ಅಗ್ನೇಯ ವಿಧಾನ ಪರಿಷತ್‌ಗೆ ಕಾಂಗ್ರೆಸ್ ಪ್ರವೇಶಿಸಿಲ್ಲ

ಕೋಲಾರ,ಅ,೨೮:ಅಗ್ನೇಯ ವಿಧಾನ ಪರಿಷತ್ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷ ಅಭ್ಯರ್ಥಿ ಪ್ರವೇಶಿಸಿದ ಇತಿಹಾಸವಿಲ್ಲ ಈಗಲು ಅದೇ ಇತಿಹಾಸ ಮರುಕಳುಹಿಸುವಲ್ಲಿ ಯಾವೂದೇ ಸಂದೇಹವಿಲ್ಲ, ಬಿಜೆಪಿ ಅಭ್ಯರ್ಥಿ ಚಿದಾನಂದಗೌಡು ಈ ಚುನಾವಣೆಯಲ್ಲಿ ಬಹುಮತ ದಿಂದ ಆಯ್ಕೆಯಾಗುವುದು ಖಚಿತ ಎಂದು ರಾಜ್ಯ ಅರೋಗ್ಯ ಸಚಿವ ಡಾ.ಸುಧಾಕರ್ ಭವಿಷ್ಯ ನುಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಚುನಾವಣೆಯಲ್ಲಿ ಕಾಮಗ್ರೇಸ್‌ಗೆ ಸೋಲು ಖಚಿತವಾಗಿದ್ದು ಬಿಜೆಪಿ ಆಡಳಿತದ ವಿರುದ್ದ ಅನೇಕ ಅಪಪ್ರಚಾರಗಳ ಮಾಡುತ್ತಿದೆ. ಚುನಾವಣೆಯ ಫಲಿತಾಂಶದಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ. ಗೌಡರು ಪ್ರಬುದ್ದ ಶಿಕ್ಷಣ ತಜ್ಞರಾಗಿದ್ದು ಇಂಥಹ ಪ್ರಬುದ್ದರು, ಚಿಂತಕರು, ಪ್ರಜ್ಞವಂತರು ವಿಧಾನ ಪರಿಷತ್‌ಗೆ ಅಗತ್ಯವಿದೆ. ರಾಜ್ಯದಲ್ಲಿ ಸುಭದ್ರ ಆಡಳಿತದ ಸರ್ಕಾರಕ್ಕೆ ಸ್ಪೊರ್ತಿ ತುಂಭುವ ಮೂಲಕ ಶ್ರೀಕಾರ ಹಾಡ ಬೇಕಾಗಿದೆ ಎಂದರು.
ಕಳೆದ ೭-೮ ತಿಂಗಳಿಂದ ಕೋವಿಡ್ ಸಂಕಷ್ಟಕ್ಕೆ ಒಳಗಾಗಿದ್ದು ಅನೇಕ ಸವಾಲುಗಳನ್ನು ಎದುರಿಸ ಬೇಕಾಗಿ ಬಂದಿತು. ಇತರೆ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ ಭಾರತದಲ್ಲಿ ಜನಸಾಂದ್ರತೆ ಹೆಚ್ಚು ಅದರೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದಾರೆ. ತಪಾಸಣೆ, ಪರೀಕ್ಷೆ, ಚಿಕಿತ್ಸೆ ಯಾವೂದಕ್ಕೂ ಏನೊಂದು ತೊಂದರೆ ಇಲ್ಲದಂತೆ ಬಡವರ ಎಲ್ಲಾ ವೆಚ್ಚಗಳನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ಭಾರಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ ಸಹ ಶುದ್ದ ಆಡಳಿತವನ್ನು ನೀಡುವ ಮೂಲಕ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಲಾಕ್ ಡೌನ್‌ನಂತ ಅರ್ಥಿಕ ಸಂಕಷ್ಟದ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳು, ಕಂಪನಿಗಳಲ್ಲಿ ಉದ್ಯೋಗಳನ್ನು ಕಡಿತಗೊಳಿಸಿತು.ಅದರೆ ನಮ್ಮದು ಆದರ್ಶ ಸರ್ಕಾರವಾಗಿದೆ, ಅರ್ಥಿಕ ಬಿಕ್ಕಟ್ಟು ಇದ್ದರೂ ಸಹ ಸಾಲ ಮಾಡಿ ಯಾರಿಗೂ ಸಹ ಒಂದು ರೂ ಕಡಿತಗೊಳ್ಳದಂತೆ ಪೂರ್ಣ ಪ್ರಮಾಣದಲ್ಲಿ ಎಲ್ಲಾ ನೌಕರರಿಗೂ ವೇತನ ನೀಡಿದ ಹೆಗ್ಗಳಿಕೆ ಬಿಜೆಪಿಯ ಯಡಿಯೂರಪ್ಪ ಸರ್ಕಾರದ್ದಾಗಿದೆ ಎಂದರು. .
