ಅಗ್ನಿಶಾಮಕ ಸೇವಾ ಸಾಪ್ತಾಹ ಕಾರ್ಯಕ್ರಮ

ಅರಕೇರಾ.ಏ.೧೭-ಅಗ್ನಿ ಶಾಮಕ ಇಲಾಖೆಯ ಸ್ಥಳಿಯ ಘಟಕದಿಂದ ಏಪ್ರೀಲ್ ೧೪ರಿಂದ ೨೦ರ ವರಗೆ ಅಗ್ನಿಶಾಮಕ ಸೇವಾ ಸಾಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದು ಸಾರ್ವಜನಿಕರಿಗೆ ಅಗ್ನಿ ಅವಘಡಗಳನ್ನು ನಡೆಯುವ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆಂದು ಅರಕೇರಾ ಅಗ್ನಿ ಶಾಮಕ ಠಾಣಾ ಅಧಿಕಾರಿ ಮಾರ್ಕಂಡಯ್ಯಸ್ವಾಮಿ ಹೇಳಿದರು.
ಸೇವಾ ಸಪ್ತಾಹ ಅಂಗವಾಗಿ ಗುರುವಾರ ಅರಕೇರಾ ಸಂತೆಮೈದಾನ,ಪ್ರವಾಸಿ ಮಂದಿರ ಆವರಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಿತ್ತಿ ಪತ್ರಗಳನ್ನು ಹಂಚಲಾಯಿತು ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸೇವಾ ಸಪ್ತಾಹದ ಮೂಲಕ ಶಾಲಾ,ಕಾಲೇಜು ಸಾರ್ವಜನಿಕಸ್ಥಳ ಸಂತೆ ಮೈದಾನ ಪ್ರವಾಸಿ ಮಂದಿರದ ಆವರಣದಲ್ಲಿ ಗ್ರಾಮದಲ್ಲಿನ ಶ್ರೀಲಕ್ಮೀವೆಂಕಟೇಶ್ವರ,ಮತ್ತು ಓಂಕಾರ ಪೆಟ್ರೋಲ್ ಬಂಕ್ ಗಳಲ್ಲಿನ ಸಿಬ್ಬಂದಿಗಳಿಗೆ ಬೆಂಕಿ ಅವಘಡಗಳ ಬಗ್ಗೆ ಕಾರ್ಯಕ್ರಮಗಳಲ್ಲಿ ಹಮ್ಮಿಕೊಂಡು ಬೆಂಕಿ ಅನಾಹುತಗಳನ್ನು ತಡೆಯುವ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಅಗ್ನಿ ಸುರಕ್ಷಾ ಉಪಕರಣಬಳಕೆ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾದಾಗ ಕೂಡಲೇ ಕಿಟಕಿ ಬಾಗಿಲುಗಳನ್ನು ತೆಗೆಯಬೇಕು. ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಹಸಿಯಾದ ಗೋಣಿ ಚೀಲದಿಂದ ಮುಚ್ಚಿ ಆರಿಸಲು ಪ್ರಯ್ನತಿಸಬೇಕು,ಬೆಂಕಿ ಅನಾಹುತ ಸಂಭವಿಸಿದಾಗ ಕೂಡಲೇ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿ ಅನಾಹುತ ತಪ್ಪಿಸಬೇಕೆಂದು ಹೇಳಿದರು.ಸಂದರ್ಭದಲ್ಲಿ ಸಿಬ್ಬಂದಿವರ್ಗದವರಾದ ಸುಭಾಷ, ಅಮರೇಶ ,ಈರಪ್ಪ ,ಪರಶುರಾಮು, ,ಮಂಜುನಾಥ, ತಾಯಣ್ಣ ಉಪಸ್ಥಿತರಿದ್ದರು.