ಅಗ್ನಿ ಶಾಮಕ ಠಾಣೆಗೆ ರಬ್ಬರ್ ದೋಣಿ

ಅಫಜಲಪುರ: ಆ.8:ಪಟ್ಟಣದ ಅಗ್ನಿ ಶಾಮಕ ಠಾಣೆಗೆ ಜಿಲ್ಲಾ ಮಟ್ಟದ ತಾಲೂಕಾ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ರಬ್ಬರ್ ದೋಣಿ ಆಗಮಿಸಿದೆ. ಅಗ್ನಿ ಶಾಮಕ ಮತ್ತು ತುರ್ತು ಸೇವಾ ಇಲಾಖೆಯ ವತಿಯಿಂದ ಮಂಜೂರಾದ ಈ ರಬ್ಬರ್ ದೋಣಿಯು ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಹಾಗೂ ಜೀವ ರಕ್ಷಣೆಯ ಕಾರ್ಯಾಚರಣೆಯ ನೆರವಿಗೆ ಮುಂದಾಗಲಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಗ್ನಿ ಶಾಮಕ ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ ಅವರು ಮಾತನಾಡಿ, ಅಫಜಲಪುರ ತಾಲೂಕಿನಲ್ಲಿ ಭೀಮಾ ನದಿ ಹರಿಯುವುದರಿಂದ ಆಗಾಗ ಪ್ರವಾಹ ಉಕ್ಕಿ ಬರುತ್ತದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಜನರ ಜೀವ ಹಾಗೂ ಆಸ್ತಿ ರಕ್ಷಣೆಗಾಗಿ ತ್ವರಿತಗತಿಯಲ್ಲಿ ಈ ದೋಣೆ ಕಾರ್ಯ ನಿರ್ವಹಿಸಲಿದ್ದು ಜನರ ನೆರವಿಗೆ ಬರಲಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 101, 112 ಹಾಗೂ 08470-283101 ಸಂಖ್ಯೆಗೆ ಸಂಪರ್ಕಿಸಲು ತಿಳಿಸಿದ್ದಾರೆ.