ವೈದ್ಯರಿಗೆ ಹೆಚ್ಚಿನ ಕೆಲಸದ ಒತ್ತಡದ ಹಿನ್ನಲೆಯಲ್ಲಿ ಅವರ ವೇತನವನ್ನು ಹೆಚ್ಚಳ ಮಾಡುವ ಮೂಲಕ ಕರ್ತವ್ಯದಲ್ಲಿ ಉತ್ತೇಜಿಸಿದೆ. ಹೌಸ್ ಸರ್ಜನ್, ಪೋಸ್ಟ್ ಗ್ರಾಜೂಯೇಟ್‌ಗಳಿಗೂ ಶಿಷ್ಯ ವೇತನವನ್ನು ಶೇ ೩೦ ರಷ್ಟು ಹೆಚ್ಚಿಸಿದೆ. ಅರೋಗ್ಯ ಇಲಾಖೆಯ ಎಲ್ಲಾ ವೈದ್ಯರಿಗೆ ೧೩೦ ಕೋಟಿ ರೂ ಹೆಚ್ಚುವರಿ ಭತ್ಯೆ ನೀಡಿದೆ ಎಲ್ಲರ ಜೂತೆ ವಿಶ್ವಾಸದಿಂದ ಕೆಲಸ ಮಾಡಿ ಕೋವಿಡ್ ನಿಯಂತ್ರಗೊಳಿಸಿದ್ದು ಸಾವಿನ ಪ್ರಮಾಣ ಶೇ ೧ಕ್ಕಿಂತ ಕಡಿಮೆ ಗೊಳಿಸಿದೆ ಎಂದು ವಿವರಿಸಿದರು.
ಕೋವಿಡ್ ಲಸಿಕೆ ಬಂದ ನಂತರ ಪ್ರತಿಯೊಬ್ಬ ಕಡ್ಡ ಕಡೆಯ ವ್ಯಕ್ತಿಗೂ ಲಭ್ಯವಾಗುವಂತೆ ಮಾಡುವ ಬದ್ದತೆ ಸರ್ಕಾರಕ್ಕೆ ಇದೆ. ಎಂದ ಅವರು ಕೆ.ಜಿ.ಎಫ್‌ನಲ್ಲಿ ಬಹುತೇಕ ನಿರುದ್ಯೋಗ ಸಮಸ್ಯೆ ಕಾಡುತ್ತಿರುವುದರಿಂದ ಸರ್ಕಾರವು ಮಾಲುರು ಸಮೀಪ ಅಪಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡಿದ್ದು ಸುಮಾರು ೧೦ ಸಾವಿರ ಮಂದಿಗೆ ಉದ್ಯೋಗದ ಅವಕಾಶ ಕಲ್ಪಿಸಿದೆ. ಉದ್ಯೋಗ ಸೃಷ್ಠಿಸುವ ಕಂಪನಿಗಳಿಗೆ ಹೊಡಿಕೆ ಮಾಡುವ ಮೂಲಕ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಅಬಕಾರಿ ಸಚಿವ ಹೆಚ್.ನಾಗೇಶ್ ಮಾತನಾಡಿ ಬಿಜೆಪಿ ಚಿದಾನಂದಗೌಡರ ಪರ ಮತ ಯಾಚಿಸಿದರು. ಸುದ್ದಿಗೋಷ್ಠಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣು ಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.