ಅಗ್ನಿ ಆಕಸ್ಮಿಕ ಗುಡಿಸಲು ಭಸ್ಮ

ಹಿರಿಯೂರು.ನ.೧೪: ಹಿರಿಯೂರು ನಗರದ ಹರಿಶ್ಚಂದ್ರ ಘಾಟ್ ಬಡಾವಣೆ ೩೦ನೇ ವಾರ್ಡ್ನಲ್ಲಿ ದಾದಾಪೀರ್ ಎಂಬುವರ ಗುಡಿಸಲು ಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟುಹೋಗಿದ್ದು ನಗರಸಭೆ ಅಧ್ಯಕ್ಷರಾದ ಶಂಶುನ್ನೀಸಾ ಹಾಗೂ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ  ವಯಕ್ತಿಕ ಸಹಾಯಧನ ನೀಡಿದರು. ಪೌರಾಯುಕ್ತರಾದ ಟಿ.ಲೀಲಾವತಿ. ಎ.ಇ.ಇ ಆನಂದ್‌ಪಾಂಚಾಲ್, ಯುವ ಮುಖಂಡರಾದ ಪಿ.ಎಸ್.ಸಾದತ್‌ವುಲ್ಲಾ,  ರಾಜಣ್ಣ  ಮತ್ತಿತರರು ಉಪಸ್ಥಿತರಿದ್ದರು.