ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೇರ ನೇಮಕಾತಿ ಪ್ರಕ್ರಿಯೆ ಪೂರ್ಣ

ಕಲಬುರಗಿ,ಏ.30- ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಸರ್ಕಾರದ ಸುತ್ತೋಲೆಯನ್ವಯ ಎಲ್ಲಾ ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ.
ವಿವಿಧ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ದಿನಾಂಕ:-15-02-2021 ರಂದು ಪ್ರಾರಂಭಿಸಿ ದಿನಾಂಕ:-27-04-2021 ರ ವರೆಗೆ ಯಾವುದೇ ದೂರುಗಳು ಇಲ್ಲದೇ ಅತ್ಯಂತ ಪಾರದರ್ಶಕತೆಯಿಂದ ನಡೆಸಿ ಈ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್uಗೊಳಿಸಲಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ ಒಇ 225 ಕಅಸೇ 2013, ದಿನಾಂಕ:-05-05-2014 ರಂತೆ ಖಾಲಿಯಿರುವ ನೇರ ನೇಮಕಾತಿ ಹುದ್ದೆಗಳನ್ನು 2014-15 ಮತ್ತು 2015-16 ರಲ್ಲಿ 1,989 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲಾಗಿತ್ತು,
ಸರ್ಕಾರದ ಆದೇಶ ಸಂಖ್ಯೆ: ಒಇ 10 ಕಅಸೇ 2019, ದಿನಾಂಕ:-04-10-2019 ರ ಆದೇಶದಂತೆ 2016-17ನೇ ಸಾಲಿನಲ್ಲಿ ಅಗ್ನಿಶಾಮಕ-660, ಅಗ್ನಿಶಾಮಕ ಚಾಲಕ-176 ಮತ್ತು ಚಾಲಕ ತಂತ್ರಜ್ಞ-47 ಒಟ್ಟು 883 ಹುದ್ದೆಗಳು 2014-15 ಮತ್ತು 2015-16 ನೇ ಸಾಲಿನ ನೇಮಕಾತಿಯಲ್ಲಿ ವಿವಿಧ ಕಾರಣಗಳಿಂದ ಬಾಕಿ ಉಳಿದ 387 ಹುದ್ದೆಗಳು ಮತ್ತು ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಪ್ರಸ್ತುತ ಖಾಲಿಯಿರುವ ಅಗ್ನಿಶಾಮಕ ಠಾಣಾಧಿಕಾರಿ-10, ಅಗ್ನಿಶಾಮಕ-239, ಅಗ್ನಿಶಾಮಕ ಚಾಲಕ-28 ಮತ್ತು ಚಾಲಕ ತಂತ್ರಜ್ಞ-20 ಒಟ್ಟು 297 ಹುದ್ದೆಗಳು ಸೇರಿ ಒಟ್ಟು 1,567 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮಂಜೂರಾತಿ ನೀಡಲಾಗಿರುತ್ತದೆ.
ಕರ್ನಾಟಕ ಅಗ್ನಿಶಾಮಕ ಸೇವೆಗಳ (ವೃಂದ ಮತ್ತು ನೇಮಕಾತಿ) ನಿಯಮಗಳು 2013 ರನ್ವಯ ನೇರ ನೇಮಕಾತಿ ಮೂಲಕ ಮೇಲ್ಕಾಣಿಸಿದಂತೆ ಅಗ್ನಿಶಾಮಕ ಠಾಣಾಧಿಕಾರಿ, ಅಗ್ನಿಶಾಮಕ, ಅಗ್ನಿಶಾಮಕ ಚಾಲಕ ಹಾಗೂ ಚಾಲಕ ತಂತ್ರಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಆದೇಶ ಸಂಖ್ಯೆ: ಒಇ 129 ಕಅಸೇ 2020, ದಿನಾಂಕ:-17-07-2020ರ ಆದೇಶದಲ್ಲಿ ಸರ್ಕಾರವು ಮಂಜೂರಾತಿ ನೀಡಿದ ಒಟ್ಟು 1,567 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆಯನ್ನು ಆನ್‍ಲೈನ್‍ನಲ್ಲಿ ಹಾಗೂ ಪತ್ರಿಕ ಪ್ರಕಟಣೆ ಹೊರಡಿಸಿಲಾಗಿರುತ್ತದೆ.
