ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಶ್ಲ್ಯಾಘನೀಯ

ಮೂಡಲಗಿ, ಡಿ 19- ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಅದರೊಡನೆ ಹೋರಾಡಿ ಅದನ್ನು ಆರಿಸುವುದಕ್ಕೆಂದೇ ವಿಶೇಷವಾಗಿ ರಚನೆಯಾಗಿರುವ ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಅಗ್ನಿಶಾಮಕ ಠಾಣೆ ಗೋಕಾಕ ಹಾಗೂ ಮೂಡಲಗಿ ಶಿಕ್ಷಣ ಇಲಾಖೆಯ ಮತ್ತು ಮೂಡಲಗಿ ಬಿ.ಆರ್.ಸಿಯ ಆಶ್ರಯದಲ್ಲಿ ಜರುಗಿದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ,ಆಕಸ್ಮಿಕದಿಂದ ಉಂಟಾದ ಬೆಂಕಿಯನ್ನು ಆರಿಸುವುದು ಮಾತ್ರವಲ್ಲದೆ ಇತರೆಡೆಗಳಿಗೆ ಹರಡದಂತೆಯೂ ಈ ದಳ ನೋಡಿಕೊಳ್ಳುತ್ತದೆ. ಈ ದಳದ ನೆರವಿನಿಂದಾಗಿ ಬೆಂಕಿ ಅಪಘಾತದಿಂದ ಉಂಟಾಗುವ ಪ್ರಾಣಹಾನಿ, ಆಸ್ತಿ ಪಾಸ್ತಿಗಳ ನಷ್ಟ ಕಡಿಮೆಯಾಗುವ ಅವಕಾಶವಿದೆ.
ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಯಾವ ರೀತಿಯಾದ ಮುಂಜಾಗೃತ ಕ್ರಮವಹಿಸಿ ಬೆಂಕಿಯನ್ನು ನಿಂದಿಸಬಹುದೆಂದು ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಬೆಂಕಿ ನಿಂದಿಸುವ ವಿಧಾನಗಳನ್ನು ತಿಳಿದುಕೊಂಡು ತಮ್ಮ ಶಾಲೆಯ ಸುತ್ತಮುತ್ತಲಿರುವ ಗ್ರಾಮಸ್ಥರಿಗೂ ಅರಿವು ಮೂಡಿಸಬೇಕೆಂದು ಹೇಳಿದರು.
ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ರಾಹಿಂ ಮುಲ್ತಾನಿ ಮಾತನಾಡಿ, ಸಕಾಲ ಅಡಿಯಲ್ಲಿ ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ನಿರಾಪೇಕ್ಷಣಾ ಪತ್ರ, ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣದ ನಂತರದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ಕ್ಲೀಯರೆನ್ಸ್ ಪ್ರಮಾಣ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ, ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ, ಪಟಾಕಿಗಳ ಲೈನಸ್ಸ್‍ಗಾಗಿ ನಿರಾಪೇಕ್ಷಣಾ ಪತ್ರ ಇವುಗಳು ಸಕಾಲ ವ್ಯಾಪ್ತಿಯಲ್ಲಿ ಬರುತ್ತಿದ್ದು ಸಾರ್ವಜನಿಕರು ತಮ್ಮ ಅಗತ್ಯತೆಗೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದರು.
ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಯಾವ ರೀತಿಯಾಗಿ ನಿಂದಿಸಬಹುದು ಎಂಬುದರ ಕುರಿತು ಪ್ರಾಯೋಗಿಕವಾಗಿ ಶಿಕ್ಷಕರಿಗೆ ತೋರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳ ಗೋಕಾಕ ಠಾಣಾಧಿಕಾರಿ ಎಸ್ ಎಮ್ ಮೇಳವಂಕಿ, ಸಿಬ್ಬಂದಿಗಳಾದ ಎಸ್.ಆರ್. ಚೌವ್ಹಾನ್, ಎಸ್. ಎಸ್. ಮಗದುಮ್, ಎಸ್. ಎಮ್. ಚೌಧರಿ, ಬಿ.ಆರ್.ಸಿಯ ಸಿಬ್ಬಂದಿಗಳಾದ ಜಿ. ಆರ್. ಪತ್ತಾರ, ಬಿ. ಎಚ್. ಮೊರೆ, ಶಾಲಾ ಮುಖ್ಯೋಪಾಧ್ಯೆ ದ್ರಾಕ್ಷಾಯಿಣಿ ಹದಲಿ, ಶಿಕ್ಷಕ ಎಡ್ವಿನ್ ಪರಸನ್ನವರ ಹಾಗೂ ಶಿಕ್ಷಕ ಸಿಬ್ಬಂಧಿಗಳು ಉಪಸ್ಥಿತರಿದ್ದರು.