಿರ ಚಂಡ್ರಿಕಿ ಗ್ರಾಮದಲ್ಲಿ ಶ್ರೀ ಮತ್ ಶ್ರೀ ಸಿದ್ದಾಚಲ ಸ್ವಾಮಿಯವರ 60 ನೇ ವಾರ್ಷಿಕ ಪಾದುಕ ಪೂಜಾ ಹಾಗೂ ಶ್ರೀ ಯವರ ಪ್ರೀಯ ಶಿಷ್ಯ ರಾದಂತ ಶ್ರೀ ಮತಿ ಮಂತ ಸುಶೀಲಮಾಂಬ ಸಮೇತ ಶ್ರೀ ಸದಾನಂದ ಮಂತ ಸಾಯನಚಲ ಸ್ವಾಮಿಯವರ 24 ನೇ ವಾರ್ಷಿಕ ಪಾದುಕೆಯ ಪೂಜಾ ಮಹೋತ್ಸವ ಕಾರ್ಯಕ್ರಮವು ಶುಕ್ರವಾರ ದಿನದಂದು ಗ್ರಾಮಸ್ಥರ ಸಹಕಾರದೊಂದಿಗೆ ಹಾಗೂ ಶಿಷ್ಯ ಪ್ರಶಿಷ್ಯರ ಸಹಕಾರದೊಂದಿಗೆ ಬಹು ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ನಾಯಕ ರಾದ ಶರಣಗೌಡ ಕಂದಕೂರ ರವರು ಶ್ರೀ ಗುರು ಗಳ ದಿವ್ಯ ಸಾನಿಧ್ಯ ದಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ದರುಶನ ಪಡೆದರು. ಇಂತಹ ಭಕ್ತಿಯ ಕಾರ್ಯಕ್ರಮದಲ್ಲಿ ಶ್ರೀ ಗುರುಮಂದಿರದ ಕಾರ್ಯದರ್ಶಿ ಶ್ರೀ ಮಾತಾ ಸರೊಜಮಾಂಬ ಸಮೇತ ಶ್ರೀ ಮಂತ ಸೇವಾ ನಂದ ಗುರುಮೂರ್ತಿ ಸ್ವಾಮಿಜಿಯವರು. ಪೂಜ್ಯ ರಾದ ವೇಣುಗೋಪಾಲ ಶರ್ಮ.ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಆನಂದಕುಮಾರ ವಿಶ್ವಕರ್ಮ. ಆನೂರು ಮಲ್ಲಿಕಾರ್ಜುನ. ಗುರುಮಠಕಲ್ ಪುರಸಭೆ ಅಧ್ಯಕ್ಷ ರಾದ ಪಾಪಣ್ಣ ಮನ್ನೆ. ಜಿ ತಮ್ಮಣ್ಣ. ಆಶನ್ನ ಬುದ್ಧ .ಬಸವರೆಡ್ಡಿ ಎಂ ಟಿ ಪಲ್ಲಿ. ಜ್ಞಾನೇಶ್ವರ ರೆಡ್ಡಿ. ಅನಂತಪ್ಪ ಯದ್ಲಪೂರ. ಸುರೇಶ್ ಅವುಂಟಿ. ಪವನ್ ಕುಮಾರ್. ರವಿ ಕಂಬಳೆ. ಸುರೇಶ್ ಚಿನ್ನರಾಠೋಡ್ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.