ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆ

ಮಾನ್ವಿ,ಫೆ.೨೩- ಅಂತರಾಷ್ಟ್ರೀಯ ಅಗ್ನಿ ಅವಘಡಗಳ ಅರಿವು ಮೂಡಿಸುವ ಹಾಗೂ ಅನಾಹುತಗಳನ್ನು ತಡೆಗಟ್ಟುವ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತಾನಾಡಿ ಮುಂಜಾಗ್ರತಾ ಕ್ರಮಗಳಿಂದ ಅಗ್ನಿ ಅವಘಡ ನಿಯಂತ್ರಿಸಲು ಸಾಧ್ಯ ಎಂದು ಆಗ್ನಿಶಾಮಕ ಠಾಣೆ ಅಧಿಕಾರಿ ಹಾಜಮಿಯಾ ಹೇಳಿದರು.
ಪಟ್ಟಣದ ತಾಲ್ಲೂಕು ಅಗ್ನಿ ಶಾಮಕ ಇಲಾಖೆಯಲ್ಲಿ ನಡೆದ ಅಗ್ನಿ ಅವಘಡ ತಡೆಗಟ್ಟುವ ದಿನಾಚರಣೆಯಲ್ಲಿ ಅವರು ಮಾತನಾಡಿ ಸಾರ್ವಜನಿಕವಾಗಿರಲಿ ಪ್ರತಿ ಮನೆಯಲ್ಲಿಯೂ ಆಗಿರಲಿ ತೈಲ ಬೆಂಕಿ, ಗ್ಯಾಸ್ ಫೈರ್, ಎಲೆಕ್ಟ್ರಿಕಲ್ ಮತ್ತು ಮೆಟಲ್ ಫೈರ್ ೪ ವಿಧದ ಬೆಂಕಿಯನ್ನು ಬೆಂಕಿಯ ತೀವ್ರತೆಯನ್ನು ಆಧರಿಸಿ ನಂದಿಸುವುದಕ್ಕೆ ಪ್ರಯತ್ನ ಮಾಡಬೇಕು ಅವಸರದಲ್ಲಿ ನೀರಿನಿಂದ ತಣಿಸುವಿಕೆ,ಬೇರ್ಪಡಿಸುವಿಕೆ, ಮುಚ್ಚುವಿಕೆ. ಬೆಂಕಿಯನ್ನು ನಂದಿಸುವ ವಿಧಾನಗಳ ಮಾಹಿತಿಯ ಕುರಿತಾಗಿ ಯಾವ ಬಗೆಯ ಬೆಂಕಿಗೆ ಯಾವುದನ್ನು ಬಳಸಬೇಕು ಎಂಬ ಮಾಹಿತಿ ಅಗತ್ಯ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಅಧಿಕಾರಿ ವೀರಭದ್ರಯ್ಯ, ಅತಿಥಿಗಳಾದ ಪಕ್ಷಿ ಪ್ರೇಮಿ ಸಲ್ಲಾವುದ್ದೀನ್, ಶಿಕ್ಷಣ ಪ್ರೇಮಿ ಕೆ ಈ ನರಸಿಂಹ ಸೇರಿದಂತೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.