ಅಗ್ನಿಕುಂಡ ಹಾಯ್ದ ಎಸ್ ಎಸ್ ಎಂ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬುಧವಾರ ದಾವಣಗೆರೆಯ ಹಳೇಪೇಟೆಯ ವೀರಭದ್ರೇಶ್ವರ ಅಗ್ನಿಕುಂಡ ಹಾಯ್ದರು.
ಪ್ರತಿ ವರ್ಷ ಮಲ್ಲಿಕಾರ್ಜುನ್ ಹಳೇಪೇಟೆಯ ವೀರಭದ್ರೇಶ್ವರ ಅಗ್ನಿಕುಂಡ ಹಾಯುವ ಮೂಲಕ ಭಕ್ತಿ ಸಮರ್ಪಣೆ ಮಾಡುವರು.
ಚುನಾವಣೆ ಇರಲಿ ಎಂತದ್ದೇ ಸಂದರ್ಭದಲ್ಲಿ ಹಳೇಪೇಟೆಯ ವೀರಭದ್ರೇಶ್ವರ ಅಗ್ನಿಕುಂಡ ಹಾಯುವುದನ್ನು ತಪ್ಪಿಸುವುದೇ ಇಲ್ಲ.
ಒಮ್ಮೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಹಳೇಪೇಟೆಯ ವೀರಭದ್ರೇಶ್ವರ ಅಗ್ನಿಕುಂಡಕ್ಕಾಗಿಯೇ ದಾವಣಗೆರೆಗೆ ಹಿಂತಿರುಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲೂ ಮಲ್ಲಿಕಾರ್ಜುನ್ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ದತಿ ತಪ್ಪಿಸಿಲ್ಲ.
ಮಗಳು ವರ್ಷಾ, ಮಗ ಶಿವು ಜೊತೆಗೆ ಈ ಬಾರಿಯೂ ಕೆಂಡ ಹಾಯ್ದರು. ವಿಧಾನ ಸಭಾ ಚುನಾವಣೆಯಲ್ಲಿ ಗೆಲುವಿಗೆ ಪ್ರಾರ್ಥಿ ಸಿದರು. ಡಾ. ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಜನರು ಬೆಂಬಲಿಸುವರು. ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಗೆಲ್ಲಲಿದೆ ಎಂದರು.