ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

ಬೀದರ:ಮೇ.19:ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಅಭ್ಯಾಸ ಮಾಡಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ವಕ್ತಾರರಾಗಿ ಆಗಮಿಸಿದ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನಾಗೇಶ ರೆಡ್ಡಿ ಅವರು ಮಾತನಾಡುತ್ತಾ ಅಗ್ರಶ್ರೇಣಿ ಪಡೆದ ಮಕ್ಕಳು ಇನ್ನುಮುಂದೆ ಏನು, ನಮ್ಮ ಗುರಿ ಏನು? ಎಂಬುವವುದೇನು ಅರಿತು ಅದರೇಡೆಗೆ ಸಾಗಬೇಕು ಎಂದು ಹೇಳಿದರಲ್ಲದೆ ನಿಮ್ಮ ಉತ್ತಮ ಭವಿಷ್ಯಕ್ಕಾಗಿ, ಉತ್ತಮ ಪರಿಸರವನ್ನು, ನಿರ್ಮಾಣ ಮಾಡುವಂತಹ ಕೊರ್ಸ್ ಮತ್ತು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ನಿವು ಸಾಧಿಸಿದ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸುವಂತಹ ಮಕ್ಕಳು ನಿವಾಗಿ ಎಂದು ಹುರಿದುಂಬಿಸಿದರು.

ಕಾರ್ಯಕ್ರಮದ ಗಣ್ಯ ಅಧ್ಯಕ್ಷತೇಯನ್ನು ವಹಿಸಿದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಿವರಾಜ ಹಲಶೆಟ್ಟಿ ಯವರು ಮಾತನಾಡುತ್ತ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಎಲ್ಲಿ ಅಗ್ರ ಶ್ರೇಣಿ ಪಡೆದರೆ ಮಾತ್ರ ಸಾಲದು ಮುಂದಿನ ಶಿಕ್ಷಣಕ್ಕಾಗಿ ಇನ್ನು ಹೆಚ್ಚು ಶ್ರಮ ಪಟ್ಟು ತಮ್ಮ ಗುರಿಯ ಸಾಧನೆಯ ಕಡೆಗೆ ಸಂಪೂರ್ಣ ಲಕ್ಷವಹಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಗ್ರಶ್ರೇಣಿ ಪಡೆದ 38 ಮಕ್ಕಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷರಾದ ಎನ್.ಕೃಷ್ಣಾರೆಡ್ಡಿ ಹಾಗೂ ಆಡಳಿತಾಧಿಕಾರಿಗಳಾದ ಗುರುನಾಥ ಮುಲಗೆ, ಪ್ರಾಚಾರ್ಯರಾದ ವಿಶ್ವನಾಥ ಹುಲಸುರೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೆಲಿದ್ದ ಗಣ್ಯರ ಸ್ವಾಗತ ಪರಿಚಯವನ್ನು ಶ್ರೀಮತಿ ಪ್ರತಿಭಾ ಚಾಮಾ ಮಾಡಿಕೊಟ್ಟರು. ಶಿವಶರಣ್ಣಪ್ಪಾ ಪಾಟೀಲ ಅವರು ವಂದನಾರ್ಪಣೆಯನ್ನು ಮಾಡಿದರೆ. ಬಾಲಾಜಿ ರಾಠೋಡ ಅವರು ನಿರೂಪಣೆಯನ್ನು ಮಾಡಿದರು.