ಅಗ್ನಿ ಬನ್ನಿ ರಾಯ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 30: ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ತಿಗಳ ಸಮುದಾಯದ ಮೂಲ ಅಗ್ನಿ ಪುರುಷ ಬನ್ನಿರಾಯ ಸ್ವಾಮಿ ಜಯಂತಿಯನ್ನು ಸರಳವಾಗಿ ಕಛೇರಿಯಲ್ಲಿ ಆಚರಿಸಿದರು. ಅಗ್ನಿ ರಾಯ ಬನ್ನಿಸ್ವಾಮಿ ಭಾವ ಚಿತ್ರಕ್ಕೆ ತಹಶೀಲ್ದಾರ್ ಗುರುಬಸವರಾಜ ಪೂಜೆಯನ್ನು ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಶಿರಸ್ತೇದಾರ ಕೆ.ಎಂ. ಶಿವಕುಮಾರ ಕಂದಾಯ ಇಲಾಖೆಯ ಅಧಿಕಾರಿ ಎರ್ರಿಸ್ವಾಮಿ ಅಲ್ಲದೇ ಆಹಾಋ ನೀರೀಕ್ಷಕ ಅಧಿಕಾರಿಯನ್ನೊಳಗೊಂಡು ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.