ಅಗ್ನಿಪಥ್: ದೆಹಲಿ ಕೋರ್ಟ್‌ನಲ್ಲಿ ಅರ್ಜಿಗಳ ವಜಾ

ನವದೆಹಲಿ, ಫೆ.೨೭- ಕೇಂದ್ರ ಸರ್ಕಾರ ಜಾರಿ ಮಾಡಿರುವ ಮಹತ್ವಾಂಕ್ಷಿ ’ಅಗ್ನಿಪಥ್’ ಯೋಜನೆ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
“ಅಗ್ನಿಪಥ್” ಯೋಜನೆ ರಾಷ್ಟ್ರೀಯ ಹಿತಾಸಕ್ತಿ ಯೋಜನೆ ಎಂದು ನ್ಯಾಯಾಲಯ ಹೇಳುವ ಮೂಲಕ ಕೇಂದ್ರ ಸರ್ಕಾರ ಜಾರಿ ಮಾಡಿದ ಮಹತ್ವಾ ಕಾಂಕ್ಷೆ ಯೋಜನೆಗೆ ಹಸಿರು ನಿಶಾನೆ ತೋರಿದೆ.
ಕಳೆದ ವರ್ಷ ಜೂನ್‌ನಲ್ಲಿ ಜಾರಿ ಮಾಡಿದ ಅಗ್ನಿಪಥ್ ಯೋಜನೆಯನ್ನು ಸಶಸ್ತ್ರ ಪಡೆಗಳಲ್ಲಿ ಯುವಕರ ನೇಮಕಾತಿ ಮಾಡಿಕೊಳ್ಳಲು ಜಾರಿ ಮಾಡಲಾಗಿತ್ತು.
ಅಗ್ನಿಪಥ್ ಯೋಜನೆ ವಿರೋಧಿಸಿ ಹಲವುಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಶಸ್ತ್ರ ಪಡೆಗಳು ಸುಸಜ್ಜಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
೧೭ ವರ್ಷ ಮತ್ತು ೨೧ ವರ್ಷ ವಯಸ್ಸಿನವರು ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅರ್ಹ ರಾಗಿರುತ್ತಾರೆ ಮತ್ತು ನಾಲ್ಕು ವರ್ಷಗಳ ಅವಧಿಗೆ ಸೇರ್ಪಡೆಯಾಗುತ್ತಾರೆ. ಆ ಬಳಿಕ ಶೇ. ೨೫ ರಷ್ಟು ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸಲು ಅರ್ಹ ರಾಗಿರುತ್ತಾರೆ ಎಂದು ಎನ್ನುವ ಕೇಂದ್ರ ಸರ್ಕಾರದ ವಾದವನ್ನು ಸಮ್ಮತಿಸಿದೆ.
ಅಗ್ನಿಪಥ್ ಯೋಜನೆ ಜಾರಿಯಾದ ನಂತದ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ವ್ಯಾಪಕ ವಾಗಿ ಕಲ್ಲು ತೂರಾಟ, ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು
ಇದರ ನಡುವೆಯೇ ಕೇಂದ್ರ ಸರ್ಕಾರ ಪ್ರತಿಭಟನೆಗೆ ಜಗ್ಗದೆ ಭಾರತೀಯ ವಾಯುಪಡೆ ಸೇರಿದಂತೆ ಸಶಸ್ತ್ರ ಪಡೆಗಳಿಗೆ ಅಗ್ನಿವೀರರನ್ನು ನೇಮಕ ಮಾಡಿ ಕೊಂಡು ತರಬೇತಿ ನೀಡಿ ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ. ಈ ಯೋಜನೆ ಯುವಕರನ್ನು ನಾಲ್ಕು ವರ್ಷದ ನಂತರ ನಿರುದ್ಯೋಗಿಗಳನ್ನಾಗಿ ಮಾಡಲಿದೆ ಎಂದು ಯುವ ಸಮುದಾಯ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು.