ಅಗ್ನಿಲೋಕದಲ್ಲಿ ‘ಯಶಸ್ವ’ ನಾಯಕ

ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕರೂ ಆಗಿದ್ದ  ಹೆಚ್.ಎಂ.ಕೆ. ಮೂರ್ತಿ ಮೊಮ್ಮಗ ಯಶಸ್ವ ಈಗ ನಾಯಕನಾಗಿ  ಚಿತ್ರರಂಗ ಅಡಿಗಾಡಲು ಇಡಲು ಮುಂದಾಗಿದ್ದಾರೆ.

ಎಮೋಷನಲ್ ಹಾಗೂ  ಆಕ್ಷನ್ ಥ್ರಿಲ್ಲರ್  ಕಥಾಹಂದರ ಹೊಂದಿದ ಚಿತ್ರದಲ್ಲಿ ನಿರ್ದೇಶಕ, ನಿರ್ಮಾಪಕ ರಾಜೇಶ್ ಮೂರ್ತಿ ಅವರ ಪುತ್ರ  ‘ಯಶಸ್ವ’ ಆಕ್ಷನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿದೆ.

ತಾತ, ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಹೊತ್ತಿರುವ ಯಶಸ್ವ, ಈಗಾಗಲೇ ಸಿದ್ದತೆ ಮಾಡಿಕೊಂಡು ಚಿತ್ರರಂಗಕ್ಕೆ ಧುಮುಕಿದ್ದಾರೆ.

ಮಗನ ಚಿತ್ರಕ್ಕೆ ರಾಜೇಶ್ ಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ಚಿತ್ರ ಸೆನ್ಸಾರ್ ಹಂತದಲ್ಲಿದೆ. 

ಪುಷ್ಪ ಮಂಜುನಾಥ್ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ  ನಿರ್ಮಾಣ ಮಾಡಿದ್ದಾರೆ.ಮಂಜುಶ್ರೀ ಚಿತ್ರದಲ್ಲಿ ಯಶಸ್ವ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ನೆಲ ನರೇಂದ್ರಬಾಬು ಸಹೋದರ ನೆಲ ಮಹೇಶ್ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಎಸ್.  ಮಂಜುನಾಥ್,  ಅಜಿತ್ ಕುಮಾರ್, ಪ್ರಮೋದ್ ಹಿರೇಮಠ್  ಉಳಿದ ತಾರಾಗಣದಲ್ಲಿದ್ದಾರೆ. ವಿನೋದ್ ಛಾಯಾಗ್ರಹಣ, ನಿತೀಶ್ ಕುಮಾರ್ ಸಂಗೀತವಿದೆ. ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲವಾರ ಚಿತ್ರ ತೆರೆಗೆ ತರುವ ಯೋಜನೆಯಿದೆ ಎಂದು ನಿರ್ದೇಶಕ ರಾಜೇಶ್ ಮೂರ್ತಿ ತಿಳಿಸಿದ್ದಾರೆ.