ಅಗ್ನಿಪಥ್ ಓಟ ಆಯೋಜನೆ    


ಸಂಜೆವಾಣಿ ವಾರ್ತೆ      
ಕುಕನೂರು, ಸೆ.04; ಅಗ್ನಿಪಥ್ಎಂಬ 01 (ಒಂದು) ಕಿಲೋಮಿಟರ್ ಓಟದ ಸ್ಪರ್ಧೆಯನ್ನು ಬನ್ನಿಕೊಪ್ಪ ಗ್ರಾಮದ  ಹೆಮ್ಮೆಯ ಅಮೃತಸರೋವರದ ಕೆರೆಯ ದಂಡೆಯ ಮೇಲೆ ದಿನಾಂಕ 2 ಸೆಪ್ಟಂಬರ್ 2022 ರಂದು ಮಾಜಿ ಹಾಗೂ ಹಾಲಿ ಸೈನಿಕರ ಸಂಘ ಬನ್ನಿಕೊಪ್ಪ ಮತ್ತು ಬನ್ನಿಕೊಪ್ಪದ ಯುವ ಮಿತ್ರರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು, ಅನೇಕ ಯುವಕ ಯುವತಿಯರು ಮತ್ತು ಆಸಕ್ತರು ಇದರಲ್ಲಿ ಪಾಲ್ಗೊಂಡಿದ್ದರು , ಈ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ  ದೇವಪ್ಪ ಬಂಡಿ,  ದ್ವಿತೀಯ ಸ್ಥಾನದಲ್ಲಿ ಮೌಲಾಸಾಬ್ ತಳಕಲ್ ಮತ್ತು ತೃತೀಯ ಸ್ಥಾನದಲ್ಲಿ ಕರಿಯಪ್ಪ ಗುತ್ತೂರ್ ವಿಜೇತರಾಗಿರುತ್ತಾರೆ. ಈ ಸಂದರ್ಭದಲ್ಲಿ ಮಾಜಿ ಹಾಗೂ ಹಾಲಿ ಸೈನಿಕ ಸಂಘದ ಅಧ್ಯಕ್ಷರಾದ ನಾಗರಾಜ ವೆಂ ವೆಂಕಟಾಪುರ್, ಮಾಜಿ ಸೈನಿಕರಾದ ಸಂಗಪ್ಪ ಚ ಗೊಂದಿ, ಹೈಸ್ಕೂಲಿನ ಶಿಕ್ಷಕ ವೃಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ವೃಂದ, ಗೋವಿಂದ್ ರಾಜ ಮಾಳೆಕೊಪ್ಪ, ಸೋಮಪ್ಪ ಆಲೂರ್, ಜಗದೀಶ್ ಯರಾಶಿ,  ಕೊಟ್ರೇಶ್ ಅಡವಳ್ಳಿ, ಸಿದ್ದು ಪ್ಯಾಟಿ, ಅಶೋಕ್ ಸಜ್ಜನ್, ಮೇಘರಾಜ, ಕೊಟ್ರೇಶ್, ಹಾಗೂ ಇನ್ನಿತರ ಊರಿನ ಯುವಕ ಮಿತ್ರರು ಗುರುಹಿರಿಯರು ಹಾಜರಿದ್ದು ಸ್ಪರ್ಧಾರ್ಥಿಗಳನ್ನು ಪ್ರೋತ್ಸಾಹಿಸಿದರು, ಮಾಜಿ ಸೈನಿಕರಾದ  ನಾಗರಾಜ ವೆಂಕಟಾಪುರ ಮಾತನಾಡಿ ಇದೊಂದು ಯುವಕರಲ್ಲಿ ಉತ್ಸಾಹ ಮೂಡಿಸುವ ಹಾಗೂ ದೇಶ ಕಟ್ಟುವ ಕೆಲಸ ಇಂತಹ ಇನ್ನು ಹೆಚ್ಚೆಚ್ಚು ಕಾರ್ಯಕ್ರಮಗಳನ್ನ ಬನ್ನಿಕೊಪ್ಪದ ಯುವಕರು ಹಮ್ಮಿಕೊಳ್ಳಲಿ ಎಂದು ಆಶಿಸಿದರು, ಸೋತವರು ಕುಗ್ಗ ಬೇಕಾಗಿಲ್ಲ ಗೆದ್ದವರು ಹಿಗ್ಗಬೇಕಾಗಿಲ್ಲ ಸೋಲೇ ಗೆಲುವಿನ ಸೋಪಾನ ಎಂದು ಹೇಳಿದರು.

Attachments area