ಸದರಿ ಹುದ್ದೆಗಳ ನೇಮಕಾತಿಗಾಗಿ ಸ್ವೀಕೃತಗೊಂಡಿರುವ ಎಲ್ಲಾ ಅರ್ಜಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅರ್ಹ ಆಯ್ಕೆ ಪಟ್ಟಿ ನೀಡಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ನೇಮಕಾತಿ ವಿಭಾಗ, ಬೆಂಗಳೂರು ಇವರಿಗೆ ವಹಿಸಿಕೊಡಲಾಗಿತ್ತು.
ವಿವಿಧ ದರ್ಜೆಯ 1,567 ಖಾಲಿ ಹುದ್ದೆಗಳಿಗೆ, ಒಟ್ಟು 1,65,354 ಅರ್ಜಿಗಳು ಸ್ವೀಕೃತವಾಗಿರುತ್ತದೆ, ಅವುಗಳಲ್ಲಿ 1:5 ಅನುಪಾತದಂತೆ ಒಟ್ಟು 12,019 ಅಭ್ಯರ್ಥಿಗಳಿಗೆ ಕರೆ ಪತ್ರ ಕಳುಹಿಸಲಾಗಿದ್ದು, ಇವುಗಳಲ್ಲಿ 7,087 ಸಂಖ್ಯೆಯ ಅಭ್ಯರ್ಥಿಗಳು ದೈಹಿಕ ಮತ್ತು ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಿರುತ್ತಾರೆ.
ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಇಲ್ಲಿ ಈ ನೇರ ನೇಮಕಾತಿ ಪ್ರಕ್ರಿಯೆಯ ದೈಹಿಕ ಮತ್ತು ದೇಹದಾಢ್ರ್ಯತೆ ಪರೀಕ್ಷೆ ನಡೆಸಲಾಗಿರುತ್ತದೆ, ಪರೀಕ್ಷೆ ನಡೆಸುವ ಸ್ಥಳಗಳಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ 10 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಬಯೋಮೆಟ್ರಿಕ್ ಮಿಷಿನ್ ಉಪಯೋಗಿಸಿ ಪ್ರತಿಯೊಬ್ಬರ ಭಾವಚಿತ್ರದ ಜೊತೆಗೆ ಹೆಬ್ಬೆರಳಿನ ಗುರುತನ್ನು ದಾಖಲು ಮಾಡಿ, ಅಭ್ಯರ್ಥಿಗಳ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಚೆಸ್ಟ್ ನಂಬರ್ ನೀಡಿ ಎಲ್ಲಾ ಹಂತಗಳಲ್ಲಿಯೂ ವಿಡಿಯೋ ರೇಕಾರ್ಡ್ ಮಾಡಲಾಗಿರುತ್ತದೆ.
ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಅಂದರೆ ತೂಕ ಮತ್ತು ಎತ್ತರಗಳನ್ನು ಪರೀಕ್ಷಿಸಲು ಬಿ.ಎಮ್.ಐ ಮಿಷಿನ್ ಬಳಸಲಾಗಿದೆ ಮತ್ತು ದೇಹದಾಢ್ರ್ಯತೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೆಗೆದುಕೊಂಡ ಸಮಯವನ್ನು ದಾಖಲಿಸಲು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ 09 ಜನ ತೀರ್ಪುಗಾರರ ಸೇವೆಯನ್ನು ಪಡೆಯಲಾಗಿತ್ತು.
ಪ್ರತಿಯೊಂದು ಹಂತದ ಪರೀಕ್ಷೆಯ ನಂತರ ಫಲಿತಾಂಶವನ್ನು ಆ ಕೂಡಲೇ ಅಭ್ಯರ್ಥಿಗಳಿಗೆ ತೋರಿಸಿ ಸಹಿ ಪಡೆದು ಅದರ ಒಂದು ಫಲಿತಾಂಶದ ಹಾಳೆಯ ಪ್ರತಿಯನ್ನು ಪ್ರತಿಯೊಬ್ಬ ಅಭ್ಯರ್ಥಿಗೆ ನೀಡಲಾಗಿರುತ್ತದೆ ಎಂದು ಅವರು ಹೇಳಿದ್ದಾರೆ.