ಅಗ್ನಿ ಅವಗಡ ವಿಪತ್ತು ಪರಿಹಾರ ನೀಡಲು ಒತ್ತಾಯ

ವಿಜಯಪುರ, ಎ.2-ಹಳೆ ಕಚೇರಿ ತಹಶೀಲ್ದಾರ ರಸ್ತೆ ವಿಜಯಪುರದಲ್ಲಿರುವ ಶ್ರೀ ಕೃಷ್ಣಾ ಕೆಫೆ ಹೊಟೇಲ್ ದಿನಾಂಕ 30-3-2021 ರಂದು ರಾತ್ರಿ 1-00 ಗಂಟೆ ಸುಮಾರಿಗೆ ಅಗ್ನಿ ಅವಘಡದಿಂದ ಹೊಟೇಲದಲ್ಲಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ದವಸ ಧಾನ್ಯಗಳು, ಅಡಿಗೆ ಪಾತ್ರೆಗಳು, ನೀರಿನ ಸಿಂಟ್ಯಾಕ್ಸಗಳು, ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೊಟೇಲ್ ಮಾಲಿಕರಾದ ಮಲ್ಲಿಕಾರ್ಜುನ ತಾಳಿಕೋಟಿ ಅವರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಪದವಿಧರ ಒಕ್ಕೂಟದ ಜಿಲ್ಲಾಧ್ಯಕ್ಷ ಲಾಯಪ್ಪ ಇಂಗಳೆ ಒತ್ತಾಯಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ರಾತ್ರಿ ಸಮಯವಾಗಿರುವದರಿಂದ ಹೊಟೇಲದಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅಗ್ನಿ ಅವಗಡಕಕೆ ಹೊಟೇಲ ತುತ್ತಾಗಿರುವುದರಿಂದ ಒಳಗಿರುವ ದಸವ ಧಾನ್ಯಗಳು ಬೆಂಕಿಗೆ ಆಹುತಿಯಾಗಿದ್ದು ಇದರಿಂದ ಸಣ್ಣ ಹೊಟೇಲ ನಡೆಸಿಕೊಂಡು ಉಪಜೀವನ ಸಾಗಿಸುತ್ತಿದ್ದ ಮಲ್ಲಿಕಾಜುನ ತಾಳಿಕೋಟಿ ಅವರಿಗೆ ತೀವ್ರ ತೊಂದರೆಯಾಗಿದ್ದು ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಪರಿಹಾರ ನೀಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೊಟೇಲ್ ಮಾಲಿಕ ಮಲ್ಲಿಕಾರ್ಜುನ ತಾಳಿಕೋಟಿ ಅವರು ಮಾತನಾಡಿ ನಾನು ಬಡವನಾಗಿದ್ದು ನನ್ನ ನೋವಿಗೆ ಸ್ಪಂದಿಸಿ ನನಗಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮುಜೀಬ ರಿಸಾಲದಾರ, ಜಾವಿದ ಕಲಬುರ್ಗಿ, ವಿಠ್ಠಲ ಅಗಸರ, ಸಾಜಿದ ದಖನಿ ಉಪಸ್ಥಿತರಿದ್ದರು.