ಅಗ್ನಿಶಾಮಕ ದಳದಿಂದ ಬೆಂಕಿ ನಿರ್ವಹಣೆ ತರಬೇತಿ


ಧಾರವಾಡ ನ.3-ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕ ತಾಲೂಕಿನ ಮಾಸಿಕ ಸಭೆ ಹಾಗೂ ಕಲಘಟಗಿ ಕುಂದಗೋಳ ಹುಬ್ಬಳ್ಳಿಯ ಸಂಯೋಜಕರ ತರಬೇತಿ ಕಾರ್ಯಗಾರವು ರಾಯಾಪುರದ ಮಹಿಳಾ ಜ್ಷಾನ ವಿಕಾಸ ತರಬೇತಿ ಕೇಂದ್ರದಲ್ಲಿ ನಡೆಯಿತು. ಧಾರವಾಡದ ಅಗ್ನಿಶಾಮಕ ವಿಭಾಗದಿಂದ 02 ಅಗ್ನಿಶಾಮಕ ವಾಹನಗಳು ಸಕಲ ಪರಿಕರಗಳನ್ನೊಳಗೊಂಡ ಡಿಎಫ್‍ಒ ಶ್ರೀಕಾಂತ,ಆರ್‍ಎಫ್‍ಒ ವಿನಾಯಕ ಇವರುಗಳು ಬಂದು ಬೆಂಕಿ ಅವಘಡಗಳು ಆರಿಸುವ ವಿಧಾನಗಳು ಪ್ರಾತ್ಯಕ್ಷೀಕೆ ಮೂಲಕ ಮಾಹಿತಿ ಒದಗಿಸಿದರು.ಹತ್ತಕ್ಕೂ ಮಿಗಿಲಾದಅಗ್ನಿಶಾಮಕ ಠಾಣಾಧಿಕಾರಿಗಳು ಪೋಲಿಸರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತರಬೇತಿ ಸ್ವಯಂ ಸೇವಕರು ಮಾಡದ ಕಾರ್ಯಗಳ ಮೌಲ್ಯಮಾಪನ ನಡೆಸಲಾಗಿತ್ತು. ಸಂಯೋಜಕರಿಗೆ ತರಬೇತಿ ನೀಡಿ ಸ್ವಯಂ ಸೇವಕರ ತರಬೇತಿಗೆ ಪ್ರೇರಣೆ ನೀಡಲಾಯಿತು.ಸ್ವಯಂ ಸೇವಕರಿಗೆ ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಮಾರ್ಗದರ್ಶನ ಸಲಹೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡ, ನಿರ್ದೇಶಕರಾದ ಸುರೇಶ ,ಯೋಜನಾಧಿಕಾರಿಗಳಾದ ಉಲ್ಲಾಸ್ ಮೇಸ್ತ, ಮಂಜುನಾಥ ನಾಯ್ಕ,ಮಂಜುನಾಥ, ಕುಸುಮಾಧರ,ಜೈವಂತ ಪಟಗಾರ,ನಾಗೇಶ್ ವೈ ಕಾರ್ಯಕರ್ತರು ಉಪಸ್ಥಿತರಿದ್ದರು.