ಹೊಸ ಕಲಾವಿದರ ” ಅಗ್ರಸೇನ” ಚಿತ್ರಕ್ಕೆ ನಟ ಡಾಲಿ ಧನಂಜಯ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ನಾವೆಲ್ಲಾ ಜೊತೆಯಲ್ಲಿದ್ದೇವೆ ಎನ್ನುವುದನ್ನು ಹೇಳಲು ಬಂದಿದ್ದೇವೆ.ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು
ಮಮತಾ ಜಯರಾಮರೆಡ್ಡಿ ನಿರ್ಮಾಣದ, ಮುರುಗೇಶ್ ಕಣ್ಣಪ್ಪ ನಿರ್ದೇಶನದ ಚಿತ್ರದಲ್ಲಿ ಅಮರ್ ವಿರಾಜ್ ಹಾಗೂ ರಚನಾ ದಶರಥ್ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಅಗಸ್ತ್ಯ ಬೆಳಗೆರೆ, ಭಾರತಿ ಹೆಗಡೆ, ಹಿರಿಯನಟ ರಾಮಕೃಷ್ಣ ಮತ್ತಿತರ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಮುರುಗೇಶ್ ಮಾತನಾಡಿ .ಆಕ್ಷನ್ ಫ್ಯಾಮಿಲಿ, ಲವ್, ಸೆಂಟಿಮೆಂಟ್ ಎಲ್ಲಾ ರೀತಿಯ ಅಂಶಗಳು ನಮ್ಮ ಚಿತ್ರದಲ್ಲಿವೆ ಸಹಕಾರವಿರಲಿ ಎಂದರು.
ನಿರ್ಮಾಪಕರಾದ ಮಮತಾ ಹಾಗು ಜಯರಾಂ ರೆಡ್ಡಿ ಮಾತನಾಡಿ ಇದೇ 23ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು
ಮತ್ತೊಬ್ಬ ನಟ ಅಗಸ್ಯ ಮಾತನಾಡಿ ತಂದೆ-ಮಗನ ಸಂಬಂಧದ ಕಥೆ ಒಂದು ಕಡೆಯಾದರೆ, ನಾಯಕ ತನ್ನ ಪ್ರೀತಿ ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎನ್ನುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದರು
ನಾಯಕ ಅಮರ್ ವಿರಾಜ್ ಮಾತನಾಡಿ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಕಂಟೆಂಟ್ ತುಂಬಾ ಸ್ಟ್ರಾಂಗ್ ಆಗಿದೆ. ಸಿಟಿಯ ಭಾಗದಲ್ಲಿ ಬರುತ್ತೇನೆ ಎಂದರೆ ನಟಿಯರಾದ ರಚನ ದಶರಥ ಮತ್ತು ಭಾರತಿ ಹೆಗಡೆ ಮಾತನಾಡಿದರು. ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಚಿತ್ರದಲ್ಲಿ 6 ಹಾಡುಗಳಿವೆ ಎಂದರು. ಆರ್.ಪಿ.ರೆಡ್ಡಿ ಛಾಯಾಗ್ರಹಣವಿದೆ.