ಅಗ್ನಿಪಥ್ ವೀರ ಸೈನಿಕರಿಗೆ ಸನ್ಮಾನ-ಮಹೆಬೂಬ್ ಮದ್ಲಾಪೂರ

ಮಾನ್ವಿ.ಅ.೦೬- ದೇಶದ ದೊಡ್ಡ ಸೈನಿಕ ತರಬೇತಿ ಕೇಂದ್ರವಾದ ನಾಸಿಕ್ ನಗರದಲ್ಲಿ ತರಬೇತಿ ಪಡೆದು ಅಗ್ನಿಪಥ್ ವೀರ ಸೈನಿಕ ಪಡೆಗೆ ಆಯ್ಕೆಯಾಗಿ ಮರಳಿ ತವರಿಗೆ ಆಗಮಿಸಿದ ವೀರ ಸೈನಿಕರಿಗೆ ಒಂದೇ ಮಾತರಂ ಯುವ ಸಂಘ ಮದ್ಲಾಪೂರ ವತಿಯಿಂದ ಸನ್ಮಾನಿಸಿ ಗೌರವಿಸಿದರು..
ತಾಲೂಕಿನ ಮದ್ಲಾಪೂರ ಗ್ರಾಮದಲ್ಲಿ ಒಂದೇ ಮಾತರಂ ಸಂಘದ ಅಧ್ಯಕ್ಷ ಮಹೆಬೂಬ್ ಮದ್ಲಾಪೂರ ಹಾಗೂ ಮಾಜಿ ಸೈನಿಕ ಆಂಜನೇಯ ಜಲ್ಲಿ ನೀರಮಾನವಿ ಮಾತನಾಡಿ ಭಾರತದ ಸೈನಿಕರ ಸಾಧನೆ ಹಾಗೂ ದೇಶರಕ್ಷಣೆಯ ಶ್ರಮದ ಕುರಿತು ಜನರಿಗೆ ಅರಿವು ಮೂಡಿಸಿದರು.
ನಂತರ ಆಗ್ನಿಪಥ್ ಸೈನೈಕ್ಕೆ ಆಯ್ಕೆಯಾಗಿರುವ ಅಮರೇಶ ಮದ್ಲಾಪೂರ, ಹುಸೇನಭಾಷ ಗೋನವಾರ, ಮಲ್ಲಿಕಾರ್ಜುನ ಹಿರೇಬಾದರದಿನ್ನಿ ಮಾತನಾಡಿ ಕಳೆದ ಏಳು ತಿಂಗಳಿನಿಂದ ನಿರಂತರ ಕಠಿಣ ಪರಿಶ್ರಮದಿಂದ ಬಹಳ ಇಷ್ಟದಿಂದ ನಾಸಿಕ್ ನಗರದಲ್ಲಿ ತರಬೇತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿ ಈ ಕ್ಷಣದಲ್ಲಿ ನಮ್ಮನ್ನು ಗೌರವ ಪೂರ್ವಕವಾಗಿ ಸ್ವಾಗತಿಸಿ ಸನ್ಮಾನಿಸಿದ ಸಂಘದ ಪದಾಧಿಕಾರಿಗಳಿಗೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ದೇಶಕ್ಕಾಗಿ ಪ್ರಾಣ ನೀಡುವುದಕ್ಕೂ ಸಿದ್ದ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರವಿಭೋವಿ, ಗ್ರಾ ಪಂ ಸದಸ್ಯ ಬಸವರಾಜ್ ದೊಡ್ಮನೆ, ಸಮಾಜ ಸೇವಕ ಕೆ.ಎಂ.ಭಾಷ, ಮಾರೆಪ್ಪ, ಶಿವುಮೂರ್ತಿ, ದೇವಣ್ಣ ಭಜಂತ್ರಿ, ಸಂಗಮೇಶ, ರಮೇಶ್, ಮಹ್ಮದ್ ಮ್ಯಾಕನಿಕ್, ಸಬ್ಜಲ್ಲಿ ಸಾಬ್, ಹಸೇನ್ ಖುರೇಷಿ, ಮೌನೇಶ್ ವಿಶ್ವಕರ್ಮ,ಶಿವುಲಿಂಗ, ಸದ್ದಾಂ, ಆಮದ್, ಮಹ್ಮದ್, ಬಂದೇನವಾಜ್ ಇನ್ನಿತರರು ಇದ್ದರು.