ಅಗ್ನಿಪಥ್ ಸಹಕರಿಸಲು ಆಧಿಕಾರಿಗಳಿಗೆ ಮಾನ್ ಸೂಚನೆ

ಚಂಡೀಗಢ, ಸೆ.೧೫- ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಸೇನೆಗೆ ಸಂಪೂರ್ಣ ಬೆಂಬಲ ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಅವರು, ರಾಜ್ಯದಲ್ಲಿ ಅಗ್ನಿವೀರರ ನೇಮಕಾತಿಯಲ್ಲಿ ಸೇನಾ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಎಲ್ಲಾ ಉಪ ಆಯುಕ್ತರಿಗೆ ಕಮಿಷನರ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಪಂಜಾಬ್‌ನಲ್ಲಿ ಅಗ್ನಿವೀರರ ನೇಮಕಾತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಗ್ನಿಪಥ್ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬಾರದು ಎಂದು ಅವರು ತಿಳಿಸಿದ್ದಾರೆ.
ಜೂನ್ ೧೪ ರಂದು ಕೇಂದ್ರ ಸಚಿವ ಸಂಪುಟವು ಭಾರತೀಯ ಯುವಕರಿಗೆ ಮೂರು ಸೇವೆಗಳಲ್ಲಿ ಸೇವೆ ಸಲ್ಲಿಸಲು ನೇಮಕಾತಿ ಯೋಜನೆ ಯನ್ನು ಅನುಮೋದಿಸಿತು.
ಅಗ್ನಿಪಥ್ ಸಶಸ್ತ್ರ ಪಡೆಗಳ ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ’ಅಗ್ನಿವೀರರು’ ಎಂದು ಕರೆಯಲಾಗುತ್ತೆ. ಅಗ್ನಿಪಥ್ ಯೋಜನೆ ದೇಶಭಕ್ತಿ ಮತ್ತು ಪ್ರೇರಿತ ಯುವಕರಿಗೆ ಸಶಸ್ತ್ರ ಸೇವೆ ಮಾಡಲು ಅವಕಾಶ ನೀಡುತ್ತದೆ. ನಾಲ್ಕು ವರ್ಷಗಳ ಅವಧಿಗೆ ಅಗ್ನಿಪಥ್ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.