ಅಗ್ರಸೇನಾ ಟೀಸರ್ ಬಿಡುಗಡೆ

ತಂದೆ ಮಗನ ಬಾಂಧವ್ಯ ಜೊತೆಗೆ ಪ್ರೀತಿಸುವ ಹೃದಯಗಳ ಬೆಲೆ ಎರಡರ ನಡುವಿನ ಸಂಘರ್ಷದ ಕಥನವನ್ನು ” ಅಗ್ರಸೇನಾ” ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕೌಟಂಬಿಕ ಕಥನ ಜೊತೆಗೆ ಸಾಹಸಕ್ಕೂ ಹೆಚ್ಚು ಒತ್ತು ನೀಡಿರುವ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಮುರುಗೇಶ್ ಕಣ್ಣಪ್ಪ, ಫ್ಯಾಮಿಲಿ ಡ್ರಾಮ, ಆಕ್ಷನ್ ಇದೆ. ಚಿತ್ರ ಚೆನ್ನಾಗಿ ಬರಲು ಟೀಮ್ ಕಾರಣ. ತಂದೆ ಮಗನ ಬಾಂಧವ್ಯ,ಪ್ರೇಮಿಯನ್ನು ಕಾಪಾಡಿಕೊಳ್ಳಲು ನಾಯಕ ಹೇಗೆ ಹೊರಾಡುತ್ತಾನೆ ಎನ್ನುವ ತಿರುಳು ಹೊಂದಿದೆ ಎಂದರು.

ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, ಇದೇ ತಿಂಗಳು 23 ಕ್ಕೆ ಬಿಡುಗಡೆಯಾಗಲಿದೆ. ಹಾಡುಗಳು ಬಗ್ಹೆ ಉತ್ತಮ ಪ್ರತಿಕ್ರಿಯೆ ಬಂದಿದೆ ಸಹಕಾರ ಬೇಕು ಎಂದರೆ ಮತ್ರೊಬ್ಬ ನಿರ್ಮಾಪಕ ಜಯರಾಮ ರೆಡ್ಡಿ, ಎಲ್ಲರ ಸಹಕಾರ ಇರಲಿ ಎಂದರು.

ನಾಯಕ ಅಮರ್ ವಿರಾಜ್ , ಇಷ್ಟಪಟ್ಟು ಮಾಡಿದ್ದೇವೆ.  ಲವ್ವರ್ ಬಾಯ್ ಪಾತ್ರ.ಚಿತ್ರ ಚೆನ್ನಾಗಿ ಬಂದಿದೆ ಎಂದರೆ ಮತ್ತೊಬ್ಬ ನಾಯಕ ಅಗಸ್ತ್ತ ಬೆಳಗೆರೆ ,ಹಳ್ಳಿಯ ಜನತೆ ಪಟ್ಟಣಕ್ಕೆ ಹೋಗಬಾರದು ಎನ್ನುವ ಆಜ್ಞೆ ಹಾಕಿದವನು.ಜನರನ್ನು ರಕ್ಷಣೆ ಮಾಡುತ್ತೇನೆ. ಅದೆನ್ನೆಲ್ಲಾ ಮೀರಿ ಪಟ್ಟಣಕ್ಕೆ ಬರುವ ಪಾತ್ರ.  ತಂದೆ ತಾಯಿ ಇಬ್ಬರು ಇಲ್ಲ‌ ಅವರಿಬ್ಬರೂ ಇದ್ದರೆ ಖುಷಿ ಪಡ್ತಾ ಇದ್ದು ಎಂದು ಭಾವುಕ ರಾದರು. ಸಹೋದ ಬೆಳೆಸಿದ್ದಾನೆ ಎಂದರು.

ನಾಯಕಿ ರಚನಾ ದಶರಥ,  ಮೊದಲ ಬಾರಿಗೆ ನರ್ವಸ್ ಆಗ್ತಾ ಇದೆ.  ತುಂಬಾ ವರ್ಷದಿಂದ ಕೆಲಸ ಮಾಡಿದ್ದೇವೆ. ರಿಷಿಕಾ ಎನ್ನುವ ಪಾತ್ರ ಮಾಡಿದ್ದೇವೆ. ರಾ ಪಾತ್ರದಲ್ಲಿ ಪಾಸಿಟಿವಿಟಿ ಇದೆ. ಕೆಲವು ಸನ್ನಿವೇಶ ಇಷ್ಟವಾಗಿದೆ. ಎರಡು ಹಾಡು ಇದೆ. ದಸರಾ ಬೊಂಬೆ ಹಾಡು ಚೆನ್ನಾಗಿ ಬಂದಿದೆ. ತಾನು ಪ್ರೀತಿಸುವ ಹುಡಗನಿಗೆ ಕಷ್ಟ ಎದುರಾದಾಗ ಆತನಿಗೆ ಬೆಂಬಲವಾಗಿ ನಿಲ್ಲುವ ಪಾತ್ರ ಎಂದರು. ನಟಿ ಭಾರತಿ ಹೆಗ್ಡೆ , ಆದಿಷೇಷನ ಪತ್ನಿ.ಚಿತ್ರ ಚೆನ್ನಾಗಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದು ಹೇಳಿದರು.