ಅಗ್ನಿಶಾಮಕ ಸಿಬ್ಬಂದಿಗಳಿಂದ ಪ್ರವಾಹ ಪ್ರಾಯೋಗಿಕ ಸುರಕ್ಷತಾ ತರಬೇತಿ

ಅಫಜಲಪುರ:ಮೇ.18: ಭೀಮಾ ನದಿ ದಂಡೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ನದಿ ತೀರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆಗಾಗ ನೆರೆಹಾವಳಿ ಹೆಚ್ಚಾಗಿ ಜನರು ನೀರಿನಲ್ಲಿ ಸಂಕಷ್ಟ ಎದುರಿಸುವ ಸಾಧ್ಯತೆ ಇರುವುದರಿಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ ಮಾರ್ಗದರ್ಶನದಲ್ಲಿ ಇಂದು ಅಫಜಲಪುರ ಕೆರೆಯಲ್ಲಿ ಬೋಟಿನಲ್ಲಿ ಪ್ರಾಯೋಗಿಕ ಸುರಕ್ಷತಾ ಪ್ರವಾಹ ಮುನ್ನೆಚ್ಚರಿಕೆ ತರಬೇತಿ ನಡೆಸಲಾಯಿತು.

ಯಾವುದೇ ತುರ್ತು ಸಂದರ್ಭದಲ್ಲಿ ನೆರೆಹಾವಳಿ ಹೆಚ್ಚಾಗಿ ಜನರು ತೊಂದರೆಗೆ ಸಿಲುಕಿದರೆ ಕೂಡಲೇ 101, 112, 08470-283101 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಎಂದು ಠಾಣಾಧಿಕಾರಿ ವಿಶ್ವನಾಥ ಕಾಮರೆಡ್ಡಿ ಮನವಿ ಮಾಡಿದ್ದಾರೆ.